HomePage_Banner
HomePage_Banner

ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘದ ಮಹಾಸಭೆ


ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘದ ಮಹಾಸಭೆಯು ಸೆ. 21 ರಂದು ಸಂಘದ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳರವರ ಅಧ್ಯಕ್ಷತೆಯಲ್ಲಿ ನಡೆಯಿತು.

ವರದಿ ಸಾಲಿನಲ್ಲಿ ಸಂಘವು ಒಟ್ಟು 55,21,27, 523 ರೂ ವ್ಯವಹಾರ ನಡೆಸಿ ಒಟ್ಟು ರೂ. 13,46,394 ಲಾಭಗಳಿಸಿ ಸದಸ್ಯರಿಗೆ 5.5% ಡಿವಿಡೆಂಡ್ ವಿತರಿಸಲಾಗುವುದು. ಮುಂದಿನ ದಿನಗಳಲ್ಲಿ ಸುಸಜ್ಜಿತ ಗೋದಾಮು ನಿರ್ಮಿಸುವ ಯೋಜನೆಯನ್ನು ಮಾಡಿದ್ದೇವೆ. ಸಂಘದಿಂದ ಸಿಗುವಂತ ಎಲ್ಲಾ ಸೌಲಭ್ಯಗಳನ್ನು ಸದಸ್ಯರು ಸದುಪಯೋಗಪಡಿಸಿಕೊಳ್ಳಿ ಎಂದು ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಹೇಳಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪುರುಷೋತ್ತಮ ಶೆಟ್ಟಿ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ಸಂತೋಷ್ ಜಾಕೆ, ನಿರ್ದೇಶಕರುಗಳಾದ ಜಾಕೆ ಮಾಧವ ಗೌಡ, ಬಿ. ಜಯರಾಮ, ಅಣ್ಣಪ್ಪ ನಾಯ್ಕ ಬಿ.ಹೆಚ್, ಕುಲ್ ದೀಪ್ ಎಸ್. ಸುತ್ತುಕೋಟೆ, ದಿನೇಶ್ ಪಿ, ಶ್ರೀಮತಿ ಬಿ. ಮೂಕಾಂಬಿಕಾ, ಶ್ರೀಮತಿ ಕೆ ಭಾಗೀರಥಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಪುಷ್ಪಾವತಿ ಪ್ರಾರ್ಥಿಸಿದರು. ವರದಿ ಸಾಲಿನಲ್ಲಿ ಮೃತಪಟ್ಟ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.