HomePage_Banner
HomePage_Banner
Breaking News

ಯೇನೆಕಲ್ಲು: ಶ್ರೀ ಆದಿಶಕ್ತಿ ಭಜನಾ ಮಂದಿರದಲ್ಲಿ ನವರಾತ್ರಿ ಸಮಾಪ್ತಿ

ಶ್ರೀ ಆದಿಶಕ್ತಿ ಭಜನಾ ಮಂದಿರ ಯೇನೆಕಲ್ಲು ಇಲ್ಲಿ ಸೆ. 29 ರಂದು ಆರಂಭವಾದ ನವರಾತ್ರಿ ಉತ್ಸವ ಅ. 7 ರಂದು ಸಮಾಪ್ತಿಯಾಯಿತು. ಅ. 7 ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಭಜನಾ ಮಂದಿರದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ವಿ. ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡಿದರು.

ರಾಜ್ಯ ಭಜನಾ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಪುತ್ಯ ಮತ್ತು ಕಾರ್ಕಳ ಅರಣ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಪುಟ್ಟಣ್ಣ ಗೌಡ ಬೂದಿಪಳ್ಳ ಅತಿಥಿಗಳಾಗಿ ಭಾಗವಹಿಸಿದ್ದರು. ಸೆ. 29 ರಂದು ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕು. ಅತ್ಮಿಕಾ ಪೂಜಾರಿಮನೆ, ಭಜನಾ ಮಂದಿರದ ಸ್ಥಾಪಕಾಧ್ಯಕ್ಷ ಹರಿಯಪ್ಪ ಗೌಡ ಬಾಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಜನಾ ಮಂದಿರದ ನಿಕಟಪೂರ್ವಾಧ್ಯಕ್ಷ ರೇಗಪ್ಪ ಗೌಡ ಪುಂಡಿಗದ್ದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು. ನೇಹಾ ಬಾಲಾಡಿ, ಕು. ಚಲನ ಬಾಲಾಡಿ ಪ್ರಾರ್ಥಿಸಿದರು. ಭಜನಾ ಮಂದಿರದ ಸದಸ್ಯ ವಿಶ್ವನಾಥ ಬಾಲಾಡಿ ಸ್ವಾಗತಿಸಿ, ಕಾರ್ಯದರ್ಶಿ ಮುರಳೀಧರ ಬಾಲಾಡಿ ವಂದಿಸಿದರು. ಶಿವರಾಮ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು.
ಆರಂಭದಲ್ಲಿ ಯೇನೆಕಲ್ಲಿನ ವಿವಿಧ ಭಜನಾ ತಂಡಗಳಿಂದ ಮತ್ತು
ಇತ್ತೀಚೆಗೆ ರಮೇಶ್ ಮೆಟ್ಟಿನಡ್ಕರವರಿಂದ ತರಬೇತಿಯನ್ನು ಪಡೆದ ಯೇನೆಕಲ್ಲಿನ ಭಜನಾ ತಂಡದಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್‌ ಪಂಜ ಇದರ ಸಾರಥ್ಯದಲ್ಲಿ ಯಕ್ಷ-ಗಾನ-ನಾಟ್ಯ-ಕುಂಚ ನಡೆಯಿತು.

ನಾವು ಆಚರಿಸುವ ಹಬ್ಬಗಳ ಮಹತ್ವವನ್ನು ನಮ್ಮ ಮಕ್ಕಳಿಗೆ ತಿಳಿಸಬೇಕು. ಆ ಮೂಲಕ ಮಕ್ಕಳಲ್ಲಿ ಧಾರ್ಮಿಕತೆಯ ಬಗ್ಗೆ ಅರಿವು ಮೂಡಿಸಬೇಕು. ಈ ರೀತಿಯ ಧಾರ್ಮಿಕ ಸಭಾ ಕಾರ್ಯಕ್ರಮಗಳ ಮೂಲಕ ಅದು ಈಡೇರಿಸಲು ಸಾಧ್ಯ – ಶ್ರೀಮತಿ ನಳಿನಾಕ್ಷಿ ವಿ. ಆಚಾರ್ಯ ಧಾರ್ಮಿಕ ಉಪನ್ಯಾಸಕರು

 

ನಾವು ಯಾವುದೇ ಸಂಪತ್ತನ್ನು ಪಡೆದರೂ ಅದು ಶಾಶ್ವತ ಅಲ್ಲ. ಆದರೆ ನಾವು ಪರಿಸರವನ್ನು ಸ್ವಚ್ಚವಾಗಿರಿಸಿದರೆ, ಪೃಕೃತಿಯನ್ನು ಕಾಪಾಡಿದರೆ ಅದು ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯವನ್ನು ಬದುಕನ್ನು ನೀಡುತ್ತದೆ – ಭವಾನಿಶಂಕರ ಪೂಂಬಾಡಿ ಅಧ್ಯಕ್ಷರು, ಶ್ರೀ ಆದಿಶಕ್ತಿ ಭಜನಾ ಮಂದಿರ ಯೇನೆಕಲ್ಲು

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.