ಕುಕ್ಕೆ ಸುಬ್ರಹ್ಮಣ್ಯ : ಅ.2 ರಂದು ಬ್ರಹ್ಮರಥ ಆಗಮನ ಹಿನ್ನೆಲೆ ವಿವಿಧ ಸಮಿತಿಗಳ ಕಾರ್ಯಸೂಚಿ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 


ನೂತನ ಬ್ರಹ್ಮರಥ ಆಗಮಿಸುವ ಹಿನ್ನೆಲೆಯಲ್ಲಿ ರಚಿಸಿದ ವಿವಿಧ ಸಮಿತಿಗಳ ಕಾರ್ಯಸೂಚಿ ಸಭೆ ಸೆ.23 ರಂದು ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭ ಆಡಳಿತ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ
ಅವರು ರಥ ಆಗಮನದ ವೇಳೆ ಆರತಿ ಕೊಡಲು ಅವಕಾಶವಿದ್ದು, ರಥದೊಂದಿಗೆ ಶ್ರೀ ದೇವಳದ ಇಬ್ಬರು ಪುರೋಹಿತರು ಇರುತ್ತಾರೆ ಇವರು ಭಕ್ತರು ನೀಡಿದ ಆರತಿಯನ್ನು ರಥಕ್ಕೆ ಅರ್ಪಿಸಲಿದ್ದಾರೆ ಎಂದರು. ೨೦ ಜನ ದೇವಳದ ಭದ್ರತಾ ಸಿಬ್ಬಂಧಿಗಳು ರಥದ ಸುತ್ತ ಇರುತ್ತಾರೆ. ರಥವು ಹಾದು ಬರುವ ಹಾದಿಯಲ್ಲಿ ಸಿಗುವ ದೇವಸ್ಥಾನದ ಮುಂಭಾಗದಲ್ಲಿ ರಥವನ್ನು ನಿಲ್ಲಿಸಿ ತೆಂಗಿನಕಾಯಿ ಒಡೆಯಲಾಗುತ್ತದೆ. ಅಲ್ಲದೆ ರಥಕ್ಕೆ ಆರತಿ ಅರ್ಪಣೆ ಮಾಡಿದ ಭಕ್ತರಿಗೆ ಮೂಲಮೃತ್ತಿಕಾ ಪ್ರಸಾದವನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಬ್ರಹ್ಮರಥವನ್ನು ಶಿಲ್ಪಿಗಳು ವಿವಿಧ ವೈಧಿಕ ವಿದಿವಿಧಾನಗಳ ಮೂಲಕ ಸೆ.೨೯ಕ್ಕೆ ಬಿಟ್ಟು ಕೊಡುತ್ತಾರೆ.ಸೆ.೩೦ರಂದು ಬೆಳಗ್ಗೆ ೮.೩೦ಗೆ ರಥವು ಕೋಟೇಶ್ವರದಿಂದ ಹೊರಡುತ್ತದೆ ಎಂದರು.
