HomePage_Banner
HomePage_Banner

ಸಮುದಾಯದ ಯಾರಿಗೇ ಅನ್ಯಾಯವಾದರೂ ಪ್ರತಿಭಟಿಸುತ್ತೇವೆ

 

ವೈಯಕ್ತಿಕವಾಗಿ ಯಾರ ಕುರಿತು ಮಾತನಾಡಿಲ್ಲ : ಎಂ.ವಿ.ಜಿ. ಸ್ಪಷ್ಟನೆ

ಡಾ| ಕುರುಂಜಿ ಅವಹೇಳನ, ಡಿ.ವಿ.ಯವರನ್ನು
ಇಳಿಸಿದಾಗಲೂ ಬೀದಿಗಿಳಿದಿದ್ದೇವೆ

“ನಮ್ಮ ಸಮುದಾಯದ ಯಾರಿಗೇ ಆದರೂ ಅನ್ಯಾಯವಾದಾಗ ನಾವು ಬೀದಿಗಿಳಿದು ಪ್ರತಿಭಟಿಸುತ್ತೇವೆ. ಈ ಹಿಂದೆ ಸುಳ್ಯದಲ್ಲಿ ಡಾ. ಕುರುಂಜಿಯವರಿಗೆ ಅವಹೇಳನ ಮಾಡಿದಾಗ, ಡಿ.ವಿ.ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗಲೂ ನಾವು ಪಕ್ಷ ನೋಡದೆ ಸಮುದಾಯದ ನಾಯಕರೆಂದು ಪ್ರತಿಭಟಿಸಿದ್ದೇವೆ. ಅದೇ ರೀತಿ ಈಗ ಡಿ.ಕೆ. ಶಿವಕುಮಾರ್ ಸಂಕಷ್ಟದಲ್ಲಿದ್ದಾಗಲೂ ಪ್ರತಿಭಟಿಸುತ್ತೇವೆ. ಕಡಬದ ಪ್ರತಿಭಟನೆಯಲ್ಲಿ ನಾವು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಿಲ್ಲ. ನಮ್ಮ ಮಾತಿಗೆ ನಾವು ಬದ್ಧರಾಗಿಯೇ ಇರುತ್ತೇವೆ. ಆದರೆ ಯುವಕರು ಮಾತನಾಡುವ ಮೊದಲು ಚರಿತ್ರೆಯನ್ನು ತಿಳಿದುಕೊಳ್ಳಬೇಕು“ ಎಂದು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ, ಗೌಡ ಸಮುದಾಯದ ಮುಂದಾಳು ಎಂ.ವೆಂಕಪ್ಪ ಗೌಡರು ಹೇಳಿದ್ದಾರೆ.


“ಯಾವುದೇ ಸಮುದಾಯದ ನಾಯಕನಿರಲಿ. ಅಧಿಕಾರದಲ್ಲಿರುವಾಗ ನಾವು ಅವರ ಜತೆಯಲ್ಲಿರುತ್ತೇವೆ. ಅದೇ ರೀತಿ ಸಂಕಷ್ಟದಲ್ಲಿರುವಾಗ ಕೂಡಾ ಜತೆಗಿರಬೇಕು. ನಮಗೆ ಸಂಬಂಧ ಇಲ್ಲ ಎಂದು ಹೇಳುವುದು ಸರಿಯಲ್ಲ. ಬರಲು ಆಗುವುದಿಲ್ಲದಿದ್ದರೆ ಸುಮ್ಮನೇ ಇರಬೇಕು. ಹೊರತು ವಿರುದ್ಧ ಹೇಳಿಕೆ ನೀಡುವುದೂ ಸರಿಯಲ್ಲ. ಅಷ್ಟಕ್ಕೂ ಕಡಬದಲ್ಲಿ ಡಿ.ಕೆ.ಶಿ. ಬೆಂಬಲದ ಪ್ರತಿಭಟನೆಯಲ್ಲಿ ಮಾತನಾಡುವಾಗ ಸಂಘಟನೆಯ ಮುಖ್ಯಸ್ಥನಾಗಿದ್ದು ಸಮುದಾಯದ ನಾಯಕನಿಗೆ ಅನ್ಯಾಯವಾದಾಗ ಆ ಬಗ್ಗೆ ವಿರೋಧಿಸದಿರುವ ಇಂತಹ ಅಧ್ಯಕ್ಷರು ಇದ್ದರೆಷ್ಟು -ಇಲ್ಲದಿದ್ದರೆಷ್ಟು ಎಂದು ಹೇಳಿದ್ದೇವೆ. ಹೊರತು ಬೇರೇನೂ ಹೇಳಿಲ್ಲ. ಆದರೆ ನನ್ನ ಮಾತನ್ನು ಯುವಕರು ಅಪಾರ್ಥ ಮಾಡಿಕೊಂಡು, ನನ್ನ ವಿರುದ್ಧ ಅಸಂಬದ್ದ ಹೇಳಿಕೆ ನೀಡುತ್ತಿದ್ದಾರೆ. ಇದು ಸರಿಯಲ್ಲಿ ಎಂದು ವೆಂಕಪ್ಪ ಗೌಡರು ಹೇಳಿದರು. 

