HomePage_Banner
HomePage_Banner
Breaking News

ಸುಳ್ಯ ಶ್ರೀ ಶಾರದಾಂಬೋತ್ಸವದಲ್ಲಿ ವೈಷ್ಣವಿ ಪ್ರಕಾಶ್‌ಗೆ ಸನ್ಮಾನ

 
ಸುಳ್ಯ ಶಾರದಾಂಬ ದಸರಾ ಸೇವಾ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ, ದಸರಾ ಉತ್ಸವ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ 48 ನೇ ವರ್ಷದ ಶ್ರೀ ಶಾರದಾಂಬ ಉತ್ಸವ- ಸುಳ್ಯ ದಸರಾ ಅ. 5 ರಿಂದ ಪ್ರಾರಂಭಗೊಂಡಿದ್ದು, ಶಾರದಾಂಬಾ ಕಲಾ ವೇದಿಕೆಯಲ್ಲಿ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ನಿನ್ನೆ (ಅ.7ರಂದು) ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಮಲೆಯಾಳ ಮನೋರಮಾ ಚಾನೆಲ್‌ನ ಡ್ಯಾನ್ಸ್ ಫ್ರೋಗ್ರಾಂನಲ್ಲಿ ಮಿಂಚುತ್ತಿರುವ ಸುಳ್ಯದ ಪ್ರತಿಭೆ ವೈಷ್ಣವಿ ಪ್ರಕಾಶ್‌ಗೆ ಸನ್ಮಾನ ಮಾಡಲಾಯಿತು.


ಈ ಸಂದರ್ಭದಲ್ಲಿ ಶಾರದಾಂಬಾ ಸೇವಾ ಸಮಿತಿಯ ಗೌರವಾಧ್ಯಕ್ಷ ಗೋಕುಲ್‌ದಾಸ್, ಅಧ್ಯಕ್ಷ ನಾರಾಯಣ ಕೇಕಡ್ಕ, -ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ರೈ ಬೂಡು, ಉಪಾಧ್ಯಕ್ಷರಾದ ಚಿದಾನಂದ ವಿದ್ಯಾನಗರ, ರವಿಚಂದ್ರ ಕೊಡಿಯಾಲಬೈಲು, ನಿರ್ದೇಶಕರಾದ ನಾರಾಯಣ ಕೆ.ಎಸ್., ಅನಿಲ್‌ಕುಮಾರ್ ಕೆ.ಸಿ., ಕೆ.ಪುರುಷೋತ್ತಮ, ದೇವಿಪ್ರಸಾದ್, ಕುಸುಮಾಧರ ರೈ ಬೂಡು, ವಿಜಯಾ ಪಾತಿಕಲ್ಲು ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.