HomePage_Banner
HomePage_Banner

ನಿವೃತ್ತ ಮುಖ್ಯೋಪಾಧ್ಯಯ ಗೋಳ್ತಜೆ ಸದಾಶಿವಯ್ಯ ನಿಧನ

 

ಕಲ್ಮಡ್ಕ ಗ್ರಾಮದ ಪ್ರಗತಿ ಪರ ಕೃಷಿಕರು, ನಿವೃತ್ತ ಮುಖ್ಯೋಪಾಧ್ಯಯ ಗೋಳ್ತ್ತಜೆ ಸದಾಶಿವಯ್ಯ (೮೯ವ) ರವರು ಅ.೧ ರಂದು ಸ್ವಗೃಹದಲ್ಲಿ ನಿಧನರಾದರು.


ಅವರು ಕೂತ್ಕುಂಜ, ಕನ್ಯಾನ, ಶೇಣಿ, ಕಲ್ಮಡ್ಕ ಸ.ಪ್ರಾ.ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಗೈದಿದ್ದರು. ಶೇಣಿ ಶಾಲೆ ಆರಂಭದ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.ಕಲ್ಮಡ್ಕ ಸ.ಹಿ.ಪ್ರಾ.ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಮುಖ್ಯೋಪಾಧ್ಯಯರಾಗಿ ೧೯೮೯ ನೇ ಇಸವಿಯಲ್ಲಿ ನಿವೃತ್ತ ಗೊಂಡಿದ್ದರು. ಅವರು ಆಂಗ್ಲ ಭಾಷಾ ಬೋಧನೆಯಲ್ಲಿ ನಿಸ್ಸೀಮರಾಗಿದ್ದರು. ಅಂದಿನ ದಿನಗಳಲ್ಲಿ ಶಿಕ್ಷಣ ವಂಚಿತರಿಗೆ,ಶಿಕ್ಷಣ ನೀಡಿ ಒಬ್ಬ ಆದರ್ಶ ಗುರುವಾಗಿ ಕೀರ್ತಿ ಗಳಿಸಿದ್ದರು.ಕಲ್ಮಡ್ಕ ಗ್ರಾಮದ ಹವ್ಯಕ ಸಮುದಾಯದ ಅನುವಂಶಿಕ ಗುರಿಕಾರರಾಗಿದ್ದರು.ಮೃತರು ಪತ್ನಿ ಜಿ.ಲಕ್ಷ್ಮಿ ಪುತ್ರ ಡಾ.ಜಿ.ಎಸ್.ಈಶ್ವರಯ್ಯ, ಸುಬ್ರಹ್ಮಣ್ಯ ಜಿ, ಜಿ.ಶ್ಯಾಮ, ಪುತ್ರಿಯರಾದ ಗೌರಿ ಹರಿಕೃಷ್ಣ ಭಟ್, ಉಷಾ ಶ್ರೀಧರ್ ಭಟ್, ಸಾವಿತ್ರಿ ಪರಮೇಶ್ವರ ಭಟ್, ಸುಮಾರಾಮಕೃಷ್ಣಶಾಸ್ತ್ರಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.