HomePage_Banner
HomePage_Banner
HomePage_Banner
HomePage_Banner

ಸಾಲ ಮನ್ನಾ ಸುತ್ತೋಲೆಗಳಲ್ಲಿನ ಗೊಂದಲದಿಂದ ರೈತರಿಗೆ ವಂಚನೆ-ಸರಿ ಪಡಿಸಲು ಮಲೆನಾಡು ಜನಹಿತರಕ್ಷಣಾ ವೇದಿಕೆ ಒತ್ತಾಯ

ಕರ್ನಾಟಕ ರಾಜ್ಯದ ರೈತರ ಬೆಳೆಸಾಲ ಒಂದು ಲಕ್ಷ ರೂ.ವರೆಗಿನ ಮನ್ನಾ ಯೋಜನೆ ಸಾಲ ಮನ್ನಾದ ಸುತ್ತೋಲೆಗಳಲ್ಲಾದ ಗೊಂದಲದಿಂದ ತಾಲೂಕಿನ ರೈತರಿಗೆ ವಂಚನೆಯಾಗಿದೆ ಇದನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸರಿಪಡಿಸುವ ಕೆಲಸ ಮಾಡಬೇಕೆಂದು ಮಲೆನಾಡು ಜನಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.


ಇಂದು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೇದಿಕೆಯ ಪದಾಧಿಕಾರಿಗಳಾದ ಪ್ರಸನ್ನ ಕೆ. ಎಣ್ಮೂರು, ಸುದರ್ಶನ ಪಾತಿಕಲ್ಲು ಮತ್ತು ಜಯಪ್ರಕಾಶ್ ಕೂಜುಗೋಡುರವರು “ನಮ್ಮ ತಾಲೂಕಿನಲ್ಲಿ ಸುಮಾರು ೧೪,೦೦೦ ಮಂದಿ ಸಾಲ ಮನ್ನಾಕಕ್ಕೆ ಅರ್ಹ ರೈತ ಸದಸ್ಯರಿದ್ದಾರೆ. ಇತ್ತೀಚೆಗೆ ಸಾಲಮನ್ನಾ ನೋಡೆಲ್ ಆಫೀಸರ್ ಮೌನೇಶ್ ಮೌದ್ಗಿಲ್‌ರವರು ಶೇ. ೯೦ರಷ್ಟು ಸಾಲಮನ್ನಾ ಬಿಡುಗಡೆಯಾಗಿರುವುದಾಗಿ ತಿಳಿಸಿದ್ದಾರೆ. ಆದರೆ ವಾಸ್ತವವಾಗಿ ತಾಲೂಕಿನಲ್ಲಿ ಸುಮಾರು ೨೦೦೦ ರೈತರ ಸಾಲಮನ್ನಾ ಮಾತ್ರ ಆಗಿದೆ.

ಸುಮಾರು ೪೦೦೦ ಮಂದಿಯ ಸಾಲಮನ್ನಾದ ಮೊತ್ತ ಆಧಾರ್ ನಂಬರ್, ರೇಷನ್ ಕಾರ್ಡ್ ನಂಬರ್, ಪಹಣಿಪತ್ರದ ಹೆಸರು ಲಿಂಕ್ ಆಗಿರದ ಕಾರಣ, ಅಕೌಂಟ್ ನಂಬರ್ ಸರಿಯಾಗಿ ನಮೂದಿಸದ ಕಾರಣ ಹಿಂದಕ್ಕೆ ಹೋಗಿರುವುದು ಅಧಿಕಾರಿಗಳು ಕೆಡಿಪಿ ಸಭೆಯಲ್ಲಿ ನೀಡಿದ ಮಾಹಿತಿಯಿಮದ ತಿಳಿದುಬಂದಿದೆ. ಇನ್ನುಳಿದ ೮೦೦೦ ಮಂದಿಯ ಸಾಲಮನ್ನಾದ ಮಾಹಿತಿ ಏನೆಂದು ಗೊತ್ತಾಗಿಲ್ಲ. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿದಾಗ ಡಾಟಾ ಎಂಟ್ರಿಗಳಲ್ಲಿ ಆದ ಹಲವು ವಿಧದ ತಪಾವತುಗಳು ಮತ್ತು ಸರಕಕಾರ ರಚಿಸಿದ ತಂತ್ರಾಂಶದ ಕೆಲವು ಸಮಸ್ಯೆಗಳಿಂದ ಈ ರೀತಿ ರೈತರ ಹಣ ವಾಪಾಸು ಹೋಗಿರುವುದಾಗಿ ಗೊತ್ತಾಗಿದೆ.

