HomePage_Banner
HomePage_Banner
Breaking News

ಕೇರ್ಪಡದಲ್ಲಿ ಸೆ. 28 ರಿಂದ ಅ. 8ರವರೆಗೆ ನವರಾತ್ರಿ ಉತ್ಸವ

 ಮಹಾ ಸಂಪ್ರೋಕ್ಷಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭೆ

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪೂರ್ವ ಸಂಪ್ರದಾಯದಂತೆ ಸೆ.28 ರಿಂದ ಅಕ್ಟೋಬರ್ 8ರ ವರೆಗೆ ನವರಾತ್ರಿ ಉತ್ಸವ ನಡೆಯಲಿರುವುದು.

ಪ್ರತಿದಿನ ಸಂಜೆ ಭಜನಾ ಕಾರ್ಯಕ್ರಮ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಲೆಕ್ಕಾಡಿ ಮಕ್ಕಳ ಮನೆ ಮಕ್ಕಳಿಂದ ನೃತ್ಯ, ವಿವಿಧ, ಅಂಗನವಾಡಿ ಕೇಂದ್ರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ ಬಯಲಾಟ, ಮಾಯಾ ಜಾದೂ ಪ್ರದರ್ಶನ, ನೃತ್ಯ ವೈವಿಧ್ಯ, ಭಕ್ತಿ ಸಂಗಮ, ಹರಿಕಥಾ, ಸತ್ಸಂಗ, ನೃತ್ಯ ಸಂಭ್ರಮ, ಗೀತಾ ಸಾಹಿತ್ಯ ಸಂಭ್ರಮ, ಸಂದೇಶದ ಸಂತೋಷ, ವಿಶೇಷ ಭಕ್ತಿ ಭಾವ ಸಂಗೀತ, ಅದ್ಭುತವಾದ ವಿಶೇಷವಾದ ತಾಲೀಮು ಪ್ರದರ್ಶನ ನಡೆಯಲಿರುವುದು.

ಅ. 8 ರಂದು ಬೆಳಿಗ್ಗೆ ಗಣಪತಿ ಹೋಮ, ಸಿಯಾಳಾಭಿಷೇಕ, ಅಕ್ಷರ ಅಭ್ಯಾಸ, ಧಾರ್ಮಿಕ ಸಭಾ ಕಾರ್ಯಕ್ರಮ, ಮಹಾ ಸಂಪ್ರೋಕ್ಷಣೆ ಮತ್ತು ಮಹಾ ಅನ್ನಸಂತರ್ಪಣೆ ನಡೆಯಲಿರುವುದು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೆದಂಬಾಡಿ ಶ್ರೀರಾಮ ಮಂದಿರದ ಅಧ್ಯಕ್ಷ ಕಡಮಜಲು ಸುಭಾಷ್ ರೈಯವರು ಧಾರ್ಮಿಕ ಉಪನ್ಯಾಸ ನೀಡಲಿರುವರು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಾಲಕೃಷ್ಣ ಗೌಡ ಹೇಮಳ ಮತ್ತು ಭೂವಿಜ್ಞಾನಿ ಕೆ. ಸಂಧ್ಯಾ ಕುಮಾರಿಯವರನ್ನು ಸನ್ಮಾನಿಸಲಾಗುವುದು.

ಜಿಲ್ಲಾ ಬಿಜೆಪಿ ಘಟಕದ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಎ.ಪಿ., ಬೆಂಗಳೂರು ಉದ್ಯಮಿ ಹಾಗೂ ಕೃಷಿಕ ಅಶೋಕ್ ಕೆದ್ಲಾಯ, ಮುರುಳ್ಯ ಸೊಸೈಟಿ ಅಧ್ಯಕ್ಷ ವಸಂತ ಎಚ್., ಚಲನಚಿತ್ರ ನಟ ಗಿರೀಶ್ ಹೆಗ್ಡೆ ಉಪಸ್ಥಿತರಿರುವರು. ಮಧ್ಯಾಹ್ನದ ಬಳಿಕ ಧೀಶಕ್ತಿ ಯಕ್ಷ ಬಳಗದವರಿಂದ ಯಕ್ಷಗಾನ ತಾಳಮದ್ದಳೆ, ಪ್ರತಿದಿನ ಕಲ್ಮಡ್ಕ ಕಾಚಿಲ ಶ್ರೀ ಮಹಾವಿಷ್ಣು ಚೆಂಡೆ ಬಳಗದವರಿಂದ ಉತ್ಸವದ ದಿನದಂದು ಚೆಂಡೆ ಸೇವೆ ನಡೆಯಲಿರುವುದು.

(ವರದಿ : ಎ ಎಸ್ಎಸ್ ಅಲೆಕ್ಕಾಡಿ)

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.