HomePage_Banner
HomePage_Banner

ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಸ್ಥಳೀಯ ಯುವಕರ ನೇಮಕಾತಿಗೆ ಇಲಾಖೆಯಿಂದ ಪ್ರೋತ್ಸಾಹ ಠಾಣಾ ಮಟ್ಟದಲ್ಲಿ ಮಾಹಿತಿ ಕಾರ್ಯಕ್ರಮ ನಡೆಸಲು ಸೂಚನೆ

 

 

 

 

ಈ ಬಾರಿ ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ನಿಟ್ಟಿನಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ ಇಲಾಖೆ ವ್ಯಾಪಕ ಆಸಕ್ತಿಯನ್ನು ಹೊಂದಿ ಜಾಗೃತಿಯನ್ನು ಮೂಡಿಸುತ್ತಿದೆ.
ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ ಒಟ್ಟು ೩೦೨೬ ಕಾನ್ಸ್‌ಟೇಬಲ್ ಹುದ್ದೆಗಳು ಖಾಲಿ ಇದ್ದು , ಇದನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಲಾಗಿದೆ. ಸ್ಥಳೀಯ ಯುವಕರ ನೇಮಕಾತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಮ್ಮ ಠಾಣಾ ಸರಹದ್ದಿನಲ್ಲಿರುವ ಬಿಲ್ಲವ ಸಂಘ, ಬಂಟ್ಸ್ ಸಂಘ, ಮೊಗವೀರ ಸಂಘ, ದಲಿತ ಸಂಘಟನೆ(ಎಸ್.ಸಿ/ಎಸ್.ಟಿ), ದೇವಾಡಿಗ ಸಂಘ, ಬ್ಯಾರಿ ಸಂಘಟನೆ, ಎಸ್.ಎಸ್.ಎಫ್, ಎಸ್.ಕೆ.ಎಸ್.ಎಸ್.ಎಫ್, ಕ್ರಿಶ್ಚಿಯನ್ ಸಂಘ, ಕುಲಾಲ ಸಂಘ, ಗೌಡರ ಸಂಘ, ರಾಮ ಕ್ಷತ್ರಿಯ ಸಂಘ, ಮಡಿವಾಳರಸಂಘ, ಬ್ರಾಹ್ಮಣರ ಸಂಘ, ಜಿ.ಎಸ್.ಬಿ(ಗೌಡ ಸಾರಸ್ವತ ಬಾಹ್ಮಣರ ಸಂಘ), ಆರ್.ಎಸ್.ಬಿ (ರಾಜಾಪುರಿ ಸಾರಸ್ವತ ಬ್ರಾಹ್ಮಣ) ಸಂಘ, ವಿಶ್ವಕರ್ಮ, ಗಟ್ಟಿ ಸಮಾಜ, ಮುಸ್ಲಿಂ ಮತ್ತು ಕ್ರೈಸ್ತರ ಇತರೆ ಸಂಘಟನೆಯ ಮುಖಂಡರನ್ನು ಕರೆಸಿ ಠಾಣಾ ಮಟ್ಟದಲ್ಲಿ ಕಾರ್ಯಕ್ರಮ ನಡೆಸುವುವಂತೆ ಸೂಚನೆ ನೀಡಲಾಗಿದೆ.
ಸಂಬಂಧಪಟ್ಟ ಸಹಾಯಕ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಯ ನೇಮಕಾತಿ ನಿಯಮ, ಬೇಕಾದ ಅರ್ಹತೆ, ಪರೀಕ್ಷೆ ಮತ್ತು ವಿಧಾನಗಳ ಬಗ್ಗೆ ಮನದಟ್ಟು ಮಾಡುವುದರೊಂದಿಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸ್ಥಳೀಯ ಯುವಕ/ಯುವತಿಯರು ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಲಾಗಿದೆ.
ಸಂಬಂಧಪಟ್ಟ ಪಿ.ಎಸ್.ಐ ರವರು ಬೀಟ್ ಸಿಬ್ಬಂದಿ, ಗುಪ್ತ ಮಾಹಿತಿ ಸಂಗ್ರಹಗಾರ ಮುಖಾಂತರ ಅಧೀನ ವ್ಯಾಪ್ತಿಯಲ್ಲಿರುವ ಸ್ಥಳಿಯ ಅರ್ಹ ಯುವಕ ಯುವತಿಯರ ಪಟ್ಟಿಯನ್ನು ತಯಾರಿಸಿ ಅವರಿಗೆ ಆರ್.ಎಸ್.ಐ ರವರ ಮುಖಾಂತರ ದೈಹಿಕ ಪರೀಕ್ಷೆಯ ಬಗ್ಗೆ ತರಬೇತಿಗೊಳಿಸುವುದು. ಕೈಗೊಂಡ ಕ್ರಮದ ಬಗ್ಗೆ ಸಂಬಂಧಪಟ್ಟ ಸಹಾಯಕ ಪೋಲಿಸ್ ಆಯುಕ್ತರು/ ಪೊಲೀಸ್ ನಿರೀಕ್ಷಕರು ಪಾಲನಾ ವರದಿ ಸಲ್ಲಿಸುವಂತೆ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ :

notification

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.