HomePage_Banner
HomePage_Banner

ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂತನ ಬ್ರಹ್ಮರಥ ಅ. 2 ರಂದು ಆಗಮನ

ಕಡಬದಿಂದ ವಾಹನ ಜಾಥಾ, ಕುಲ್ಕುಂದದಿಂದ ಪಾದಯಾತ್ರೆಯ ಸ್ವಾಗತ

ಸುಬ್ರಹ್ಮಣ್ಯದಲ್ಲಿ ನಡೆಯಿತು ಪೂರ್ವ ಸಿದ್ದತಾ ಸಭೆ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ನೂತನವಾಗಿ ಬ್ರಹ್ಮರಥ ನಿರ್ಮಾಣವಾಗಿ ಅ. 2ರಂದು ಬರುವ ಹಿನ್ನಲೆಯಲ್ಲಿ ಇದರ ಸ್ವಾಗತದ ಹಿನ್ನಲೆಯಲ್ಲಿ ಪೂರ್ವ ತಯಾರಿ ಸಭೆಯು ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು.


ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು ಅಧ್ಯಕ್ಷತೆ ವಹಿಸಿದ್ದರು.
ರಥವು ಸೆ.3೦ ರಂದು ಕೋಟೇಶ್ವರದಿಂದ ಹೊರಡಲಿದ್ದು ಅ.2 ಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಲಿದೆ. ಈ ಸಂದರ್ಭ ಮಾರ್ಗ ಮಧ್ಯೆ ಅಲ್ಲಲ್ಲಿ ರಥ ಸ್ವಾಗತಿಸುವ ಕಾರ್ಯಕ್ರಮ ಇರಲಿದ್ದು, ಕಡಬದಿಂದ ವಾಹನ ಜಾಥಾ ಮೂಲಕ ರಥ ಸಾಗಿ ಬರಲಿದೆ. ಕುಲ್ಕುಂದದಿಂದ ಪಾದಯಾತ್ರೆಯ ಮೂಲಕ ವಿಜೃಂಭಣೆಯ ಮೆರವಣಿಗೆಯಲ್ಲಿ ರಥ ಸಾಗಿ ಬರಲಿದ್ದು ಈ ಸಂದರ್ಭ ಬ್ಯಾಂಡ್ ವಾದ್ಯ, ವೇಷಭೂಷಣ, ಕಲಾವಿದರ ದಂಡು, ಕೇರಳದ ಚೆಂಡೆ ಕಲಾವಿದರ ತಂಡ ಇರಲಿದೆ.


ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದ್ದು ಸಾರ್ವಜನಿಕರಿಂದ, ಇಲಾಖೆಯವರಿಂದ ಸೂಕ್ತ ಸಲಹೆಗಳನ್ನು ಸ್ವೀಕರಿಸಲಾಯಿತು.

ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಬಾಲಕೃಷ್ಣ ಬಳ್ಳೇರಿ, ರವೀಂದ್ರ ನಾಥ ಶೆಟ್ಟಿ ಕೇನ್ಯ, ಮಹೇಶ್ ಕುಮಾರ್ ಕರಿಕ್ಕಳ, ರಾಜೀವಿ ಆರ್ ರೈ, ಮಾಧವ ದೇವರಗದ್ದೆ, ಕೃಷ್ಣಮೂರ್ತಿ ಭಟ್, ದಮಯಂತಿ ಕೂಜುಗೋಡು, ರಥ ದಾನಿಗಳಲ್ಲಿ ಓರ್ವರಾದ ಅಜಿತ್ ರೈ, ವಾಸ್ತು ಶಿಲ್ಪಿ ಪ್ರಸಾದ್ ಮುನಿಯಂಗಳ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಎಂ.ಎಚ್, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಪೇರಾಲು, ಕಛೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಮಾಸ್ಟರ್ ಪ್ಲಾನ್ ಸದಸ್ಯ ಶಿವರಾಮ ರೈ, ತಾ.ಪಂ ಸದಸ್ಯ ಅಶೋಕ್ ನೆಕ್ರಾಜೆ, ಸುಬ್ರಹ್ಮಣ್ಯ ಠಾಣೆಯ ಎ.ಎಸ್.ಐ ಚಂದಪ್ಪ, ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ಸುಬ್ರಹ್ಮಣ್ಯ ಗ್ರಾ.ಪಂ ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಪಿಡಿಒ ಮುತ್ತಪ್ಪ, ಕಾರ್ಯದರ್ಶಿ ಮೋನಪ್ಪ ಮತ್ತಿತರರು ಹಾಗೂ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯರು, ಇಲಾಖೆಯವರು, ಸಾರ್ವಜನಿಕರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.