HomePage_Banner
HomePage_Banner
Breaking News

ಪೆರಾಜೆಯಲ್ಲಿ ಸಾರ್ವಜನಿಕ ಶ್ರೀ ಶಾರದಾಂಬಾ ಉತ್ಸವ

ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ

ಪೆರಾಜೆ ಸಾರ್ವಜನಿಕ ಶ್ರೀ ಶಾರದಾಂಬಾ ಉತ್ಸವ ಸಮಿತಿ ವತಿಯಿಂದ 15ನೇ ವರ್ಷದ ಶಾರದಾಂಬ ಉತ್ಸವ ಪೆರಾಜೆಯ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಅ.8  ರಂದು ನಡೆಯಿತು.

ಶಾರದಾಂಬ ಉತ್ಸವದ ಪ್ರಯುಕ್ತ ತ್ರಿಮದುರ ಯುಕ್ತ ಸಹಸ್ರ ಕದಳಿ – ಲಲಿತಾ ಸಹಸ್ರನಾಮ ಹೋಮ ನಡೆಯಿತು.

ಬೆಳಗ್ಗೆ ಶ್ರೀ ಮಹಾಗಣಪತಿ ಹೋಮ ನಡೆದು ಶಾರದಾಂಬ ಪ್ರತಿಷ್ಠೆ ನಡೆಯಿತು. ನಂತರ ಕೋಲ್ಚಾರು ಶಾರದಾಂಬಾ ಭಜನಾ ಸಂಘದಿಂದ ಭಜನೆ ಹೋಮ ಶಾಲಾ ಮಕ್ಕಳಿಗೆ ಸ್ಪರ್ಧೆಗಳು ನಡೆಯಿತು. ನಂತರ ಅಕ್ಷರಾಭ್ಯಾಸ, ಹೋಮ, ಪೂರ್ಣಾಹುತಿ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು.


ಅಪರಾಹ್ನ ಸ್ಪರ್ಧಾ ಕಾರ್ಯಕ್ರಮಗಳು ಕಾರ್ಯಕ್ರಮ ಸಂಯೋಜಕರಾದ ಮೋಹನ್ ಪಿ.ವಿ. ಪೆರಾಜೆಯವರ ನೇತೃತ್ವದಲ್ಲಿ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು.

ಮುಖ್ಯಅತಿಥಿಗಳಾಗಿ ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಧರಣೀಧರ, ಪೆರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಉಪಸ್ಥಿತರಿದ್ದರು. ಕೃಷಿ ಕಾರ್ಮಿಕ ಚೋಮಣ್ಣ ನಾಯ್ಕ, ತಿಮ್ಮ ಮೊಗೇರರವರನ್ನು ಸುದ್ದಿ ಸಮೂಹ ಸಂಸ್ಥೆಯ ವ್ಯವಸ್ಥಾಪಕರಾದ ಡಾ. ಯು.ಪಿ.ಶಿವಾನಂದರವರು ಸನ್ಮಾನಿಸಿದರು.


ನಿವೃತ್ತ ಶಿಕ್ಷಕ ಮತ್ತು ನಿವೃತ್ತ ಯೋಧರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧೆ ವಿಜೇತರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಸಂಜೆ 5 ಗಂಟೆಗೆ ಮಹಾಪೂಜೆ ಶೋಭಾಯಾತ್ರೆ ನಡೆದು, ಶಾರದಾಮೂರ್ತಿಯ ವಿಸರ್ಜನೆ ನಡೆಯಲಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.