HomePage_Banner
HomePage_Banner

ತೊಡಿಕಾನ ದೇಗುಲ: ತೀರ್ಥ, ಪರಿಸರ ಸಂರಕ್ಷಣೆಗೆ ಚಾಲನೆ

ಭಾವನೆಗಳು ಒಂದಾದಾಗ ಅಭಿವೃದ್ಧಿ: ಅಂಗಾರ

ಎಲ್ಲರ ಮನಸ್ಸು, ಭಾವನೆಗಳು, ಆಲೋಚನಾ ಶಕ್ತಿ ಒಂದೇ ಆಗಿರುವುದಿಲ್ಲ. ಭಾವನೆಗಳು ಒಂದಾದಾಗ ಮಾತ್ರ ಬದಲಾವಣೆ, ಅಭಿವೃದ್ಧಿ ಸಾಧ್ಯ ಎಂದು ಶಾಸಕ ಎಸ್.ಅಂಗಾರ ಹೇಳಿದರು.

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥನದ ಸೀಮೆಯ ಭಕ್ತರು ಕ್ಷೇತ್ರದ ತೀರ್ಥಗಳು ಹಾಗೂ ದೇವಸ್ಥಾನದ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿ ಇಟ್ಟುಕೊಳ್ಳುವ ಉದ್ಧೇಶದಿಂದ ವಾರಣಾಶಿ ಗುಂಡಿಯ ಅಭಿವೃದ್ಧಿ ಕೆಲಸ, ಪರಿಸರದಲ್ಲಿ ಗಿಡ ನೆಡುವ ಮತ್ತು ಅರಂತೋಡು ಪ್ರಾ.ಕೃ.ಪ.ಸ. ಸಂಘದ ವತಿಯಿಂದ ಬೋರ್‌ವೆಲ್‌ಗೆ ನೀರಿಂಗಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಯಾವುದೇ ಕೆಲಸಕ್ಕೆ ನಿರಂತರ ಪ್ರಯತ್ನ ಬೇಕು. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಪರಿಸರಕ್ಕೆ ಸಂಬಂಧಪಟ್ಟ ಅನೇಕ ಕಾರ್ಯಗಳನ್ನು ಜಾರಿಗೆ ತಂದಿದ್ದಾರೆ. ಜನರ ಸಹಕಾರದಿಂದಲೇ ಅವು ಯಶಸ್ವಿಯಾಗುತ್ತವೆ. ಈ ಕ್ಷೇತ್ರ ಸಂರಕ್ಷಣೆಗೆ ತನ್ನಿಂದಾದ ಸಹಕಾರ ನೀಡಲು ಬದ್ಧ ಎಂದರು.


ಸಮಿತಿ ಸಂಚಾಲಕ ಕಿಶೋರ್‌ಕುಮಾರ್ ಉಳುವಾರು ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಎಂಐಟಿಯ ಪ್ರೊ. ನಾರಾಯಣ ಶೆಣೈ ವಿಷಯ ಮಂಡಿಸಿದರು. ಸ್ಥಳದಾನಿ ರಾಜೇಂದ್ರಪ್ರಸಾದ್ ಮರುವಳ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೃಷಿಕ ವಸಂತ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ತಾ.ಪಂ. ಸದಸ್ಯೆ ಪುಷ್ಪಾ ಮೇದಪ್ಪ, ಎಪಿಎಂಸಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಗ್ರಾ.ಪಂ. ಸದಸ್ಯರು, ಸೀಮೆಯ ಭಕ್ತರು ಹಾಜರಿದ್ದರು. ಅರಂತೋಡು ತೊಡಿಕಾನ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಸಂತೊಷ್ ಕುತ್ತಮೊಟ್ಟೆ ಸ್ವಾಗತಿಸಿದರು. ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.