HomePage_Banner
HomePage_Banner

ಕುಮಾರ ಪರ್ವತದಲ್ಲಿ ನಾಪತ್ತೆಯಾಗಿದ್ದ ಚಾರಣಿಗ ಕುಕ್ಕೆಯಲ್ಲಿ ಪತ್ತೆ- ತೀರ್ಥದ ಪೈಪ್ ಜಾಡು ಹಿಡಿದು ಬಚಾವ್ ಆದ ಬೆಂಗಳೂರು ಯುವಕ – ರಾತ್ರಿ ಇಡೀ ನಿದ್ದೆ ಮಾಡಿಲ್ಲ ಸರ್ ಬಂಡೆ ಮೇಲೆ ಕುಳಿತಿದ್ದೆ: ಸಂತೋಷ್

ಕುಮಾರ ಪರ್ವತಕ್ಕೆ ಟ್ರೆಕ್ಕಿಂಗ್ ಹೋಗಿದ್ದ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ತಮ್ಮ ಗುಂಪಿನಿಂದ ನಾಪತ್ತೆಯಾಗಿದ್ದರು. ಅವರು ಇಂದು ಕುಕ್ಕೆಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
ಬೆಂಗಳೂರಿನ ಗಾಯತ್ರಿನಗರದವರಾದ ಸಂತೋಷ್ ಎಂಬ 25ವರ್ಷದ ಯುವಕ, ಕುಮಾರ ಪರ್ವತಕ್ಕೆ ಟ್ರಕ್ಕಿಂಗ್ ಹೋಗಿದ್ದರು. 12ಚಾರಣಿಗರ ಗುಂಪಿನಲ್ಲಿದ್ದ ಸಂತೋಷ್ ತಮ್ಮ ಗುಂಪಿನಿಂದ ತಪ್ಪಿಸಿಕೊಂಡಿದ್ದರು. ಈ ಗುಂಪು ಇದೇ ಮೊದಲ ಬಾರಿಗೆ ಕುಮಾರಪರ್ವತಕ್ಕೆ ಟ್ರಕಿಂಗ್ ಹೋಗಿತ್ತು. ಬಹಳ ಕಠಿಣ ದಾರಿಯುಳ್ಳ ಕುಮಾರಪರ್ವತದಲ್ಲಿ ಚಾರಣ ಮಾಡುವಾಗ ಸಂತೋಷ್ ದಾರಿ ತಪ್ಪಿಸಿಕೊಂಡಿದ್ದರು. ಶನಿವಾರವೇ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿದ್ದ ಈ ತಂಡ ಭಾನುವಾರ ಮುಂಜಾನೆ ಚಾರಣ ಶುರುಮಾಡಿತ್ತು. ಆದರೆ, ಅವರು ಅರಣ್ಯ ಇಲಾಖೆಯ ಅನುಮತಿ ಪಡೆಯುವ ವೇಳೆಗೆ ಮಧ್ಯಾಹ್ನವಾಗಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಅನುಮತಿ ನೀಡಲು ನಿರಾಕರಿಸಿದ್ದರು. ಹೀಗಾಗಿ, ವಾಪಾಸ್ ಬಂದಿದ್ದ ತಂಡ ಸೆ.15ರಂದು ಮುಂಜಾನೆ ಮತ್ತೆ ಟ್ರಕ್ಕಿಂಗ್ ಹೊರಟಿದ್ದರು.
2ಗುಂಪುಗಳಾಗಿ ಟ್ರಕ್ಕಿಂಗ್ ಹೊರಟ ತಂಡದಲ್ಲಿ ಒಂದು ತಂಡ ಕುಮಾರಪರ್ವತದ ತುದಿ ತಲುಪುವಲ್ಲಿ ಯಶಸ್ವಿಯಾಗಿತ್ತು. ಇನ್ನೊಂದು ತಂಡ ಅರ್ಧದಲ್ಲೇ ಸುಸ್ತಾಗಿ ಗಿರಿಗದ್ದೆಯಲ್ಲಿರುವ ಭಟ್ಟರ ಮನೆಗೆ ಮರಳಿತ್ತು. ಕುಮಾರಪರ್ವತದ ತುದಿ ತಲುಪಿದ್ದ ತಂಡದಲ್ಲಿ ಸಂತೋಷ್ ಕೂಡ ಇದ್ದರು. ಅವರು ವಾಪಾಸ್ ಬರುವಾಗ ತಮ್ಮ ತಂಡದಿಂದ ತಪ್ಪಿಸಿಕೊಂಡಿದ್ದರು. ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದ ತಂಡದವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಿನ್ನೆ ಸಂಜೆಯವರೆಗೆ ಅರಣ್ಯ ಇಲಾಖೆ ಮತ್ತು ಪೊಲೀಸರ ತಂಡ ಹುಡುಕಾಡಿದರೂ ಸಂತೋಷ್ ಸಿಕ್ಕಿರಲಿಲ್ಲ.
ನಿನ್ನೆ ಕಳೆದುಹೋಗಿದ್ದ ಸಂತೋಷ್ ಕುಕ್ಕೆಯಲ್ಲಿ ಪತ್ತೆಯಾಗಿದ್ದಾರೆ. ಕುಮಾರಪರ್ವತದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೀರಿನ ಪೈಪ್ ಹಾಕಲಾಗಿತ್ತು. ಆ ಪೈಪ್‌ನಿಂದ ಬರುವ ನೀರನ್ನು ತೀರ್ಥಕ್ಕೆ ಬಳಸಲಾಗುತ್ತಿತ್ತು. ತೀರ್ಥದ ಪೈಪ್ ಜಾಡು ಹಿಡಿದು ಇಂದು ಸಂತೋಷ್ ಕುಕ್ಕೆಗೆ ಬಂದು ತಲುಪಿದ್ದಾರೆ.
ಇಡೀ ರಾತ್ರಿ ನಿದ್ದೆ ಮಾಡಿಲ್ಲ ಸರ್: ರಾತ್ರಿಯೆಲ್ಲ ನಿದ್ದೆ ಬಂದಿಲ್ಲ ಸರ್. ಕತ್ತಲು ಆವರಿಸಿದ ಕಾರಣ ಒಬ್ಬನೆ ಬಂಡೆ ಮೇಲೆ ಕುಳಿತಿದ್ದೆ. ಮೊಬೈಲ್‌ನಲ್ಲಿ ಚಾರ್ಜ್ ಕೂಡ ಹಿಂದಿನ ದಿನವೇ ಮುಗಿದಿತ್ತು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.