HomePage_Banner
HomePage_Banner

ಸುಬ್ರಹ್ಮಣ್ಯ : ಕುಮಾರ ಪರ್ವತಕ್ಕೆ ಚಾರಣ ಹೋದ ಯುವಕ ಕಾಣೆ

ಬೆಂಗಳೂರಿನಿಂದ 12 ಜನರ ಯುವಕರ ತಂಡವೊಂದು ಕುಮಾರ ಪರ್ವತ ಕ್ಕೆ ಚಾರಣಕ್ಕೆ ಬಂದಿದ್ದು, ಹಿಂತಿರುಗುವಾಗ ಸಂತೋಷ್ ಎಂಬ ಯುವಕ ಕಾಣೆಯಾಗಿದ್ದಾನೆ.


ಸೆ.13 ಕ್ಕೆ ಸುಬ್ರಹ್ಮಣ್ಯಕ್ಕೆ ಬಂದ ಬೆಂಗಳೂರಿನ 12 ಜನ ಯುವಕರ ತಂಡ ಮರುದಿನ ಸೆ.14 ರ ಬೆಳಗ್ಗೆ ಕುಮಾರ ಪರ್ವತಕ್ಕೆ ಚಾರಣ ಬೆಳೆಸಿದೆ. ಸೆ.15 ರಂದು ಹಿಂತಿರುಗಿದ್ದಾರೆ. ಆದರೆ ತಂಡದ ಸದಸ್ಯರೆಲ್ಲಾ ಹಿಂತಿರುಗಿದ್ದಾಗ ತಂಡದ ಸದಸ್ಯ ಬೆಂಗಳೂರಿನ ಅಂಜನ ಮೂರ್ತಿ ಎಂಬವರ ಮಗ ಸಂತೋಷ್ ( 25ವ. ) ಎಂಬವರು ದೇವರಗದ್ದೆ ಆಸುಪಾಸಿನಲ್ಲಿ ಕಾಣೆಯಾಗಿದ್ದಾರೆ. ನಿನ್ನೆಯಿಂದ ಹುಡುಕಾಡಿದರೂ ಸಂತೋಷ್ ಸಿಗದಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಇಂದು ದೂರು ದಾಖಲಾಗಿದೆ. ತಂಡದ ಸದಸ್ಯ ದರ್ಶನ್  ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾಣೆಯಾಗಿರುವ ವ್ಯಕ್ತಿ ಕಂಡು ಬಂದಲ್ಲಿ ತಕ್ಷಣ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಾಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.