ನಂತರ ಕೋಟದಲ್ಲಿ ಸಾರ್ವಜನಿಕರಿಂದ ಪೂಜೆ ಮತ್ತು ಕುಣಿತ ಭಜನೆ ನೆರವೇರಲಿದೆ. ಬಳಿಕ ಸಾಲಿಗ್ರಾಮ, ಉಡುಪಿ, ಕಾಪು, ಮುಲ್ಕಿ,ಬಪ್ಪನಾಡು, ಸುರತ್ಕಲ್‌ಗಳಲ್ಲಿ ಪೂಜೆ ಮೂಲಕ ಅಲ್ಲಿನ ಭಕ್ತರು ಬ್ರಹ್ಮರಥವನ್ನು ಸ್ವಾಗತಿಸಲಿದ್ದಾರೆ. ಮಂಗಳೂರಿಗೆ ಆಗಮಿಸಿ ಕದ್ರಿ ಪೋಲಿಸ್ ಠಾಣಿ ಬಳಿ ರಥ ತಂಗಲಿದೆ.ಅ.೧ರಂದು ಮಂಗಳೂರಿನಿಂದ ಹೊರಟು ಬಿ.ಸಿ.ರೋಡು, ಕಲ್ಲಡ್ಕ, ಮಾಣಿ, ಉಪ್ಪಿನಂಗಡಿ, ಆಲಂಕಾರು ಮೂಲಕ ಬಲ್ಯಕ್ಕೆ ಆಗಮಿಸಿ ಬಲ್ಯ ದೇವಳದ ಸಮೀಪ ರಥವು ತಂಗಲಿದೆ.ಬಲ್ಯದಿಂದ ಬೆಳಗ್ಗೆ ೧೦ಗಂಟೆಗೆ ಹೊರಟು ಕಡಬಕ್ಕೆ ತಲುಪಲಿದೆ.ನಂತರ ಅಲ್ಲಿಂದ ವಾಹನ ಜಾಥಾದ ಮೂಲಕ ರಥವನ್ನು ಬಿಳಿನೆಲೆ, ಕೈಕಂಬ ಮೂಲಕ ಕರೆತರಲಾಗುತ್ತದೆ. ಕುಲ್ಕುಂದದಿಂದ ಬೃಹತ್ ಮೆರವಣಿಗೆಯೊಂದಿಗೆ ಬ್ರಹ್ಮರಥವು ಕುಕ್ಕೆಸುಬ್ರಹ್ಮಣ್ಯಕ್ಕೆ ಬ್ರಹ್ಮರಥವು ಪುರಪ್ರವೇಶ ಮಾಡಲಿದೆ ಎಂದು ಸಭೆಯಲ್ಲಿ ಶ್ರೀ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್ ಹೇಳಿದರು.
ಕೈಕಂಬದಿಂದ ಸುಬ್ರಹ್ಮಣ್ಯದ ತನಕ ಸುಮಾರು ೭ ಕಿ.ಮೀ ದೂರದ ತನಕ ರಸ್ತೆಯ ಇಕ್ಕೆಲಗಳಲ್ಲಿ ತಳಿರು ತೋರಣ, ಕೇಸರಿ ಬಂಟಿಂಗ್ಸ್ ಮತ್ತು ಭಗವಾಧ್ವಜವನ್ನು ಹಾಕಿ ಸಿಂಗರಿಸಲಾಗುವುದು.ಅಲ್ಲದೆ ಅಲ್ಲಲ್ಲಿ ವಿವಿಧ ವಿನ್ಯಾಸಗಳ ಗೋಪುರಗಳನ್ನು ರಸ್ತೆಯ ಬದಿಯಲ್ಲಿ ಅಳವಡಿಸಲಾಗುವುದು.ಕುಲ್ಕುಂದದಿಂದ ಆರಂಭವಾಗುವ ಮೆರವಣಿಗೆಗೆ ೧೦ಕ್ಕೂ ಅಧಿಕ ಸ್ತಬ್ದಚಿತ್ರಗಳು, ೪೦ಜನ ಕಲಾವಿದರಿಂದ ಆಕರ್ಷಕ ಸಿಂಗಾರಿ ಮೇಳ, ಚಿಲಿಪಿಲಿಗೊಂಬೆ, ಹುಲಿವೇಷ ತಂಡ, ವೀರಗಾಸೆ, ೨೦ಕ್ಕೂ ಅಧಿಕ ತಂಡಗಳಿಂದ ಕುಣಿತ ಭಜನೆ, ವೇದಘೋಷ, ವಿಶೇಷ ಕೊಡೆಗಳು ಮೆರುಗು ನೀಡಲಿದೆ.ಎಲ್ಲಾ ಕಲಾವಿದರಿಗೆ ಉಪಹಾರ ವ್ಯವಸ್ಥೆ, ನೀರು, ಮಜ್ಜಿಗೆ ಮತ್ತು ಪಾನಕದ ವ್ಯವಸ್ಥೆಯನ್ನು ಶ್ರೀ ದೇವಳ ಮತ್ತು ಸಂಘ ಸಂಸ್ಥೆಗಳು ಮಾಡಲಿದೆ ಎಂದು ಅಲಂಕಾರ ಸಮಿತಿ ಸಂಚಾಲಕ ರಾಜೇಶ್ ಎನ್.ಎಸ್ ಸಭೆಯಲ್ಲಿ ಹೇಳಿದರು.