“ಈ ಜಿಲ್ಲೆಯಲ್ಲಿ ಗೌಡ ಸಮುದಾಯಕ್ಕೆ ಹೆಸರು ತಂದು ಕೊಟ್ಟವರು ಡಾ| ಕುರುಂಜಿಯವರು. ಹಿಂದೆ ಅವರು ವಿರುದ್ಧ ಸುಳ್ಯದಲ್ಲಿ ಸಮುದಾಯವೊಂದು ಅವಹೇಳನದ ಮಾತನ್ನಾಡಿದ್ದಾಗ ಅದನ್ನು ನಾವು ಪ್ರತಿಭಟಿಸಿದ್ದೇವೆ. ಡಿ.ವಿ. ಸದಾನಂದ ಗೌಡರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅವರನ್ನು ಕೆಳಗಿಸಲಾಯಿತು. ಆಗ ಗೌಡ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ನಾವು ಪ್ರತಿಭಟಿಸಿದ್ದೇವೆ. ಇದೆಲ್ಲಾ ಆ ಯುವಕರಿಗೆ ನೆನಪಿಲ್ಲ. ಇದನ್ನು ಅವರು ತಿಳಿದುಕೊಳ್ಳಬೇಕು. ಅಷ್ಟೇ ಯಾಕೆ ಈ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದ ಸಂದರ್ಭ ಅರೆಭಾಷೆ ಅಕಾಡೆಮಿಗೆ ಗೌಡರೇತರ ಮೂವರನ್ನು ಸದಸ್ಯರನ್ನಾಗಿ ಸರಕಾರ ನೇಮಕ ಮಾಡಿದ ಸಂದರ್ಭ ಸುಳ್ಯದಲ್ಲಿ ಗೌಡ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ನಾವೇ ಹೋರಾಡಿzವೆ. ಬಳಿಕ ಆ ಮೂವರನ್ನು ಬದಲಾಯಿಸುವಲ್ಲಿಯೂ ಯಶಸ್ವಿಯಾಗಿzವೆ. ನಾವು ಎಲ್ಲಿಯೂ ರಾಜಕಾರಣ ಮಾಡಿಲ್ಲ. ಎಲ್ಲವನ್ನೂ ಸಮುದಾಯಕ್ಕಾಗಿ ಮಾಡಿದ್ದೇವೆ’ ಎಂದು ಹೇಳಿದ ಅವರು, “ನನ್ನ ವಿರುದ್ಧ ಮಾತನಾಡಿದ ಯುವಕರು ಭಾವನೆ ಒಂದು ಪಕ್ಷದ ಪರವಾಗಿ ಇದೆ ಎಂದು ಅವರ ಹೇಳಿಕೆಯಲ್ಲಿ ಬಾಸವಾಗುತ್ತದೆ“ ಎಂದು ಹೇಳಿದರು.
ನಾನು ಕಡಬ ತಾಲೂಕಿಗೆ ಸೇರಿದವ. ಅಲ್ಲಿಯ ಗೌಡ ಸಮುದಾಯ ಭವನವನ್ನು ನೋಡಿzವೆ. ಅದು ಅಭಿವೃದ್ಧಿಯಾಗಬೇಕಾಗಿದೆ. ಅಲ್ಲಿಯ ಯುವಕರು ಸಮುದಾಯ ಒಳ್ಳೆಯದಾಗಬೇಕೆಂಬ ಭಾವನೆಯಿಂದ ನನ್ನ ವಿರುದ್ಧ ಮಾತನಾಡಿದ್ದೇ ಆಗಿದ್ದರೆ ಅವರು ಸಮುದಾಯ ಭವನ ಅಭಿವೃದ್ಧಿಯ ಯೋಚನೆ ಮಾಡಲಿ. ಅವರು ಅಭಿವೃದ್ಧಿ ಪಡಿಸುವುದಾದರೆ ನಾನೇ ಮೊದಲು ೨೫ ಸಾವಿರ ರೂ ನೀಡುತ್ತೇನೆ. ಮುಂದೆ ರಾಜ್ಯದಲ್ಲಿ ನಮ್ಮ ಸರಕಾರ ಬಂದಾಗ ಅನುದಾನ ಒದಗಿಸಿ ಕೊಡುತ್ತೇನೆ“ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಧರ್ಮಪಾಲ ಕೊಯಿಂಗಾಜೆ ಇದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.