HomePage_Banner
HomePage_Banner

ಕಳಗಿ ಹಂತಕರಿಗೆ ಸಾಮೂಹಿಕ ಬಹಿಷ್ಕಾರಕ್ಕೆ ಆಗ್ರಹ: ಸೆ.30ರಂದು ಸಂಪಾಜೆಯಿಂದ ಕೊಯನಾಡು ತನಕ ಜಾಗೃತಿ ಜಾಥಾ

 

 

 

 

 

 

 

 

 

 

ಧಾರ್ಮಿಕ, ರಾಜಕೀಯ, ಸಹ ಕಾರಿ, ಸಾಮಾಜಿಕ ಕ್ಷೇತ್ರದ ಮುಂದಾಳು ಬಾಲಚಂದ್ರ ಕಳಗಿ ಹಂತಕರಿಗೆ ಸಾಮೂ ಹಿಕ ಬಹಿಷ್ಕಾರ, ಕಳಗಿ ಹತ್ಯೆಯ ಕುರಿತು ಸಂಪೂರ್ಣ ತನಿಖೆ, ಹಾಗೂ ಈ ರೀತಿಯ ಸಮಾಜ ಘಾತುಕ ಘಟನೆಗಳು ನಡೆಯದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೆ.30ರಂದು ಜಾಗೃತಿ ಕಾಲ್ನಡಿಗೆ ಜಾಥಾವನ್ನು ಸಂಪಾಜೆಯಿಂದ ಕೊಯ ನಾಡು ತನಕ ನಡೆಸಲು ಸ್ಥಳೀಯರು ನಿರ್ಧರಿಸಿದ್ದಾರೆ. ಈ ಜಾಥಾದಲ್ಲಿ ಪೆರಾಜೆ, ಅರಂತೋಡು, ದ.ಕ. ಸಂಪಾಜೆ, ಕೊಡಗು ಸಂಪಾಜೆ, ಚೆಂಬು, ಮದೆನಾಡು ಗಳಿಂದ ಸುಮಾರು 2ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ಈ ಕುರಿತು ಚರ್ಚಿಸಲು ಪೂರ್ವ ಭಾವಿ ಸಭೆಯು ಸೆ.14ರಂದು ಕೊಯನಾಡಿನಲ್ಲಿ ನಡೆಯಿತು. ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಕುಮಾರ ಚೆದ್ಕಾರ್ ಅಧ್ಯಕ್ಷತೆ ವಹಿಸಿ, ಜಾಥಾದ ಕುರಿತು ವಿವರ ನೀಡಿದರು. ಸಭೆಯಲ್ಲಿ ಪ್ರಮುಖರಾದ ರಾಜಾರಾಮ ಕಳಗಿ, ಯಶೋಧರ ಬಿ.ಜೆ., ರವೀಂದ್ರ ಯು.ಪಿ., ಬಾಲಕೃಷ್ಣ ನೆಡ್ಚಿಲ್, ಲೋಕಯ್ಯ ನಡು ಬೆಟ್ಟು, ಉಲ್ಲಾಸ್ ಪೆರಾಜೆ, ಸುಂದರ ಬಿ.ಆರ್., ಕಾಸ್ಪಾಡಿ ಹೊನ್ನಪ್ಪ, ಓ.ಆರ್.ಮಾಯಿಲಪ್ಪ, ಕಿಶನ್ ಕಲ್ಯಾಳ, ಚಂದ್ರಶೇಖರ ದೇವರಗುಂಡ, ಜಗ ದೀಶ ಕೆದಂಬಾಡಿ, ಜಗದೀಶ್ ಪಿ.ಪಿ. ಮತ್ತಿತರರು ಭಾಗವಹಿಸಿದ್ದರು. ಮಧ್ಯಾಹ್ನ 2ಗಂಟೆಗೆ  ಸಂಪಾಜೆ ಗೇಟು ಬಳಿಯಿಂದ ಜಾಥಾ ಹೊರಟು ಕೊನಾಡು ಗಣಪತಿ ದೇವಸ್ಥಾನದ ಎದುರು ಸಮಾಪನಗೊಳ್ಳಲಿದೆ. ಅಲ್ಲಿ ಸಭೆ ನಡೆಯಲಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸಲಿದ್ದಾರೆ. ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ.
ಕಳಗಿ ಬಾಲಚಂದ್ರರ ಹತ್ಯೆ ಮಾಡಿದ ಸಮಾಜ ಘಾತುಕ ಶಕ್ತಿಗಳನ್ನು ಯಾರೂ ಸೇರಿಸಿಕೊಳ್ಳದೆ, ಅವರಿಗೆ ಸಮಾಹೀಕ ಬಹಿಷ್ಕಾರ ಹಾಕಬೇಕಿದೆ. ಮತ್ತು ಈ ಭಾಗದಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯಬಾರದು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಜಾಥಾ ಕೈಗೊಂಡಿzವೆ. ಒಂದು ತಿಂಗಳಿನಿಂದ ಇದಕ್ಕಾಗಿ ಸಿದ್ಧತೆಗಳು ನಡೆದಿದ್ದು, ಮೂರ್‍ನಾಲ್ಕು ಸಭೆಗಳು ಆಗಿವೆ. ನಾಳಿದ್ದು ಸಂಪಾಜೆಯಿಂದ ಕೊಯನಾಡುವರೆಗೆ ಜಾಥಾ ನಡೆದು, ಅಲ್ಲಿ ಸಭೆ ನಡೆಯುತ್ತದೆ. ಬಳಿಕ ಕಳಗಿ ಹಂತಕರ ಸಾಮೂಹಿಕ ಬಹಿಷ್ಕಾರದ ಜತೆ, ಕಳಗಿಯವರ ಹತ್ಯೆಯ ಕುರಿತು ಸಂಪೂರ್ಣ ತನಿಖೆ ನಡೆಸಿ ನಮಗೆ ನ್ಯಾಯ ಸಿಗಬೇಕು ಮತ್ತು ಕೃತ್ಯ ಎಸಗಿದವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ರಾಜ್ಯಾಧ್ಯಕ್ಷರ ಮೂಲಕ ಮತ್ತೊಮ್ಮೆ ಮನವಿ ಸಲ್ಲಿಸಲಿzವೆ ಎಂದು ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಕುಮಾರ ಚೆದ್ಕಾರ್ ತಿಳಿಸಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.