HomePage_Banner
HomePage_Banner
Breaking News

ಅ.12- 15: ಮಂಗಳೂರಿನಲ್ಲಿ 12ನೇ ರಾಜ್ಯಮಟ್ಟದ ಅಂಚೆಚೀಟಿಗಳ ಪ್ರದರ್ಶನ

ಕರ್ನಾಟಕ ಅಂಚೆ ವೃತ್ತ ಪ್ರಸ್ತುತಪಡಿಸುವ 12ನೇ ರಾಜ್ಯಮಟ್ಟದ ಅಂಚೆಚೀಟಿಗಳ ಪ್ರದರ್ಶನ ಅ. 12ರಿಂದ 15 ರವರೆಗೆ ಮಂಗಳೂರಿನ ಡಾ. ಟಿ.ಎಂ.ಎ.ಪೈ ಕನ್ವೆನ್ವನ್ ಹಾಲ್‌ನಲ್ಲಿ ನಡೆಯಲಿದೆ. ಅ. 12ರಂದು ಉದ್ಘಾಟನಾ ಸಮಾರಂಭ ಮತ್ತು ಸಚಿತ್ರ ಅಂಚೆ ಕಾರ್ಡ್‌ಗಳ ಬಿಡುಗಡೆ ನಡೆಯಲಿದೆ.

ಅ. 13ರಂದು ಪರಿಸರದಿನ, ಅ. 14ರಂದು ಸಂಸ್ಕೃತಿ ದಿನ ನಡೆಯಲಿದ್ದು, ಈ ಸಂದರ್ಭ ವಿಶೇಷ ಅಂಚೆ ಲಕೋಟೆಗಳ ಬಿಡಗಡೆಯೂ ನಡೆಯಲಿದೆ. ಅ. 15ರಂದು ಸಮಾರೋಪ ಸಮಾರಂಭ ನಡೆಯಲಿದೆ.

ಅ. 14ರಂದು ಅಪರಾಹ್ನ ಅಂಚೆಚೀಟಿ ಸಂಗ್ರಹಣೆಯ ಬಗ್ಗೆ ಕಾರ್ಯಾಗಾರ ನಡೆಯಲಿದೆ. ಅಂಚೆ ಚೀಟಿ ಸಂಗ್ರಹಣೆಯ ಖಾತೆ ತೆರೆಯುವ ವ್ಯವಸ್ಥೆ, ‘ನನ್ನ ಅಂಚೆ ಚೀಟಿ’ ಎಂಬ ಸ್ಥಳದಲ್ಲಿಯೇ ಸ್ವಂತ ಭಾವಚಿತ್ರವಿರುವ ಅಂಚೆಚೀಟಿಯನ್ನು ವಿನ್ಯಾಸಗೊಳಿಸುವ ವ್ಯವಸ್ಥೆ ವಿಶೇಷ ಅಂಚೆ ಲಕೋಟೆಗಳು, ಸಚಿತ್ರ ಅಂಚೆ ಕಾರ್ಡ್, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆ ತೆರೆಯುವ ವ್ಯವಸ್ಥೆ, ೧೫ ವರ್ಷ ಪೂರ್ಣಗೊಳಿಸಿದ ಮಕ್ಕಳ ಆಧಾರ್ ಬಯೋಮೆಟ್ರಿಕ್ ಪರಿಷ್ಕರಣೆ ಸೇವೆ ಕೂಡಾ ಲಭ್ಯವಿದೆ ಎಂದು ಅಂಚೆ ಇಲಾಖೆ ಪ್ರಕಟಣೆ ತಿಳಿಸಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.