HomePage_Banner
HomePage_Banner

ಬೆಳ್ಳಾರೆಯಲ್ಲಿ ವಿಜೃಂಭಣೆಯ 32 ನೇ ವರ್ಷದ ಶ್ರೀ ಶಾರದೋತ್ಸವ

ಶ್ರೀ ಶಾರದೋತ್ಸವ ಸಮಿತಿ ಬೆಳ್ಳಾರೆ ವತಿಯಿಂದ 32 ನೇ ವರ್ಷದ ಶ್ರೀ ಶಾರದೋತ್ಸವವು ಅ.08 ರಂದು ಬೆಳ್ಳಾರೆ ಅಚಲಾಪುರ ಕಟ್ಟೆಯ ಬಳಿ ವಿವಿಧ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.


ಬೆಳಿಗ್ಗೆ 8.30 ಕ್ಕೆ ಶಾರದಾ ಪ್ರತಿಷ್ಠೆ,ಪೂಜೆ ನಡೆಯಿತು.
9.30 ರಿಂದ 12.00 ಗಂಟೆಯವರೆಗೆ ವಿದ್ಯಾರಂಭ ( ಅಕ್ಷರಾಭ್ಯಾಸ) ಶಾರದಾ ಸಹಸ್ರನಾಮಾರ್ಚನೆ,ಅಷ್ಟೋತ್ತರನಾಮಾರ್ಚನೆ,ಆಯುಧ ಪೂಜೆ,ಇತ್ಯಾದಿ ಸೇವೆಗಳು ನಡೆಯಿತು.
ಗಂಟೆ 11.00 ರಿಂದ ವನಿತಾ ಮಹಿಳಾ ಭಜನಾ ಮಂಡಳಿ ಕಾಟುಕುಕ್ಕೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ನಡೆದ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಸಂಜೆ 6.30 ರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.ನಂತರ ಯಕ್ಷಧ್ರುವ ಶ್ರೀ ಪಟ್ಲ ಸತೀಶ ಶೆಟ್ಟಿಯವರ ಸಾರಥ್ಯದಲ್ಲಿ “ಯಕ್ಷ – ಗಾನ ವೈಭವ” ನಡೆಯಿತು.ರಾತ್ರಿ ಗಂಟೆ 9.30 ರಿಂದ ಮಹಾಪೂಜೆ ,ಪ್ರಸಾದ ವಿತರಣೆ ನಡೆಯಿತು.ನಂತರ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ನಡೆದು ಗೌರಿಹೊಳೆಯಲ್ಲಿ ಜಲಸ್ತಂಭನ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು,ಉಪಾಧ್ಯಕ್ಷರಾದ ವಿಠಲ ರೈ ಪುಡ್ಕಜೆ,ವಾಸುದೇವ ಆಚಾರ್ಯ ಕಿಲಂಗೋಡಿ,ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ,ಕೋಶಾಧಿಕಾರಿ ರಾಜೇಶ್ ಗುಂಡಿಗದ್ದೆ,ಜತೆಕಾರ್ಯದರ್ಶಿ ಪ್ರಸಾದ್ ಸೇವಿತ ಮತ್ತು ಸಮಿತಿಯ‌ ಸರ್ವ ಸದಸ್ಯರು ಹಾಗೂ ನೂರಾರು ಜನ ಭಕ್ತಾಭಿಮಾನಿಗಳು ಉಪಸ್ಥಿತರಿದ್ದು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.