HomePage_Banner
HomePage_Banner

ಎಸ್‌ಸಿ ಎಸ್‌ಟಿ ಕಲ್ಯಾಣ ಸಮಿತಿಗೆ ಶಾಸಕ ಅಂಗಾರ ನೇಮಕ

 

ಅಂಗಾರರು ಒಪ್ಪಿಕೊಳ್ಳುವರೇ?

ರಾಜ್ಯ ವಿಧಾನಸಭೆಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಗೆ ಸುಳ್ಯ ಕ್ಷೇತ್ರದ ಶಾಸಕ ಎಸ್. ಅಂಗಾರ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.


ಶಾಸಕ ಅಂಗಾರರ ಸಹಿತ 6 ಮಂದಿ ಶಾಸಕರನ್ನು ವಿವಿಧ ಸಮಿತಿಗಳ ಅಧ್ಯಕ್ಷರನ್ನಾಗಿ ವಿಧಾನಸಭೆಯ ಸ್ಪೀಕರ್ ನೇಮಿಸಿದ್ದಾರೆ. ಈ ನೇಮಕದ ಕುರಿತಂತೆ ಇಂದು ಬೆಳಿಗ್ಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿದಾಡುತ್ತಿದೆ. ಸುಳ್ಯದ ಬಿಜೆಪಿ ಮೀಡಿಯಾ ಗ್ರೂಫ್‌ನಲ್ಲೂ ಈ ಮಾಹಿತಿ ಹಾಕಲಾಗಿದೆ. ಇದನ್ನು ಹಲವು ಬಿಜೆಪಿ ಮುಖಂಡರು ಸ್ಟೇಟಸ್ ಕೂಡಾ ಹಾಕಿಕೊಂಡಿದ್ದಾರೆ.
ಈ ಕುರಿತಂತೆ ಮಾಹಿತಿ ಪಡೆಯಲು ಶಾಸಕ ಅಂಗಾರರು ಸಂಪರ್ಕಕ್ಕೆ ಲಭ್ಯರಾಗುತ್ತಿಲ್ಲ. ನೇಮಕ ಕುರಿತಂತೆ ಶಾಸಕರಿಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಒಂದು ವೇಳೆ ನೇಮಕವಾದರೂ ಅವರು ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಶಾಸಕರ ಆಪ್ತಮೂಲಗಳು ತಿಳಿಸಿವೆ.
ಮಂಗಳೂರಿನ ನಂಬಲರ್ಹ ಮೂಲದಿಂದ ಈ ಮಾಹಿತಿ ಬಂದಿದೆ. ಆದೇಶ ಪ್ರತಿ ಲಭ್ಯವಾಗಿಲ್ಲ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ಈ ಕುರಿತಂತೆ ವಿಧಾನಸಭೆಯಿಂದ ಮಾಹಿತಿ ಪಡೆದ ಸುದ್ದಿ ವೆಬ್‌ಸೈಟ್‌ಗೆ “ಇದು ಸರಕಾರ ನೇಮಿಸುವ ಯಾವುದೇ ಹುದ್ದೆಯಲ್ಲ.
ಸ್ಪೀಕರ್ ನೇಮಿಸುವ ವಿಧಾನಸಭೆಯ ಸಾಂವಿಧಾನಿಕ ಹುದ್ದೆ. ಇದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಒಪ್ಪಿಕೊಳ್ಳದಿದ್ದರೆ ಈ ಕುರಿತು ಸ್ಪೀಕರ್‌ಗೆ ಪತ್ರ ನೀಡಬೇಕಾಗುತ್ತದೆ ಎಂಬ ಮಾಹಿತಿ ಲಭಿಸಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.