HomePage_Banner
HomePage_Banner
HomePage_Banner
HomePage_Banner

ಮಕ್ಕಳ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜಿ ಆಹ್ವಾನ

ರಾಜ್ಯ ಬಾಲಭವನವು 2019ನೇ ಸಾಲಿನ ಕಲಾಶ್ರೀ ಪ್ರಶಸ್ತಿ ಶಿಬಿರವನ್ನು ವಿವಿಧ ಪ್ರಕಾರಗಳಲ್ಲಿ ನಡೆಸುವುದರೊಂದಿಗೆ, ಮಕ್ಕಳಲ್ಲಿರುವ ಅವ್ಯಕ್ತ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರ ಮೂಲಕ ಅವರಲ್ಲಿ ಆತ್ಮಸ್ಥೈರ್ಯ, ಭರವಸೆ ದೃಢವಾದ ವ್ಯಕ್ತಿತ್ವ, ವಿಚಾರವಂತಿಕೆ, ಕಲಾಪ್ರತಿಭೆಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಪ್ರತಿಭಾವಂತ ಮಕ್ಕಳನ್ನು ಆಯ್ದು ಕಲಾಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡುವ ಮುಖ್ಯ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಅದರಂತೆ ಈ ಕೆಳಕಂಡ ನಾಲ್ಕು ಕ್ಷೇತ್ರಗಳಲ್ಲಿ ತಾಲೂಕು ಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಭಾಗವಹಿಸಲು ವಯೋಮಿತಿ (ದಿನಾಂಕ: ೦೧-೦೪-೨೦೧೯ಕ್ಕೆ ೯ವರ್ಷಕ್ಕಿಂತಲೂ ಕಡಿಮೆ ಅಥವಾ 16ವರ್ಷ ಮೇಲ್ಪಟ್ಟಿರಬಾರದು.)
ಸೃಜನಾತ್ಮಕ ಕಲೆ: ಚಿತ್ರಕಲೆ, ಕರಕುಶಲ, ಜೇಡಿಮಣ್ಣಿನ ಕಲೆ (ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸುವುದು), ಸೃಜನಾತ್ಮಕ ಬರವಣಿಗೆ: ಕಥೆ, ಕವನ, ಪ್ರಬಂಧ ಬರೆಯುವುದು (ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸುವುದು), ಸೃಜನಾತ್ಮಕ ಪ್ರದರ್ಶನ ಕಲೆ: ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಯಕ್ಷಗಾನ, ಯಕ್ಷಿಣಿ ಪ್ರದರ್ಶನ, ಸುಗಮ ಸಂಗೀತ, ಏಕಪಾತ್ರಾಭಿನಯ, ಯೋಗ ನೃತ್ಯ, ಮ್ಯಾಜಿಕ್ ಇತ್ಯಾದಿ (ಯಾವುದಾದರೊಂದು ಕಲೆಯನ್ನು ಮಾತ್ರ ಪ್ರದರ್ಶಿಸಲು ಅವಕಾಶವಿರುತ್ತದೆ), ವಿಜ್ಞಾನದಲ್ಲಿ ನೂತನ ಅವಿಷ್ಕಾರ: ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಒಂದು ವಿಷಯದ ಬಗ್ಗೆ ಮಾದರಿ ಪ್ರದರ್ಶನ ಹಾಗೂ ವಿವರಣೆ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತೀರ್ಪುಗಾರರ ಇನ್ನಿತರ ಪ್ರಶ್ನೆಗಳಿಗೆ ಉತ್ತರ.
ಈ ಮೇಲ್ಕಂಡ ಸ್ಪರ್ಧೆಗೆ ಭಾಗವಹಿಸುವ ಮಕ್ಕಳು ಅರ್ಜಿಯನ್ನು ಸುಳ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಿಂದ ಸಂಬಂಧಪಟ್ಟ ಮಾಹಿತಿ ಪಡೆದು ಸಮರ್ಪಕವಾಗಿ ಭರ್ತಿಮಾಡಿದ ಅರ್ಜಿಯನ್ನು1 ಭಾವಚಿತ್ರದೊಂದಿಗೆ ಸಿ.ಡಿ.ಪಿ.ಒ ರಿಗೆ ಅ.22ರರೊಳಗೆ ಸಲ್ಲಿಸತಕ್ಕದು. ಸ್ಪರ್ಧಿಗಳು ಅ.23ರಂದು ಪೂರ್ವಾಹ್ನ 9.30ಕ್ಕೆ ಕೆವಿಜಿ ಪುರಭವನ ಸುಳ್ಯ ಇಲ್ಲಿ ಹಾಜರಿರುವುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: 08257- 230239 ಸಂಪರ್ಕಿಸುವಂತೆ ಪ್ರಕಟಣೆ ಕೋರಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.