HomePage_Banner
HomePage_Banner

ಸಂಪಾಜೆ: ಪ್ಲಾಸ್ಟಿಕ್ ನಿಷೇಧದ ಅಂಗವಾಗಿ ಬಟ್ಟೆ ಕೈಚೀಲ ಬಿಡುಗಡೆ ಕಾರ್ಯಕ್ರಮ

ಗಾಂಧಿ ಜಯಂತಿ ಪ್ರಯುಕ್ತ ಸಂಪಾಜೆ ಶಕ್ತಿ ಗೊಂಚಲು ಸ್ತ್ರೀಶಕ್ತಿ ಸಂಘದ ವತಿಯಿಂದ ಪ್ಲಾಸ್ಟಿಕ್ ನಿಷೇಧದ ಅಂಗವಾಗಿ ಬಟ್ಟೆಯ ಕೈಚೀಲ ಬಿಡುಗಡೆ ಕಾರ್ಯಕ್ರಮವು ಅ.2 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಮುಂಡಡ್ಕ, ಉಪಾಧ್ಯಕ್ಷೆ ಮೋಹಿನಿ ಪೆಲ್ತಡ್ಕ, ಪ್ರಾ.ಕೃ.ಪ. ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಪಂಚಾಯತ್ ಸದಸ್ಯರಾದ ಜಿ.ಕೆ. ಹಮೀದ್’ ಲೂಕಾಸ್ ಟಿ.ಐ., ನಾಗೇಶ್ ಪಿ.ಕೆ., ಷಣ್ಮುಗ, ಕಾರ್ಮಿಕ ಸಂಘದ ಅಧ್ಯಕ್ಷ ಶ್ರೀಧರ ಕೆ.ಕೆ., ಸಿಐಟಿಯು ಅಧ್ಯಕ್ಷ ಕೆ.ಪಿ.ಜಾನಿ, ಲಯನ್ಸ್ ಕ್ಲಬ್ ಸಂಪಾಜೆ ಇದರ ಅಧ್ಯಕ್ಷ ಕಿಶೋರ್ ಪಿ.ಬಿ., ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ರವಿ ಶ್ರೀ, ಸುಳ್ಯ ತಾಲ್ಲೂಕು ಬ್ಲಾಕ್ ಸೊಸೈಟಿ ಉಪಾಧ್ಯಕ್ಷೆ ಸರೋಜ ಎಂ.ಕೆ., ಶಕ್ತಿ ಸ್ತ್ರೀಶಕ್ತಿ ಸಂಘದ ಗೊಂಚಲಿನ ಅಧ್ಯಕ್ಷೆ ರತ್ನಾವತಿ ಕೆ.ಎಚ್.ಉಪಸ್ಥಿತರಿದ್ದರು.ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅತಿಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಗ್ರಾಮದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಬ್ಲಾಕ್ ಸೊಸೈಟಿ ಸ್ಥಾಪಕ ಅಧ್ಯಕ್ಷೆ ಯಮುನಾ ಬಿ.ಎಸ್. ಹಾಗೂ ಸ್ತ್ರೀಶಕ್ತಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಸಂಘದ ಸದಸ್ಯರ ರಕ್ತ ವರ್ಗೀಕರಣ ಶಿಬಿರ ನಡೆಯಿತು.
ಬಯೋ ಕೇರ್ ಕ್ಲಿನಿಕಲ್ ಲ್ಯಾಬೊರೇಟರಿ ಕಲ್ಲುಗುಂಡಿ ಇದರ ಮನೋಜ್ ಸಹಕರಿಸಿದರು. ಪುಷ್ಪಾ ಅಂಗನವಾಡಿ ಕಾರ್ಯಕರ್ತೆ ಪ್ರಾರ್ಥಿಸಿ, ಸವಿತಾ ವಂದಿಸಿದರು. ಕಾಂತಿ ಬಿ.ಎಸ್. ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.