HomePage_Banner
HomePage_Banner

ಕೆರೆಗೆ ಬಿದ್ದು ನವವಿವಾಹಿತೆ ಮೃತ್ಯು

 

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದಲ್ಲಿ ನವವಿವಾಹಿತೆಯೊಬ್ಬರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಕುಕ್ಕುಜಡ್ಕ ನಿವಾಸಿ ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಹರೀಶ್ ತಂಟೆಪ್ಪಾಡಿ ಎಂಬವರ ಪತ್ನಿ ಮೃತಪಟ್ಟ ವಿವಾಹಿತೆ.

ಅಜ್ಜಾವರ ಗ್ರಾಮದ ಮುಳ್ಯ ಲಕ್ಷ್ಮಣ ಗೌಡರ ಪುತ್ರಿ ಶ್ರುತಿಯವರಿಗೆ ಹರೀಶ್‌ರೊಂದಿಗೆ 2018 ಡಿ.27 ರಂದು ವಿವಾಹವಾಗಿತ್ತು. ಕೆಲಸ ಸಮಯ ಅನ್ಯೋನ್ಯವಾಗಿದ್ದ ಪತಿ ಪತ್ನಿಯ ನಡುವೆ ಕೆಲ ಸಮಯಯದ ಹಿಂದೆ ಜಗಳವಾಗಿತ್ತೆಂದೂ, ಈ ವಿಷಯ ಶ್ರುತಿ ಆಕೆಯ ಮನೆಯವರಿಗೆ ತಿಳಿಸಿ ಮನೆಯವರು ಕುಕ್ಕುಜಡ್ಕಕ್ಕೆ ಹೋಗಿ ಅವರಿಬ್ಬರನ್ನು ಸಮಾಧಾನಪಡಿಸಿ ಬಂದಿದ್ದರೆಂದೂ ಶ್ರುತಿಯ ಸಂಬಂಧಿಕರು ಹೇಳುತ್ತಾರೆ. ಅ. 17ರಂದು ಸಂಜೆ ಶ್ರುತಿಯವರು ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂಜೆ 6.30ಕ್ಕೆ ಈ ವಿಚಾರ ಪತಿ ಹರೀಶರ ಗಮನಕ್ಕೆ ಬಂದು ಊರವರಿಗೆ, ಪೊಲೀಸರಿಗೆ ಮತ್ತು ಅಗ್ನಿಶಾಮಕದಳದವರಿಗೆ ತಿಳಿಸಿ ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಲಾಯಿತು. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಅ. 18ರಂದು ಮರಣೋತ್ತರ ಶವ ಪರೀಕ್ಷೆ ನಡೆಸಿ ಕುಕ್ಕುಜಡ್ಕದ ತಂಟೆಪ್ಪಾಡಿ ಮನೆಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಮದುವೆಯಾಗಿ 1 ವರ್ಷದೊಳಗೆ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಇಬ್ಬರು ವೈದ್ಯರು ತಹಶೀಲ್ದಾರರ ಉಪಸ್ಥಿತಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು. ಪೊಲೀಸರು ಪತಿ ಹರೀಶ್‌ರವರ ಮೇಲೆ, ‘ಪತ್ನಿಗೆ ಮಾನಸಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರೇರೇಪಿಸಿದ್ದಾರೆಂಬ’ ಕೇಸು ದಾಖಲಿಸಿಕೊಂಡಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.