HomePage_Banner
HomePage_Banner

ಡಂಪಿಂಗ್ ಯಾರ್ಡ್ ಆಗಿರುವ ನ.ಪಂ. ಕಚೇರಿ ಆವರಣ- ಕಸ ವಿಲೇವಾರಿಗೆ ಜಾಗ ಹುಡುಕದ ಅಧಿಕಾರಿಗಳು-ಜನಪ್ರತಿನಿಧಿಗಳು

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಸಂಗ್ರಹವಾದ ಹಸಿಕಸ ಮತ್ತು ಒಣ ಕಸವನ್ನು ವಿಲೇವಾರಿ ಮಾಡಲು ಪ್ರತ್ಯೇಕ ಜಾಗ ಇಲ್ಲದೆ ಸುಮಾರು ಒಂದೂವರೆ ವರ್ಷದಿಂದ ನಗರ ಪಂಚಾ ಯತ್ ಆವರಣದಲ್ಲೇ ಹಾಕಿ ಕಸ ವಿಂಗಡಣೆ ಕಾಮ ಗಾರಿ ನಡೆಸುತ್ತಿರುವುದರಿಂದ ಮತ್ತು ವಿಂಗಡಿತ ಕಸವನ್ನು ಬೇರೆಲ್ಲಿಗೂ ಕೊಂಡೊಯ್ಯಲಾರದೆ ಅಲ್ಲೇ ಇರಿಸಬೇಕಾಗಿ ಬಂದಿರುವುದರಿಂದ ನ.ಪಂ. ಕಚೇರಿ ಆವರಣ ಡಂಪಿಂಗ್ ಯಾರ್ಡ್ ಆಗಿರುವ ಪರಿವರ್ತ ನೆಯಾಗಿದ್ದು ಗಬ್ಬುನಾತ ಆರಂಭವಾಗಿದೆ. ಇನ್ನು ಒಂದೆರಡು ತಿಂಗಳು ಕಳೆದರೆ ಕಚೇರಿಯೊಳಗೆ ಸಿಬ್ಬಂದಿ ಕೆಲಸ ಮಾಡಲು ಅಸಾಧ್ಯವಾಗುತ್ತದೆ. ಅಕ್ಕಪಕ್ಕದ ನಿವಾಸಿಗಳು ಪ್ರತಿರೋಧದ ಧ್ವನಿ ಎತ್ತುತ್ತಾರೆ. ಕಸವಿಲೇವಾರಿಗೆ ಅತ್ಯಂತ ನಿಧಾನಗತಿಯ ಉಪಕ್ರಮ ನಡೆಸುತ್ತಿರಯುವ ಅಧಧಿಕಾರಿಗಳು ಹಾಗೂ ಇಚ್ಛಾಶಕ್ತಿ ತೋರದೆ ತಮಗೂ ನಗರದ ಕಸಕ್ಕೂ ಸಂಬಂಧವೇ ಇಲ್ಲದಂತೆ ಇರುವ ಉನ್ನತ ಜನಪ್ರತಿನಿಧಿಗಳು ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾಗಿ ಬರುತ್ತದೆ.
ನಗರ ಪಂಚಾಯತ್‌ನ ಎದುರುಗಡೆ ವಾಹನ ನಿಲುಗಡೆಗಾಗಿ ನಿರ್ಮಿಸಲಾಗಿರುವ ದೊಡ್ಡ ಶೆಡ್‌ನಲ್ಲಿ ಹಸಿಕಸ-ಒಣಕಸ ವಿಂಗಡಿಸಲು ಆರಂಭಿಸಿಒಂದು ವರ್ಷ ಕಳೆದಿದೆ ಅಲ್ಲಿ ವಿಂಗಡಿಸಲ್ಪಟ್ಟ ಹಸಿಕಸವನ್ನು ಹಳೆಗೇಟಿನ ಸಮೀಪದ ವಿನೋದ್‌ಗ ಲಸ್ರಾದೊರವರ ತೋಟಕ್ಕೆ ಕೊಂಡೊಯ್ದು ಕಳೆದ 11
ತಿಂಗಳಿನಿಂದ ಹಾಕಲಾಗುತ್ತಿತ್ತು. ಇದೀಗ ಸ್ವಚ್ಛ ನಗರ ವಾಟ್ಸಾಪ್ ಗ್ರೂಪಿನಲ್ಲಿ ಮಹನೀಯರೊಬ್ಬರು ಮಾಡಿದ ಆರೋಪದಿಂದ ಅಸಮಾಧಾನಿತರಾದ ವಿನೋದ್‌ರವರು ಆ ಆರೋಪದ ಬಗ್ಗೆ ವಿಚಾರಣೆ ನಡೆಯಲಿಲ್ಲವೆಂದು ಬೇಸರಗೊಂಡು ಹಸಿಕಸವನ್ನು ತನ್ನ ತೋಟಕ್ಕೆ ತಂದು ಹಾಕುವುದು ಬೇಡವೆಂದು ಹೇಳಿದ್ದರಿಂದ, ಒಂದು ವಾರದಿಂದ ಹಸಿಕಸ ಅವರ ತೋಟಕ್ಕೆ ಹೋಗುತ್ತಿಲ್ಲ. ಅದು ಅ.೧೨ ರಿಂದ ಕಲ್ಲುಚೆರ್ಪೆ ಕಸ ಹಾಕುವ ಸ್ಥಳಕ್ಕೆ ಮತ್ತೆ ಹೋಗ ತೊಡಗಿರುವುದರಿಂದ ಅಲ್ಲಿನವರು ಪ್ರತಿಭಟನೆಯ ನಿರ್ಧಾರ ಮಾಡಿದ್ದಾರೆ.
ಹಸಿಕಸ-ಒಣಕಸ ಬೇರ್ಪಡಿಸಲು ಆರಂಭಿಸಿದ ಆರಂಭದಲ್ಲಿ ದೊರೆತ ಪ್ಲಾಸ್ಟಿಕ್‌ಗಳನ್ನು ಗೋಣಿಯಲ್ಲಿ ತುಂಬಿಸಿ ನ.ಪಂ. ಕಚೇರಿಯ ಹಿಂಬದಿ ಇರುವ ಹಳೆಯ ದಾಸ್ತಾನು ಕಟ್ಟಡದಲ್ಲಿ ದಾಸ್ತಾನು ಇಡಲಾಗಿದೆ. ಅದು ಅಲ್ಲಿ ತುಂಬಿ ಹೋಗಿದೆ. ನ.ಪಂ. ಎದುರಿನ ದೊಡ್ಡ ಶೆಡ್‌ನಲ್ಲಿ ಕಸ ತುಂಬಿ ತುಳುಕ ತೊಡಗಿದೆ. ಗಾಳಿ ಬಂದಾಗ ದುರ್ನಾತ ಮೂಗಿಗೆ ಬಡಿಯ ತೊಡಗಿದೆ. ಸಂಜೆ ೫ ಗಂಟೆಯಾಗುತ್ತಿದ್ದಂತೆ ಸೊಳ್ಳೆಗಳು ಧಾಳಿ ಆರಂಭಿಸತೊಡಗಿವೆ. ಈಗ ನಗರ ಪಂಚಾಯತ್‌ನ ಹಿಂಬದಿಯ ಸ್ಥಳದಲ್ಲಿ ಕಸ ರಾಶಿ ಹಾಕಿದ್ದು, ಹಿಂಬದಿ ಹೋಗಿ ನೋಡಿದರೆ ಅಲ್ಲಿ ಹಾಕಲಾಗಿರುವ ಕಸದ ಅಗಾಧತೆ ಕಾಣಸಿಗುತ್ತದೆ. ನಗರ ಪಂಚಾಯತ್ ಕಚೇರಿಯ ಮುಂಬದಿ ಮತ್ತು ಹಿಂಬದಿ ಕಸ ತುಂಬಿ ಹೋಗಿದ್ದು, ಇದು ಅಧಿಕಾರ ವಹಿಸಿಕೊಳ್ಳಲಿರುವ ನೂತನ ನ.ಪಂ. ಆಡಳಿತಕ್ಕೆ ಬೃಹತ್ ಸವಾಲೊಂದನ್ನು ನಿಭಾಯಿಸಬೇಕಿದೆ.

