HomePage_Banner
HomePage_Banner
Breaking News

ಕೋಟೆಮುಂಡುಗಾರು: ಬೃಹತ್ ವೈದ್ಯಕೀಯ ಶಿಬಿರ, 660 ಜನ ಭಾಗಿ, 86 ಜನರಿಂದ ರಕ್ತದಾನ

ಜೆಸಿಐ ಬೆಳ್ಳಾರೆ ಮತ್ತು ಯುವ ಜೇಸೀ ವಿಭಾಗ ಬೆಳ್ಳಾರೆ
ಪ್ರಾಂತ್ಯ ‘ಇ’, ವಲಯ ೧೫ ಆಶ್ರಯದಲ್ಲಿ ಜೇಸೀ ಸಪ್ತಾಹದ ಅಂಗವಾಗಿ ಡಾ| ಎಸ್. ನಾರಾಯಣ ಭಟ್ ಸ್ಮರಣಾರ್ಥ ವಾಗಿ ಬೃಹತ್ ಉಚಿತ ವೈದ್ಯಕೀಯ, ರಕ್ತದಾನ ಶಿಬಿರ ಸೆ.15 ರಂದು ನಡೆದಿದ್ದು 660 ಜನ ಶಿಬಿರದ ಪ್ರಯೋಜನ ಪಡೆದರೆ, 86 ಜನ ರಕ್ತ ದಾನ ಮಾಡಿದ್ದಾರೆ.


ಶಿಬಿರಕ್ಕೆ ಚೂಂತಾರುDX ಸರೋಜಿನಿ ಭಟ್ ಪ್ರತಿಷ್ಠಾನ,
ವೆನ್ಲಾಕ್ ಆಸ್ಪತ್ರೆ ಮಂಗಳೂರು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೋಧಕ ಆಸ್ಪತ್ರೆ ಮಡಿಕೇರಿ,
ತಾಲೂಕು ಆಸ್ಪತ್ರೆ ಸುಳ್ಯ, ಪ್ರಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ವೇದಮಾಯು ಆಯುರ್ವೇದಿಕ್ ಮಂಗಳೂರು, ಹಿತಾಯು ಕ್ಲಿನಿಕ್ ಬೆಳ್ಳಾರೆ ಹಾಗೂ
ಸುರಕ್ಷಾ ದಂತ ಚಿಕಿತ್ಸಾಲಯ ಹೊಸಂಗಡಿ ಸಹಭಾಗಿತ್ವವಿತ್ತು.

ಕಾರ್ಯಕ್ರಮದಲ್ಲಿ ದಿ| ಡಾ. ನಾರಾಯಣ ಭಟ್ ಅವರ ಭಾವಚಿತ್ರಕ್ಕೆ ಶ್ರೀಮತಿ ಮಹಾಲಕ್ಷ್ಮೀ ನಾರಾಯಣ ಭಟ್ ಅನುಪಮ ಮೆಡಿಕಲ್ಸ್ ಬೆಳ್ಳಾರೆ ಇವರು ಪುಷ್ಪಾರ್ಚನೆ ಮಾಡಿದ ಬಳಿಕ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ಳಾರೆ ಇದರ ಅಧ್ಯಕ್ಷ ಲೋಕೇಶ್ ತಂಟೆಪ್ಪಾಡಿ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕ್ಷಯ ನಿಯಂತ್ರಣ ಅಧಿಕಾರಿ ಡಾ. ಬದ್ರುದ್ದೀನ್, ಗೃಹರಕ್ಷಕ ದಳ ಮಂಗಳೂರು ಇದರ ಕಮಾಂಡೆಂಟ್ ಡಾ.ಮುರಳಿಮೋಹನ ಚೂಂತಾರು, ಚರ್ಮರೋಗ ತಜ್ಞ ಡಾ. ನವೀನ್, ” ಮುಂದಿನ ನಿಲ್ದಾಣ” ಚಲನಚಿತ್ರ ನಾಯಕ ನಟ ಪ್ರವೀಣ್ ತೇಜ್, ಕಳಂಜ ಗ್ರಾ.ಪಂ ಅಧ್ಯಕ್ಷೆ ಯಶೋಧ ಮಣಿಮಜಲು, ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ವಿಶ್ವನಾಥ ರೈ, ಕಳಂಜ ಯುವಕ ಮಂಡಲ ಅಧ್ಯಕ್ಷ ಲಕ್ಷ್ಮೀಶ ಕಜೆಮೂಲೆ, ಮುಂಡುಗಾರು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಗಂಗಾಧರ ತೋಟದಮೂಲೆ, ಜೇಸಿಯ ನಿಕಟ ಪೂರ್ವಾಧ್ಯಕ್ಷ ಜಯರಾಮ ಉಮಿಕ್ಕಳ, ಜೆಜೆ ಅಧ್ಯಕ್ಷ ಸಾಗರ್ ಬೆಳ್ಳಾರೆ, ಕಾರ್ಯದರ್ಶಿ ಪ್ರವೀಣ್ ಉಪಸ್ಥಿತರಿದ್ದರು. ಮುರಳೀಧರ್ ಎಸ್ ಅವರು ಪ್ರಸ್ತಾವಿಕ ಮಾತುಗಳನ್ನಾಡಿದರು.


