HomePage_Banner
HomePage_Banner

ಎನ್ನೆಂಸಿ: ರಕ್ಷಕ -ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ

ನೆಹರೂ ಮೆಮೋರಿಯಲ್ ಕಾಲೇಜಿನ 2019-20ನೇ ಶೈಕ್ಷಣಿಕ ಸಾಲಿನ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ಸೆ.12ರಂದು ಕಾಲೇಜಿನಲ್ಲಿ ಜರುಗಿತು. ಪ್ರಸ್ತುತ ಸಭೆಯಲ್ಲಿ ಭವಾನಿಶಂಕರ್ ಅಡ್ತಲೆಯವರನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ, ಪ್ರಕಾಶ್ ಅವರನ್ನು ಉಪಾಧ್ಯಕ್ಷರಾಗಿ, ಶ್ರೀಧರ್‌ರವರನ್ನು ಕಾರ್ಯದರ್ಶಿಯಾಗಿ, ವಿಷ್ಣುಪ್ರಶಾಂತ್‌ರವರನ್ನು ಖಜಾಂಚಿಯಾಗಿ ಹಾಗೂ ವೆಂಕಟ್ರಾಜ್ ಅವರನ್ನು ಜತೆ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಪ್ರಾಂಶುಪಾಲರಾದ ಡಾ. ಕೆ. ಗಿರಿಧರ ಗೌಡರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಾ.ಕೆ. ಪೂವಪ್ಪ ಗೌಡರವರು ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ವಿಷ್ಣುಪ್ರಶಾಂತ್ ವಂದಿಸಿದರು.ಸಂಜೀವ ಕೆ. ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.