ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯಿಂದ ಆಯೋಜನೆ
ಕೆಎನ್ಎಸ್ಎಸ್ ಡೈರಿ ಬಿಡುಗಡೆ, ಡಾ. ದೇವಿಪ್ರಸಾದ್ ಕಾನತ್ತೂರ್ಗೆ ಸನ್ಮಾನ
ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಸುಳ್ಯ ಕರಯೋಗಂ ಇದರ ಆಶ್ರಯದಲ್ಲಿ ಓಣಂ ಆಚರಣೆ ಮತ್ತು ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮವು ಸುಳ್ಯದ ಗಿರಿದರ್ಶಿನಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ಪಿಡಬ್ಲ್ಯೂಡಿ ಗುತ್ತಿಗೆದಾರ ಕಾರಡ್ಕದ ಕೆ. ಗಂಗಾಧರನ್ ನಾಯರ್ ಉದ್ಘಾಟಿಸಿ, ಓಣಂ ಹಬ್ಬದ ಮಹತ್ವವನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಸಾಮಾಜಿಕ ಧುರೀಣ ಕೆ.ಕೆ.ವೇಣುಗೋಪಾಲ್ ಬಳಾಂತೋಡು ಮಾತನಾಡಿ, ಓಣಂ ಜಾತಿ, ಧರ್ಮವನ್ನು ಮೀರಿದ ಹಬ್ಬವಾಗಿದ್ದು, ಕೇರಳದ ಸಂಸ್ಕೃತಿಯನ್ನು ಸಾರುವ ದ್ಯೋತಕವಾಗಿದೆ ಎಂದು ಹೇಳಿದರು.
ಸುಳ್ಯ ಕರಯೋಗಂ ಅಧ್ಯಕ್ಷ ಚಂದ್ರಶೇಖರ್ ಉಬರಡ್ಕ ಅಧ್ಯಕ್ಷತೆ ವಹಿಸಿದ್ದರು.
ಗೌರವ ಡಾಕ್ಟರೇಟ್ ಪಡೆದ ಸಮಾಜದ ಸಾಧಕ, ಪಂಜ ಪಂಚಲಿಂಗೇಶ್ವರ ದೇಗುಲದ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರ್ರವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕೆಎನ್ಎಸ್ಎಸ್ ಸುಳ್ಯ ಕರಯೋಗಂ ಮಾಹಿತಿ ಇರುವ ಡೈರಿಯನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ರಿಯಾಲಿಟಿ ಶೋ ಪ್ರತಿಭೆ ವೈಷ್ಣವಿ, ಸ್ಕೌಟ್ ಪುರಸ್ಕಾರ ಪಡೆದ ಶ್ರೀಲಾಲ್, ಸಂಗೀತದಲ್ಲಿ ಡಿಸ್ಟಿಂಕ್ಷನ್ ಪಡೆದ ಶ್ರೀಲಯ, ಇಂಟಿಗ್ರೇಟೆಡ್ ಪಿಎಚ್ಡಿ ಗೆ ಆಯ್ಕೆಗೊಂಡ ಅಭಿಜ್ಞಾ ಕುತ್ತಮೊಟ್ಟೆಯವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮಂಗಳೂರು ಕರಯೋಗಂನ ರಾಜನ್ ನಂಬಿಯಾರ್ ಶುಭ ಹಾರೈಸಿದರು. ಸುಳ್ಯ ಕರಯೋಗಂ ಉಪಾಧ್ಯಕ್ಷ ಚಂದ್ರಶೇಖರ್ ನಾಯರ್ ಸುಬ್ರಹ್ಮಣ್ಯ, ಕೋಶಾಧಿಕಾರಿ ವಿಶ್ವನಾಥನ್ ನಾಯರ್, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ವೀಣಾ ಪ್ರಭಾಕರನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಆಶಿಕಾ ಚಂದ್ರಶೇಖರ್ ಪ್ರಾರ್ಥಿಸಿದರು. ಪೂರ್ವಾಧ್ಯಕ್ಷ ಪ್ರಭಾಕರನ್ ನಾಯರ್ ಸ್ವಾಗತ್ ಸ್ವಾಗತಿಸಿದರು. ಪೂರ್ವಾಧ್ಯಕ್ಷ ಬಾಲಕೃಷ್ಣ ನಾಯರ್ ಪ್ರಸ್ತಾವನೆಗೈದರು. ದುರ್ಗಾಕುಮಾರ್ ನಾಯರ್ಕೆರೆ ಅಭಿನಂದನಾ ಭಾಷಣಗೈದರು. ಕಾರ್ಯದರ್ಶಿ ಪ್ರಿಯರಂಜನ್ ನಾಯರ್ ವಂದಿಸಿದರು. ಶ್ರೀಮತಿ ಅಂಬಿಕಾ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕರಯೋಗಂ ಸದಸ್ಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ವೈವಿಧ್ಯ ಪ್ರದರ್ಶನಗೊಂಡಿತು. ಓಣಂನ ವಿಶೇಷ ಭೋಜನ ವ್ಯವಸ್ಥೆ ಮಾಡಲಾಯಿತು.