HomePage_Banner
HomePage_Banner

ಹೈನುಗಾರಿಕೆಗೆ ‘ಕೊಡಲಿ ಏಟು’ ನೀಡಿದ ಮೋದಿ: ಸಚಿನ್‌ರಾಜ್ ಶೆಟ್ಟಿ ಟೀಕೆ

ರಾಜ್ಯದಲ್ಲಿರುವ ಕೃಷಿಕರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದರು. ಇದೀಗ ಕೇಂದ್ರದ ಪ್ರಧಾನಿ ಮೋದಿಯವರು ೧೨ ಹೊರ ದೇಶದಿಂದ ಹಾಲು ಮತ್ತು ಇತರ ಸಾಮಾಗ್ರಿಗಳನ್ನು ಭಾರತಕ್ಕೆ ತರುವ ಒಪ್ಪಂದಕ್ಕೆ ಸಹಿ ಮಾಡಲಿದ್ದಾರೆ. ಈ ಎಲ್ಲಾ ಸಾಮಾಗ್ರಿಗಳಿಗೆ ತೆರಿಗೆ ವಿನಾಯಿತಿ ನೀಡಲಿದ್ದಾರೆ. ಹೈನುಗಾರಿಕೆ ನಂಬಿರುವ ಕುಟುಂಬಕ್ಕೆ ‘ಕೊಡಲಿಯೇಟು’ ನೀಡುವ ಕಾರ್ಯಕ್ಕೆ ಹೊರಟಿದ್ದಾರೆ ಎಂದು ಸಚಿನ್ ರಾಜ್ ಶೆಟ್ಟಿ ಟೀಕಿಸಿದ್ದಾರೆ.
ಈ ಯೋಜನೆ 1ತಿಂಗಳ ಒಳಗೆ ಕಾರ್ಯರೂಪಕ್ಕೆ ಬರುವ ಸಂಭವವಿದೆ. ಇದರಿಂದ ಬಡ ಕುಟುಂಬ, ಹಾಲು ಸಂಗ್ರಹಿಸುವ
ಸೊಸೈಟಿ, ಕೆ.ಎಂ. ಎಫ್‌ನಲ್ಲಿರುವ ಉದ್ಯೋಗಿಗಳು ಬೀದಿಪಾಲಾಗಿದ್ದಾರೆ. ಹಾಲು ಕರೆಯುವ ಹಸು ಕಟುಕರ ಕೈ ಸೇರಲಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಜನತೆಯನ್ನು ವಿಶ್ವಾಸಕ್ಕೆ ಪಡೆಯದೇ ವರ್ತಿಸುವುದು ದುರಂತ. ಹೊರ ದೇಶಗಳಿಂದ ಹಾಲು ತರುವ ಈ ಕ್ರಮದ ವಿರುದ್ದ ಶೀಘ್ರ ಹೋರಾಟ ಅನಿವಾರ್ಯ. ಇದರ ಬಗ್ಗೆ ಹೈನುಗಾರಿಕೆ ನಡೆಸುವ ಕೃಷಿಕರು ಕೂಡಲೇ ಎಚ್ಚೆತುಗೊಳ್ಳಲು ಸುಳ್ಯ ಬ್ಲಾಕ್ ಕಾಂಗ್ರೇಸ್ ಸಂಘಟನಾ ಕಾರ್ಯದರ್ಶಿ ಸಚಿನ್‌ರಾಜ್‌ಶೆಟ್ಟಿ ವಿನಂತಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.