HomePage_Banner
HomePage_Banner
HomePage_Banner
HomePage_Banner

ಯೋಜನಾಧಿಕಾರಿ ಪದ್ಮಯ್ಯ ಗೌಡರಿಗೆ ಸಾಧಕ ಪ್ರಶಸ್ತಿ

 

ಶ್ರೀಕ್ಷೇತ್ರ ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆ ದಾವಣಗೆರೆ ಇಲ್ಲಿ ತಾಲ್ಲೂಕು ಯೋಜನಾಧಿಕಾರಿ ಯಾಗಿರುವ ಪದ್ಮಯ್ಯ ಗೌಡರಿಗೆ ಕಳೆದ ಆರ್ಥಿಕ ವರ್ಷದಲ್ಲಿ ಮಾಡಿದ ಗುರಿ ಮೀರಿದ ಸಾಧನೆಗಾಗಿ ಸಾಧಕ ಪ್ರಶಸ್ತಿ ಲಭಿಸಿದೆ.  ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಯೋಜನೆಯ ಅಧ್ಯಕ್ಷರಾಗಿರುವ ಡಾ। ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಯವರು ಸಾಧಕ ಪ್ರಶಸ್ತಿ ನೀಡಿ ಶುಭ ಹಾರೈಸಿದ್ದಾರೆ.

ದಾವಣಗೆರೆ ತಾಲೂಕಿನಲ್ಲಿ ಯೋಜನೆಯ ಜನ ಮಂಗಲ ಕಾರ್ಯಕ್ರಮದಡಿಯಲ್ಲಿ ಜನ ವಿಕಲಚೇತನರಿಗೆ ವೀಲ್ ಚೇರ್ ವಾಟರ್ ಬೆಡ್, ವಾಕ್ ಸ್ಟಿಕ್ಸ್, ಉಚಿತವಾಗಿ ವಿತರಿಸಲಾಗಿದೆ. ಸುಜ್ಞಾನನಿಧಿ ಶಿಷ್ಯ ವೇತನ ಕಾರ್ಯಕ್ರಮದಡಿಯಲ್ಲಿ ತಾಲ್ಲೂಕಿನ ಇನ್ನೂರೈವತ್ತು ಜನ ವಿದ್ಯಾರ್ಥಿಗಳಿಗೆ ವೃತ್ತಿಪರ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ಸಲುವಾಗಿ ಮಾಸಿಕ ಶಿಷ್ಯವೇತನ ವಿತರಿಸಲಾಗುತ್ತಿದೆ.

45 ಜನ ವೃದ್ಧರಿಗೆ ಮತ್ತು ನಿರ್ಗತಿಕರಿಗೆ ಮಾಶಾಸನ ವಿತರಣೆ, ಸ್ವಯಂ ಉದ್ಯೋಗ ಪೂರಕವಾಗಿ 200 ಜನರಿಗೆ ಆಟೋರಿಕ್ಷಾ ವಿಪರಿತ ವಿತರಿಸಲಾಗಿದೆ. ಸೋಲಾರ್ ಆಧಾರಿತ ಟೈಲರಿಂಗ್ ಮೆಷಿನ್ ರೊಟ್ಟಿ ಮಾಡುವ ಮೆಷಿನ್, ಮತ್ತು ಸೋಲಾರ್ ಆಧಾರಿತ ಜೆರಾಕ್ಸ್ ಯಂತ್ರಗಳನ್ನು 350 ಜನ ಫಲಾನುಭವಿಗಳಿಗೆ ವಿತರಿಸಿ ಸ್ವಯಂ ಉದ್ಯೋಗಕ್ಕೆ ಒತ್ತು ನೀಡಲಾಗಿದೆ. ಶಾಮಿಯಾನ ಬಾಡಿಗೆ ಅಂಗಡಿ ವ್ಯಾಪಾರ ನಡೆಸಲು ಸಹಕಾರ ನೀಡಲಾಗಿದೆ ಇದುವರೆಗೆ 9000 ಜನರು ಸ್ವ ಉದ್ಯೋಗ ಕೈಗೊಂಡಿದ್ದಾರೆ. ಇದಕ್ಕಾಗಿ ಯೋಜನೆಯಿಂದ ಇದುವರೆಗೆ 250 ಕೋಟಿ ರೂಪಾಯಿ ಪ್ರಗತಿನಿಧಿ ವಿತರಿಸಲಾಗಿದೆ.
5000 ಸಾಮಾಜಿಕ ಅರಣ್ಯ ಸಸಿ ನಾಟಿ ಮತ್ತು 127 ಧಾರ್ಮಿಕ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ, ಕಿರು ವಿಮಾ ಯೋಜನೆಯಾದ ಮೈಕ್ರೋಬಚತ್ ವಿಮೆಯನ್ನು 1250 ಜನರಿಗೆ ಮಾಡಿಸಿ ಪಾಲಿಸಿ ಒದಗಿಸಲಾಗಿದೆ. ಜೀವನ್ ಮಧುರ ಪಾಲಿಸಿ ನವೀಕರಣ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆರ್ಥಿಕ ಸೇರ್ಪಡೆಯಲ್ಲಿ ತಾಲ್ಲೂಕಿನ23150 ಜನರ ಜನ್ ಧನ್ ಖಾತೆ ತೆರೆಯಲಾಗಿದ್ದು, ಅಟಲ್ ಪಿಂಚಣಿ ಯೋಜನೆ, APY ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, PMSBY, ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ PMJJBY ಇನ್ನಿತರ ಕೇಂದ್ರ ಸರಕಾರದ ಸಾಮಾಜಿಕ ಭದ್ರತೆ ಕಾರ್ಯಕ್ರಮಗಳನ್ನು ಸ್ವಸಹಾಯ ಸಂಘದ ಸದಸ್ಯರಿಗೆ ತಲುಪಿಸಿ ಸಾಧನೆ ಮಾಡಲಾಗಿದೆ.

ದಾವಣಗೆರೆ ನಗರ ಮತ್ತು ಹೊರವಲಯಗಳಲ್ಲಿ ಮೂವತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ ಮಾಡಲಾಗುತ್ತಿದ್ದು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಳ ಯಶಸ್ವಿ ಅನುಷ್ಠಾನ ಹಾಗೂ ನಿರ್ವಹಣೆ ಮಾಡಿ ಗುರಿ ಮೀರಿದ ಸಾಧನೆಗಾಗಿ ಸಾಧಕ ಪ್ರಶಸ್ತಿ ನೀಡಲಾಗಿದೆ.
ಪದ್ಮಯ ಗೌಡ ಸಿ.ಎಚ್. ಅವರು ಸುಳ್ಯದ ಕೇರ್ಪಳ ನಿವಾಸಿಯಾಗಿದ್ದು, ಗ್ರಾಮಾಭಿವೃದ್ಧಿ ಯೋಜನೆಗೆ ಸೇರುವ ಮೊದಲು ಸುಳ್ಯದಲ್ಲಿ ಪತ್ರಕರ್ತರಾಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.