ಸುಬ್ರಹ್ಮಣ್ಯದಿಂದ ಆರಂಭಿಸಿ, ಕುಮಾರಧಾರ, ಕುಲ್ಕುಂದ, ಕೈಕಂಬ, ಬಿಳಿನೆಲೆ, ಮರ್ಧಾಳ, ಕಡಬ, ಬಲ್ಯ, ಆಲಂಕಾರು, ರಾಮಕುಂಜ,ಉಪ್ಪಿನಂಗಡಿಯಲ್ಲಿ ಪ್ರಚಾರಾರ್ಥ ಬ್ಯಾನರ್ ಅಳವಡಿಸಲಾಗುತ್ತದೆ.ಸುಳ್ಯ, ಕಡಬ, ಪುತ್ತೂರು ತಾಲೂಕಿನ ಆಯ್ದ ಪ್ರದೇಶಗಳಲ್ಲಿ ಧ್ವನಿವರ್ಧಕ ಮುಖೇನ ಪ್ರಚಾರ ಕಾರ್ಯ ನಡೆಸಲಾಗುವುದು ಎಂದು ಸಭೆಯಲ್ಲಿ ಪ್ರಚಾರ ಸಮಿತಿ ಸಹಸಂಚಾಲಕ ಗಿರಿಧರ್ ಸ್ಕಂಧ ನುಡಿದರು.
ಸಭೆಯಲ್ಲಿ ಬ್ರಹ್ಮರಥದ ಸೇವಾರ್ಥಿಗಳಲ್ಲಿ ಓರ್ವರಾದ ಯುವ ಉದ್ಯಮಿ ಅಜಿತ್ ಶೆಟ್ಟಿ, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಗೌಡ ಬಳ್ಳೇರಿ, ಪ್ರಮುಖರಾದ ಚಂದ್ರಹಾಸ ರೈ, ಪ್ರಮುಖರಾದ ರಮೇಶ್ ಕಲ್ಪುರೆ, ನಾಗರಾಜ್ ಎನ್.ಕೆ, ಅಶೋಕ್ ಕಡಬ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವರಾಮ ರೈ, ಸುಧೀರ್ ಕುಮಾರ್ ಶೆಟ್ಟಿ, ದೇವಳದ ಅಭಿಯಂತರ ಉದಯ ಕುಮಾರ್, ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಶ್ರೀ ದೇವಳದ ಪದ್ಮನಾಭ ಶೆಟ್ಟಿಗಾರ್, ಮೋಹನ್ ಎಂ.ಕೆ, ಸರಸ್ವತಿ, ಅಲಂಕಾರ ಸಮಿತಿ ಸಂಚಾಲಕ ರಾಜೇಶ್ ಎನ್.ಎಸ್, ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಪ್ರಶಾಂತ್ ಭಟ್ ಮಾಣಿಲ, ಆಹಾರ ಸಮಿತಿ ಸಂಚಾಲಕ ಎ.ಸುಬ್ರಹ್ಮಣ್ಯ ರಾವ್, ಪ್ರಚಾರ ಸಮಿತಿ ಸಂಚಾಲಕ ಗಿರಿಧರ್ ಸ್ಕಂಧ, ಸದಸ್ಯರಾದ ರತ್ನಾಕರ.ಎಸ್, ಹರಿಪ್ರಸಾದ್ ನಾಯರ್ ಮಲ್ಲಾಜೆ, ಭರತ್ ನೆಕ್ರಾಜೆ, ಚರಣ್ ಕಾನಡ್ಕ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.