HomePage_Banner
HomePage_Banner

ಗುತ್ತಿಗಾರಿನಲ್ಲಿ ಮಕರ ಸೌಹಾರ್ದ ಸಹಕಾರಿ ನಿಯಮಿತ ಉದ್ಘಾಟನೆ

ಗುತ್ತಿಗಾರಿನ ಮುತ್ತಪ್ಪನಗರದ ಬಿ.ಯಂ.ಯಸ್.ಕಾಂಪ್ಲೆಕ್ಸ್ ನಲ್ಲಿ ಇಂದು ಮಕರ ಸೌಹಾರ್ದ ಸಹಕಾರಿ ನಿಯಮಿತ ಶುಭಾರಂಭಗೊಂಡಿದೆ.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸಂಘವನ್ನು ಉದ್ಘಾಟಿಸಿದರು.


ಅತಿಥಿಗಳಾಗಿ ಡಿ.ಸಿ.ಸಿ. ಬ್ಯಾಂಕ್ ನ ನಿರ್ದೇಶಕ ದೇವರಾಜ ಕೆ.ಎಸ್, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ದ ಅಧ್ಯಕ್ಷ ಕೇಶವ ಭಟ್ ಮುಳಿಯ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್ ಬಂಗೇರ, , ಬಿ.ಯಂ.ಯಸ್. ಕಾಂಪ್ಲೆಕ್ಸ್ ನ ಮಾಲಕ ಬಾಲಕೃಷ್ಣ ಕೆ ಉಪಸ್ಥಿತರಿದ್ದಾರೆ. ವೇದಿಕೆಯಲ್ಲಿ ಮಕರ ಸೌಹಾರ್ದ ಸಹಕಾರಿ ನಿಯಮಿತ ಗುತ್ತಿಗಾರು ಇದರ ಆಡಳಿತ ಮಂಡಳಿ ಅಧ್ಯಕ್ಷ ಮೋಹನ ಕೆ, ಕಾರ್ಯನಿರ್ವಹಣಾಧಿಕಾರಿ ವೆಂಕಟ್ರಮಣ ಕೆ.ವಿ ಹಾಗೂ ಸಂಸ್ಥೆಯ ಉಪಾಧ್ಯಕ್ಷೆ ರುಕ್ಮಿಣಿ ಹಾಗೂ ಸಂಸ್ಥೆಯ ನಿರ್ದೇಶಕರು ಉಪಸ್ಥಿತರಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.