HomePage_Banner
HomePage_Banner

ಕುಂಕುಂ ಫ್ಯಾಶನ್‌ನವರಿಂದ ಸುಳ್ಯಕ್ಕೆ ಮತ್ತೊಂದು ಕೊಡುಗೆ

ಖಾಸಗಿ ಬಸ್ ನಿಲ್ದಾಣದ ಬಳಿ ಸಹಸಂಸ್ಥೆ ಜೈಲಕ್ಷ್ಮಿ ಶುಭಾರಂಭ

ಸುಳ್ಯದ ಹೆಸರಾಂತ ವಸ್ತ್ರಮಳಿಗೆಯಲ್ಲೊಂದಾದ ಕುಂಕುಂ ಫ್ಯಾಶನ್‌ರವರ ಸಹಸಂಸ್ಥೆ ಜೈಲಕ್ಷ್ಮಿ ಸುಳ್ಯದ ಖಾಸಗಿ ಬಸ್‌ನಿಲ್ದಾಣದ ಬಳಿಯ ಎಂ.ಎಸ್.ಟವರ್‌ನಲ್ಲಿ ಅ.18 ರಂದು ಶುಭಾರಂಭಗೊಂಡಿತು.

ಬೆಳಿಗ್ಗೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಸಂಸ್ಥೆಯ ಮಾಲಕರಾದ ಭೀಮಾರಾಂ ಹಾಗೂ ಧನ್‌ರಾಜ್ ಮಾತನಾಡಿ, ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲೆಂಬ ನಿಟ್ಟಿನಲ್ಲಿ ಸಹಸಂಸ್ಥೆಯನ್ನು ಆರಂಭಿಸಲಾಗಿದೆ. ನಮ್ಮಲ್ಲಿ ಮದುವೆಯ ಸೀರೆಗಳು, ಚೂಡಿದಾರ್, ಕುರ್ತೀಸ್, ಪುರುಷರ ಉಡುಪುಗಳು, ಮಕ್ಕಳ ಉಡುಪುಗಳು, ಮಹಿಳೆಯರ ಉಡುಪುಗಳು, ಸೂಟಿಂಗ್ & ಶರ್ಟಿಂಗ್ಸ್ ಹೀಗೇ ವಸ್ತ್ರಗಳ ಬೃಹತ್ ಸಂಗ್ರಹವಿದೆ.
ಶುಭಾರಂಭ ಹಾಗೂ ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಹೋಲ್‌ಸೆಲ್ ರೇಟ್‌ನಲ್ಲಿ ಗ್ರಾಹಕರಿಗೆ ಬಟ್ಟೆಗಳನ್ನು ಸೇಲ್ ಮಾಡಲಾಗುತ್ತದೆ. ೨೦೦೦ ಮೇಲ್ಪಟ್ಟ ಖರೀದಿಗೆ ಗಿಫ್ಟ್ ಮತ್ತು ಸ್ಪೆಷಲ್ ಲಕ್ಕಿ ಕೂಪನ್ ಇದೆ. ಇದರಲ್ಲಿ ಗ್ರಾಹಕರು ಬಹುಮಾನ ಗೆಲ್ಲಬಹುದು ಎಂದು ಅವರು ತಿಳಿಸಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೆ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಪಿ.ಬಿ. ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭಾಶಯ ಕೋರಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.