ಶಿಬಿರದಲ್ಲಿ ಪಾಲ್ಗೊಂಡವರು ಉಚಿತವಾಗಿ ವೈದ್ಯಕೀಯ, ಚರ್ಮರೋಗ, ಮಕ್ಕಳ ರೋಗ, ಸ್ತ್ರೀ ರೋಗ, ಗಂಟಲು, ಕಿವಿ, ಮೂಗು, ಕಣ್ಣು, ಇ.ಸಿ.ಜಿ., ಬಾಯಿ ಕ್ಯಾನ್ಸರ್, ಮಧುಮೇಹ, ರಕ್ತದ ಒತ್ತಡ ಮುಂತಾದ ತಪಾಸಣೆ ಮಾಡಸಿಕೊಂಡರು.
ಅಗತ್ಯ ಇದ್ದವರಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಶಿಬಿರದಲ್ಲಿ ಜಿಲ್ಲೆಯ ಖ್ಯಾತ ವೈದ್ಯರುಗಳು ಭಾಗವಹಿಸಿದ್ದರು.

ದಿ. ಡಾ‌. ನಾರಾಯಣ ಭಟ್ ನಡೆದಾಡುವ ದೇವರು‌. ಲೋಕೇಶ್ ತಂಟೆಪ್ಪಾಡಿ ಜೇಸೀ ಮೂಲಕ ವರ್ಷದಲ್ಲಿ ಮಾಡ ಬೇಕಾದ ಕೆಲಸವನ್ನು ಜೇಸಿ ಸಪ್ತಾಹದಲ್ಲಿ ವಾರದಲ್ಲಿ ಮಾಡಿ ಮುಗಿಸಿದ್ದಾರೆ – ವಿಶ್ವನಾಥ ರೈ

ರೋಗಿಗಳಿಗೆ ಪ್ರಥಮ ಆದ್ಯತೆ ನೀಡುತಿದ್ದ ದಿ. ಡಾ.ನಾರಾಯಣ ಭಟ್ ಹಲವರ ವೈದ್ಯಕೀಯಕ್ಕೆ ಪ್ರೇರಣಾ ಶಕ್ತಿ. – ಡಾ ಮುರಳಿ ಮೋಹನ್ ಚೂಂತಾರು.

ಅಂಕಿಅಂಶಗಳ ಪ್ರಕಾರ ದೇಶದಲ್ಲಿ 100 ಕ್ಕೆ % 27 ಕ್ಷಯರೋಗಿಗಳಿದ್ದಾರೆ. ಇದರಿಂದ 3 ನಿಮಿಷಕ್ಕೆ 2 ಜನ ಸಾಯುತ್ತಾರೆ . – ಡಾ. ಬದ್ರುದ್ದೀನ್

ದಿ.ಡಾ ನಾರಾಯಣ ಭಟ್ ರ ಮಗ ಮುರಳೀಧರ ಅವರಲ್ಲಿ ಕೂಡ ಸಮಾಜ ಮುಖಿ ಚಿಂತನೆ ಇದೆ.- ಚಿತ್ರನಟ ಪ್ರವೀಣ್ ತೇಜ್

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.