ಕಲ್‌ಚೆರ್ಪೆಯ ಸ್ಥಳಕ್ಕೆ ಕಸ ಕೊಂಡೊಯ್ಯಲು ಆಗದೆ ಸ್ಥಗಿತಗೊಳಿಸಿ ಒಂದು ವರ್ಷವಾದರೂ ಪರ್ಯಾಯ ಸ್ಥಳದ ಹುಡುಕಾಟ ಇನ್ನು ಆಗದಿರುವುದು ಆಶ್ಚರ್ಯದ ವಿಚಾರ. ಜಾಗವೂ ಗಿಲ್ಲ – ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಯಂತ್ರ ಕೂಡಾ ಬಂದಿಲ್ಲ. ಪ್ರಸ್ತಾವ ಮಾತ್ರ ಹಲವು ವರ್ಷಗಳಿಂದ ನ.ಪಂ. ಮುಂದಿದೆ. ತಹಶೀಲ್ದಾರರೇ ಆಡಳಿತಾಧಿಕಾರಿಯಾಗಿರುವ ಈಗಲಾದರೂ ಕಸಕ್ಕೆ ಸ್ಥಳ ಕಾದಿರಿಸುವ ಪ್ರಕ್ರಿಯೆ ನಡೆಯುವುದೇ ಎಂದು ಜನ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ನಾಯಿ ಹೂಳಲಾಗಿದೆ
ಒಂದೂವರೆ -ಎರಡು ವರ್ಷದ ಹಿಂದೆ ನ.ಪಂ. ವತಿಯಿಂದ ಬೀದಿನಾಯಿಗಳ ಸಂಹಾರ ನಡೆಸಿದ ಬಳಿಕ ಅವುಗಳನ್ನು ವಿಲೇವಾರಿ ಮಾಡಲು ಜಾಗ ಸಿಗದೆ, ನ.ಪಂ. ಕಚೇರಿಯ ಹಿಂಬದಿ ಹೊಂಡ ತೋಡಿ ಸುಮಾರು ೭೫ ನಾಯಿಗಳ ಶವಗಳನ್ನು ಹಾಕಿ ಮಣ್ಣು ಹಾಕಿ ಮುಚ್ಚಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.