HomePage_Banner
HomePage_Banner

ಅಡ್ಕಾರು: ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಾನಿಧ್ಯದಲ್ಲಿ ವೈಭವದ ಶಾರದಾಂಬ ಉತ್ಸವ , ಅತ್ಯಾಕರ್ಷಕ ಶೋಭಾಯಾತ್ರೆ

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಾನಿಧ್ಯದಲ್ಲಿ ಶ್ರೀ ಕಾರ್ತಿಕೇಯ ಯುವ ಸೇವಾ ಸಮಿತಿಯ ಆಶ್ರಯದಲ್ಲಿ ಪ್ರಥಮ ವರ್ಷದ ಶ್ರೀ ಶಾರದಾಂಬ ಉತ್ಸವವು ದೇವಸ್ಥಾನದ ಶ್ರೀ ಕಾರ್ತಿಕೇಯ ಸಭಾಭವನದಲ್ಲಿ ಅ.8ರಂದು ಜರುಗಿತು.


ಬೆಳಿಗ್ಗೆ 6ಕ್ಕೆ ಗಣಪತಿ ಹವನ, ಸಾಮೂಹಿಕ ಪ್ರಾರ್ಥನೆ, ನಂತರ ಶಾರದಾಂಬ ದೇವಿಯ ವಿಗ್ರಹದಾನಿಗಳಾದ ಸುಧಾಕರ ಕಾಮತ್ ವಿನೋಬಾನಗರ ಅವರು ಧ್ವಜಾರೋಹಣ ನೆರವೇರಿಸಿದರು.
ಬಳಿಕ ಶ್ರೀ ಶಾರದಾಂಬ ದೇವಿಯ ಪ್ರತಿಷ್ಠೆ, ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಿತು. ಬಳಿಕ ನಡೆದ ವಿವಿಧ ಕ್ರೀಡಾ ಕಾರ್ಯಕ್ರಮದಲ್ಲಿ ಅಂಗನವಾಡಿ ಪುಟಾಣಿಗಳಿಗೆ , ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಮಧ್ಯಾಹ್ನ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಪೂಜೆಯ ಬಳಿಕ ಶ್ರೀ ಶಾರದಾಂಬ ದೇವಿಗೆ ಮಹಾಪೂಜೆ,ಅನ್ನಸಂತರ್ಪಣೆ ಜರುಗಿತು. ಬಳಿಕ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಪುರುಷರಿಗೆ ಹಗ್ಗಜಗ್ಗಾಟ, ಗೋಣಿಚೀಲ ಓಟ, ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು. ಅಪರಾಹ್ನ ಶ್ರೀದೇವಿಯ ಸಾನಿಧ್ಯದಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.


ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕಾರ್ತಿಕೇಯ ಯುವ ಸೇವಾ ಸಮಿತಿಯ ಅಧ್ಯಕ್ಷ ರವಿನ್ ರಾಜ್ ಅಡ್ಕಾರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಶರತ್ ಅಡ್ಕಾರು, ಪ್ರಧಾನ ಸಂಚಾಲಕ ಸುಖೇಶ್ ಅಡ್ಕಾರು ಉಪಸ್ಥಿತರಿದ್ದರು. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಉಪನ್ಯಾಸಕ ಸಚಿನ್ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯರಾದ ಉಪೇಂದ್ರ ಕಾಮತ್ ವಿನೋಬಾನಗರ, ಸುಧಾಕರ ಕಾಮತ್ ವಿನೋಬಾನಗರ, ನ.ಸೀತಾರಾಮ, ದೇವಸ್ಥಾನದ ಆಡಳಿತ ಮೊಕ್ತೇಸರ ಗುರುರಾಜ್ ಭಟ್, ಜಯರಾಮ ರೈ ಜಾಲ್ಸೂರು, ಶ್ರೀ ಕಾರ್ತಿಕೇಯ ಯುವ ಸೇವಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.
ರಾತ್ರಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ರಾತ್ರಿಯ ಮಹಾಪೂಜೆಯ ಬಳಿಕ ಶ್ರೀ ಶಾರದಾಂಬ ದೇವಿಗೆ ಮಹಾಪೂಜೆ ನಡೆದು, ಶ್ರೀ ದೇವಿಯ ಅತ್ಯಾಕರ್ಷಕ ಶೋಭಾಯಾತ್ರೆಯು ದೇವಸ್ಥಾನದ ಸಾನಿಧ್ಯದಿಂದ ಹೊರಟು, ಕೋನಡ್ಕಪದವು ಮಾರ್ಗವಾಗಿ ವಿನೋಬಾನಗರದವರೆಗೆ ಸಂಚರಿಸಿ, ಪುನ: ಕೋನಡ್ಕಪದವು ಮಾರ್ಗವಾಗಿ ಕುಕ್ಕೇಟಿ, ಆಳಂಕಲ್ಯದವರೆಗೆ ಸಾಗಿ ಪಯಸ್ವಿನಿ ನದಿಯಲ್ಲಿ ಜಲಸ್ಥಂಭನಗೊಂಡಿತು.


ಶೋಭಾಯಾತ್ರೆಗೆ ಬ್ಯಾಂಡ್ ಸೆಟ್ ಗಳ ಅಬ್ಬರ ಹಾಗೂ ಅತ್ಯಾಕರ್ಷಕ ಸಿಡಿಮದ್ದುಗಳ ಪ್ರದರ್ಶನ ಮೆರಗು ತಂದಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.