HomePage_Banner
HomePage_Banner
HomePage_Banner
HomePage_Banner

ಬೆಳ್ಳಾರೆಯಲ್ಲಿ ಶಾರದೋತ್ಸವ ಪ್ರಾರಂಭ


ಶ್ರೀ ಶಾರದೋತ್ಸವ ಸಮಿತಿ ಬೆಳ್ಳಾರೆ ವತಿಯಿಂದ ನಡೆಯುವ 32  ನೇ ವರ್ಷದ ಶ್ರೀ ಶಾರದೋತ್ಸವವು ಅ.8 ರಂದು ಬೆಳ್ಳಾರೆ ಅಚಲಾಪುರ ಕಟ್ಟೆಯ ಬಳಿ ಪ್ರಾರಂಭಗೊಂಡಿತು.


ಪೂರ್ವಾಹ್ನ 8.3೦ ಕ್ಕೆ ಶ್ರೀ ಶಾರದಾ ಪ್ರತಿಷ್ಟೆ, ಪೂಜೆ ನಡೆಯಿತು. ನಂತರ ಅಕ್ಷರಾಭ್ಯಾಸ,ಶಾರದಾ ಸಹಸ್ರನಾಮಾರ್ಚನೆ,ಅಷ್ಟೋತ್ತರ ನಾಮಾರ್ಚನೆ, ಆಯುಧ ಪೂಜೆ ನಡೆಯಿತು. ವನಿತಾ ಮಹಿಳಾ ಭಜನಾ ಮಂಡಳಿ ಕಾಟುಕುಕ್ಕೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಾರದೋತ್ಸವ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು,ಉಪಾಧ್ಯಕ್ಷರಾದ ವಿಠಲ ರೈ ಪುಡ್ಕಜೆ,ವಾಸುದೇವ ಆಚಾರ್ಯ ಕಿಲಂಗೋಡಿ,ಕೋಶಾಧಿಕಾರಿ ರಾಜೇಶ್ ಗುಂಡಿಗದ್ದೆ,ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ, ಜತೆಕಾರ್ಯದರ್ಶಿ ಪ್ರಸಾದ್ ಸೇವಿತ ಮತ್ತು ಸಮಿತಿಯ ಸರ್ವಸದಸ್ಯರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿಯವರ ಸಾರಥ್ಯದಲ್ಲಿ ಯಕ್ಷ – ಗಾನ ವೈಭವ ನಡೆಯಲಿದೆ.ರಾತ್ರಿ ೯.೩೦ ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ನಡೆದ ಬಳಿಕ ಶ್ರೀ ದೇವಿಯ ವೈಭವದ ಶೋಭಾಯಾತ್ರೆ ನಡೆದು ಜಲಸ್ತಂಭನ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.