HomePage_Banner
HomePage_Banner

ಬೊಳ್ಳಾಜೆ : ನೇಣು ಬಿಗಿದು ವೃದ್ಧ ಆತ್ಮಹತ್ಯೆ

ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಅಪ್ಪಯ್ಯ ನಾಯಕ್ ಎಂಬವರು ನಿನ್ನೆ (ಅ.5) ಮನೆಯ ಪಕ್ಕದ ವಾಸ್ತವ್ಯ ಇಲ್ಲದ ಮನೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊರಗಡೆ ಹೋಗಿದ್ದ ಮನೆಯವರು ಸಂಜೆ ವೇಳೆಗೆ ಬಂದಾಗ ಅಪ್ಪಯ್ಯ ನಾಯಕ್ ರವರು ಮನೆಯಲ್ಲಿಲ್ಲದಿದ್ದುದರಿಂದ ಹುಡುಕಾಡಿದಾಗ ಪಕ್ಕದ ರಂಗರಾಜ ಎಂಬವರಿಗೆ ಸೇರಿದ ವಾಸ್ತವ್ಯ ಇಲ್ಲದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಕಂಡು ಬಂದರೆನ್ನಲಾಗಿದೆ. 

ಸುಳ್ಯ  ಪೋಲೀಸರು ಘಟನಾ ಸ್ಥಳಕ್ಕಾಗಮಿಸಿ ಮಹಜರು ನಡೆಸಿದರು. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಸುಳ್ಯದ ಆಸ್ಪತ್ರೆಗೆ ಕರೆತರಲಾಯಿತು. ಇಂದು ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಬೊಳ್ಳಾಜೆಯ ಮನೆಗೆ ತಂದು ಅಂತ್ಯ ಸಂಸ್ಕಾರ ನಡೆಸಲಾಯಿತು.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಅಪ್ಪಯ್ಯ ನಾಯಕ್ ರವರಿಗೆ ಅಂದಾಜು 70 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಯೋಗಿನಿ, ಪುತ್ರರಾದ ಜಯರಾಮ ನಾಯಕ್, ಚಂದ್ರಶೇಖರ ನಾಯಕ್, ರಾಮಚಂದ್ರ ನಾಯಕ್ ಹಾಗೂ ಓರ್ವ ಪುತ್ರಿ ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.