HomePage_Banner
HomePage_Banner

ಅಯ್ಯನಕಟ್ಟೆ ಉಳ್ಳಾಕುಲು ದೈವಸ್ಥಾನದ ವತಿಯಿಂದ ತಂತ್ರಿಗಳ ಭೇಟಿ

 

ಮುಂದಿನ ಜನವರಿ ತಿಂಗಳಲ್ಲಿ ನಡೆಯಲಿರುವ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಸ್ಥಾನಗಳ ಬ್ರಹ್ಮಕಲಶೋತ್ಸವದ ಬಗ್ಗೆ ವೇ.ಮೂ.ಶ್ರೀ ನೀಲೇಶ್ವರ ಕೆ.ಯು.ದಾಮೋದರ ತಂತ್ರಿಗಳವರನ್ನು ಭೇಟಿಯಾಗಿ ವಿಚಾರ ವಿಮರ್ಶೆ ನಡೆಸಲಾಯಿತು.

ದೈವಜ್ಞರು ಸೂಚಿಸಿದ ಮೇರೆಗೆ ತಂತ್ರಿಗಳವರ ಮಾರ್ಗದರ್ಶನದಂತೆ ಜನವರಿ 26 ರಂದು ತಂಟೆಪ್ಪಾಡಿಯಲ್ಲಿರುವ ಶ್ರೀ ಶಿರಾಡಿ ದೈವಸ್ಥಾನ, ನಾಗನಕಟ್ಟೆ, ಬಾಳಿಲ ನೆಟ್ಟಾರಿನಲ್ಲಿರುವ ನಾಗನಕಟ್ಟೆಯ ಪ್ರತಿಷ್ಟಾ ಬ್ರಹ್ಮಕಲಶೋತ್ಸವ, ಜನವರಿ 27 ರಂದು ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಕಲ್ಲಮಾಡದ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಜರುಗಲಿವೆ. ನಂತರ ಜ. 28, 29 ಹಾಗೂ 30 ರಂದು ಅಯ್ಯನಕಟ್ಟೆ ಜಾತ್ರೆ ನಡೆಯಲಿದೆ ಎಂದು ಬ್ರಹ್ಮ ಕಲಶೋತ್ಸವ ಸಮಿತಿ ಪ್ರಧಾನ‌ ಕಾರ್ಯದರ್ಶಿ ಪಿ.ಜಿ.ಎಸ್.ಎನ್. ಪ್ರಸಾದ್ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.