ಜೆಸಿಐ ಸುಳ್ಯ ಸಿಟಿಯ ಜೇಸಿ ಸಪ್ತಾಹದ ಸಮಾರೋಪ ಸಮಾರಂಭ ಸೆ.15 ಶಿವಕೃಪಾ ಕಲಾಮಂದಿರದಲ್ಲಿ ಘಟಕದ ಅಧ್ಯಕ್ಷ ಜೆಸಿ. ಸತೀಶ್ ಎಂ.ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಳೆದ ಒಂದು ವಾರದಿಂದ ನಡೆದ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ, ಸಾಧಕರಿಗೆ ಸನ್ಮಾನದೊಂದಿಗೆ ಸಮಾರೋಪಗೊಂಡಿತು.
ಸಾಧನಾ ಶ್ರೀ ಪ್ರಶಸ್ತಿ ಯು.ಸುಬ್ರಾಯ ಗೌಡ,ಕಲಾಶ್ರೀ ಪ್ರಶಸ್ತಿ ಕು.ಶುಭದ ಆರ್.ಪ್ರಕಾಶ್,ಯುವ ಸಾಧಕ ಪ್ರಶಸ್ತಿ ಕೃಷ್ಣಪ್ರಕಾಶ್ ಪೆರುಮುಂಡ ರವರಿಗೆ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷ ಅಶೋಕ್ ಚುಂತಾರ್,ವಲಯ ಉಪಾಧ್ಯಕ್ಷ ರಾಯನ್ ಉದಯ ಕ್ರಾಸ್ತಾ,ವಲಯ ಅಧಿಕಾರಿ ಮನಮೋಹನ್ ಬಳ್ಳಡ್ಕ,ಉಪಾಧ್ಯಕ್ಷ ವಿನಯ್ ರಾಜ್ ಮಡ್ತಿಲ,ನಿವೃತ ಮುಖ್ಯಶಿಕ್ಷಕರು ಚಂದ್ರಶೇಖರ್ ಭಟ್ ಕೊಡಪಾಲ,ವಲಯದ ಪ್ರಥಮ ಮಹಿಳೆ ಶೋಭಾ ಅಶೋಕ್ ಉಪಸ್ಥಿತರಿದ್ದರು. ನಿರ್ದೇಶಕ ಚಂದ್ರಶೇಖರ್ ಡಿ.ಎಸ್ ವೇದಿಕೆಗೆ ಆಹ್ವಾನಿಸಿ, ಘಟಕದ ಕಾರ್ಯದರ್ಶಿ ರಂಜಿತ್ ಪಿ.ಜೆ.ವಂದಿಸಿದರು.