ತಾಲೂಕಿನ ಬಹುತೇಕ ರೈತರಿಗೆ ರೂಪೇಕಾರ್ಡ್ ಆಗಿರದಿದ್ದಾಗ ಹಿಂದಿನ ಸಹಕಾರ ಸಚಿವರು ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಆಗಮಿಸಿದ ಸಂದರ್ಭ ಸಾಲ ಮನ್ನಾ ಮೊತ್ತವನ್ನು ಈ ಹಿಂದಿನಂತೆ ಸಹಕಾರ ಸಂಘಗಳಲ್ಲಿ ರೈತರು ಹೊಂದಿರುವ ಉಳಿತಾಯ ಖಾತೆಗೆ ವರ್ಗಾಯಿಸಿರುವುದಾಗಿ ಹೇಳಿದ್ದರು. ನಂತರ ೨೪-೯-೨೦೧೮ರ ಸುತ್ತೋಲೆಯಲ್ಲಿ ೩ನೇ ಅಂಶದಲ್ಲಿ ‘ಸಾಲಮನ್ನಾ ಮೊತ್ತವನ್ನು ರೈತರ ಉಳಿತಾಯ ಖಾತೆಗೆ ಡಿಬಿಡಿ ಮೂಲಕ ಜಮಾ ಮಾಡಲಾಗುವುದು ಎಂಬ ಷರತ್ತನ್ನು ಸಡಿಲಿಸಿ ರೈತರ ಉಳಿತಾಯ ಖಾತೆಗೆ ಸಾಲಮನ್ನಾ ಮೊತ್ತವನ್ನು ಜಮಾ ನೀಡಿ ಡಿಸಿಸಿ ಬ್ಯಾಂಕ್‌ಗಳು ಈ ಮೊತ್ತವನ್ನು ಸಂಘ ಅಥವಾ ಬ್ಯಾಂಕ್‌ನಲ್ಲಿನ ರೈತರ ಖಾತೆಗಳಿಗೆ ಕೂಡಲೇ ವರ್ಗಾಯಿಸುವುದು ಎಂದು ತಿದ್ದುಪಡಿ ಮಾಡಿರುವುದರಿಂದ ರೂಪೇಕಾರ್ಡ್ ಬದಲಿಗೆ ಸಂಘದ ಖಾತೆಗಳಿಗೆ ಸಾಲಮನ್ನಾ ಮೊತ್ತ ಬರುವುದೆಂದು ತಪ್ಪಾಗಿ ಅರ್ಥೈಸಿ ಗೊಂದಲ ಉಂಟಾಗಿರುತ್ತದೆ.

ಹಲವು ರೈತರ ರೂಪೇಖಾತೆಗಳು ದಾಖಲೆಗಳು ಅಪ್‌ಲೋಡ್ ಆದ ನಂತರ ಡಿಸಿಸಿ ಬ್ಯಾಂಕ್‌ನಲ್ಲಿ ತೆರೆದಿರುವುದರಿಂದ, ತಂತ್ರಾಂಶದಲ್ಲಿ ಖಾತೆಸಂಖ್ಯೆ ‘೦’ ಎಂದಿರುವ ಕಾರಣ ಸಾಲಮನ್ನಾದ ಮೊತ್ತ ಬಂದಿರುವುದಿಲ್ಲ. ಹಾಗಾಗಿ ಈ ವಿಷಯದಲ್ಲಿ ರೈತರ ಯಾವುದೇ ತಪ್ಪಿಲ್ಲದ ಕಾರಣ ತಂತ್ರಾಂಶದಲ್ಲಿ ಉಳಿತಾಯ ಖಾತೆ ಸಂಖ್ಯೆ ಎಡಿಟ್‌ಗೆ ಅವಕಾಶ ನೀಡಿ ವಾಪಾಸ್ ಹೋಗಿರುವ ಮೊತ್ತವನ್ನು ಪುನಃ ರೈತರ ಉಳಿತಾಯ ಖಾತೆಗೆ ವರ್ಗಾಯಿಸಲು ಅವಕಾಶ ನೀಡಬೇಕು. ಅಥವಾ ಈ ಹಿಂದೆ ರೂ. ೫೦೦೦೦ ಸಾಲ ಮನ್ನಾದ ಮೊತ್ತ ಬಿಡುಗಡೆಯಾದಂತೆ ನೇರವಾಗಿ ಡಿಸಿಸಿ ಬ್ಯಾಂಕ್‌ಗೆ ವರ್ಗಾಯಿಸಿ, ಅಲ್ಲಿಂದ ಸಹಕಾರ ಸಂಘಗಳ ಚಾಲ್ತಿ ಖಾತೆ ಮುಖಾಂತರ ರೈತರ ಖಾತೆಗೆ ವರ್ಗಾಯಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಹವಾಮಾನ ವೈಪರಿತ್ಯದಿಂದಾಗಿ ಬೆಳಲೆ ಹಾಳಾದರೆ ವಿಮೆ ಪಡೆಯುವುದಕ್ಕಾಗಿ ರೈತರಿಂದ, ರಾಜ್ಯ ಸರಕಾರದಿಂದ ಮತ್ತು ಕೇಂದ್ರ ಸರಕಾರದಿಂದ ಪ್ರೀಮಿಯಂ ಹಣ ವಿಮಾ ಕಂಪೆನಿಗೆ ಪಾವತಿಯಾಗುತ್ತಿದ್ದು, ಬಹುತೇಕ ರೈತರಿಗೆ ಅದರಿಂದ ಪ್ರಯೋಜನ ಬಂದಿಲ್ಲ. ಇದನ್ನು ಕೂಡಾ ಜನಪ್ರತಿನಿಧಿಗಳು ಮತ್ತು ಸರಕಾರ ಗಂಭೀರವಾಗಿ ಅಧ್ಯಯನ ಮಾಡಿ ರೈತರಿಗೆ ವಿಮಾಹಣ ದೊರೆಯುವಂತೆ ಮಾಡಬೇಕು. ಮತ್ತು ಬೆಳೆ ವಿಮೆಯನ್ನು ಕಡ್ಡಾಯ ಮಾಡಬಾರದು” ಎಂದು ಅವರು ಒತ್ತಾಯಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.