HomePage_Banner
HomePage_Banner
HomePage_Banner

ಸುಳ್ಯ ಗೃಹರಕ್ಷಕದಳ ಘಟಕ ಕ್ರಿಯಾಶೀಲ: ಡಾ. ಚೂಂತಾರು

 

ಸುಳ್ಯ ಜೂನಿಯರ್ ಕಾಲೇಜು ಬಳಿ ಇರುವ ಸುಳ್ಯ ಗೃಹರಕ್ಷಕದಳ ಹಾಗೂ ಪೌರರಕ್ಷಣಾದಳ ಕಚೇರಿಗೆ ಭೇಟಿ ಬೆಳಿಗ್ಗೆ  ಭೇಟಿ ನೀಡಿದ ಜಿಲ್ಲಾ ಕಮಾಡೆಂಟ್ ಡಾ| ಮುರಲೀ ಮೋಹನ್ ಚೂಂತಾರುರವರು ಗೃಹರಕ್ಷಕರ ಕವಾಯತು ವೀಕ್ಷಣೆ ನಡೆಸಿದರು. ಈ ವೇಳೆಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಸುಳ್ಯ ಘಟಕ ಅತ್ಯಂತ ಕ್ರಿಯಾಶೀಲ ಘಟಕ ಹಾಗೂ ಪ್ರಸ್ತುತ ವರ್ಷಗಳಲ್ಲಿ ಪ್ರಾಕೃತಿಕ ವಿಕೋಪ ಸಮಯದಲ್ಲಿ ಸಂಕಷ್ಟ ಕ್ಕೆ ಸಿಲುಕಿರುವ ಜನರನ್ನು ರಕ್ಷಿಸುವ ಮೂಲಕ ಜಿಲ್ಲಾ ಗೃಹರಕ್ಷಕ ಇಲಾಖೆ ಉತ್ತಮ ಕಾರ್ಯ ನಿರ್ವಹಿಸಿದೆ ಎಂದು ಹೇಳಿದರು.

ಕುಂದುಕೊರತೆಗಳ ಸಭೆ

ಈ ವೇಳೆಗೆ ಘಟಕದ ಕಚೇರಿಯಲ್ಲಿ ಪ್ರತಿ ಗೃಹರಕ್ಷಕರ ಅಹವಾಲು ಸ್ವೀಕರಿಸಿದರು

ಘಟಕದ ವತಿಯಿಂದ ವನಮಹೋತ್ಸವ

ಈ ವೇಳೆಗೆ ಸುಳ್ಯ ಘಟಕದ ಕಚೇರಿ ಆವರಣದಲ್ಲಿ ವನಮಹೋತ್ಸವ ನಡೆಯಿತು ಈ ವೇಳೆಗೆ ಮುಖ್ಯ ಅಥಿತಿಯಾಗಿ ಭಾಗವಹಿಸಿದ ಸುಳ್ಯ ಲಯನ್ಸ್ ಕ್ಲಬ್ ನ ಮಾಜಿ ಗವರ್ನರ್ ಲಯನ್ಸ್ ಎಂ.ಬಿ.ಸದಾಶಿವ ಮಾತನಾಡಿ ಪ್ರಸ್ತುತ ವರ್ಷಗಳಲ್ಲಿ ಸುಳ್ಯ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪ ಸಮಯದಲ್ಲಿ ಪರಿಣಾಮಕಾರಿ ಕರ್ತವ್ಯ ನಿರ್ವಹಿಸಿದ ಗೃಹರಕ್ಷಕರನ್ನು ಅಭಿನಂದಿಸಿದರು. ಹಾಗೂ ತುರ್ತು ಸಂಧರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನೂ ತೊರೆದು ಸಾರ್ವಜನಿಕ ಆಸ್ತಿ ಪಾಸ್ತಿ ರಕ್ಷಣೆ ಮಾಡಿದ ಗೃಹರಕ್ಷಕದಳದ ಕಾರ್ಯ ಶ್ಲಾಘನೀಯ ಗೃಹರಕ್ಷಕರು ಸಮಾಜದ ಆಸ್ತಿ ಎಂದು ನುಡಿದರು ಸುಳ್ಯ ಅರಣ್ಯ ಅಭಿವೃದ್ಧಿ ನಿಗಮದ ಮೆನೇಜರ್ ಲಯನ್ಸ್ ರಂಗನಾಥ್ ಮಾತನಾಡಿ ಮನಷ್ಯನ ಸ್ವಾರ್ಥಕ್ಕಾಗಿ ಪರಿಸರ ನಾಶವಾಗುತ್ತಿದೆ. ಪರಿಸರದ ಅಸೋಮತೋಲನದಿಂದ ನಮಗೆ ತೊಂದರೆ ನಮಗಾಗಿ ಪರಿಸರ ರಕ್ಷಣೆ ಅನಿವಾರ್ಯ ಗೃಹರಕ್ಷಕದಳದ ವನಮಹೋತ್ಸವದಂತಹ ಕಾರ್ಯಕ್ರಮ ಶ್ಲಾಘನೀಯ ಎಂದರು.

ಕಮಾಂಡೆಂಟ್ ರವರಿಗೆ ಸುಳ್ಯ ಘಟಕದಿಂದ ಸನ್ಮಾನ

ಇದೆ ಸಂಧರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಮುರಲೀ ಮೋಹನ್ ಚೂಂತಾರು ರವರು  ಬರೆದ ಸಂಜೀವಿನಿ ಎಂಬ ಪುಸ್ತಕ ಕ್ಕೆ ರಾಜ್ಯ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಅವರನ್ನು ಘಟಕದ ವತಿಯಿಂದ ಸುಳ್ಯ ಲಯನ್ಸ್ ಅಧಕ್ಷರಾದ ಗಂಗಾಧರ ರೈ ಹಾಗೂ ಎಂ.ಬಿ.ಸದಾಶಿವ ರವರು ಸನ್ಮಾನಿಸಿದರು ಈ ವೇಳೆಗೆ ಸುಳ್ಯ ಘಟಕಾಧಿಕಾರಿ ಜಯಂತ್ ಶೆಟ್ಟಿ , ಸುಳ್ಯ ಘಟಕದ ಸಾರ್ಜೆಂಟ್ ಅಬ್ದುಲ್ ಗಫೋರ್, ರಾಜೇಶ್.ಬಿ ಎನ್.ಆರ್.ಸೋಮನಾಥ್, ಅಶ್ವತ್ಥ್. ಕೆ,ಘಟಕದ 60ಗೃಹರಕ್ಷಕರು/ರಕ್ಷಕಿಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.