HomePage_Banner
HomePage_Banner
HomePage_Banner
HomePage_Banner

ಪೆರಾಜೆ ಕ್ರೀಡಾಕೂಟದಲ್ಲಿ ಸಂಪಾಜೆ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಬಹುಮಾನ

 

ಕೊಡಗು ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಪೆರಾಜೆ ಜ್ಯೋತಿ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಪೇರಾಜೆ ಜ್ಯೋತಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಆರಂಭಗೊಂಡ ಮಡಿಕೇರಿ ತಾಲೂಕು ಮಟ್ಟದ ಅಂತರ ಪ್ರಾಥಮಿಕ ಶಾಲಾ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟದಲ್ಲಿ ಕೊಡಗು ಸಂಪಾಜೆ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳು ಭಾಗವಹಿಸಿ ಹುಡುಗರ ವಾಲಿಬಾಲ್ ಪ್ರಥಮ, ಬಾಲಕಿಯರ ವಾಲಿಬಾಲ್ ಪ್ರಥಮ ಸ್ಥಾನವನ್ನು ಪಡೆಯಿತು, 4×100 ರಿಲೆಯಲ್ಲಿ ಬಾಲಕಿಯರು ಪ್ರಥಮ ಸ್ಥಾನ ಪಡೆದರು, ಬಾಲಕರ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನವನ್ನು ಅಕ್ಷಯ್ ಕುಮಾರ್ ಟಿ.ಬಿ, ಬಾಲಕಿಯರ ಉದ್ದ ಜಿಗಿತದಲ್ಲಿ ನವ್ಯಾ ಹೆಚ್.ಎಸ್ ಧ್ವಿತೀಯ ಸ್ಥಾನ, ಬಾಲಕಿಯರ ಎತ್ತರ ಜಿಗಿತದಲ್ಲಿ ಗ್ರೀಷ್ಮ ಟಿ.ಬಿ, ಬಾಲಕಿಯರ 600 ಮೀ ಓಟದಲ್ಲಿ ನವ್ಯ ಹೆಚ್.ಎಸ್ ಪ್ರಥಮ ಸ್ಥಾನ, 100 ಮೀ ಓಟದಲ್ಲಿ ಭವ್ಯಶ್ರೀ ಕೆ.ಜಿ ದ್ವಿತೀಯ ಸ್ಥಾನವನ್ನು ಪಡೆದು ಕೊಂಡರು. ಶಾಲಾ ಶಿಕ್ಷಕರಾದ ಚೇತನ್, ದೈಹಿಕ ಶಿಕ್ಷಕಿ ಶ್ರೀಮತಿ ಕವಿತಾ ರವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.