HomePage_Banner
HomePage_Banner

ಚೊಕ್ಕಾಡಿ: ಶ್ರೀರಾಮ ದೇವಾಲಯದಲ್ಲಿ ಸಾಮೂಹಿಕ ಶನಿಪೂಜೆ


ಶ್ರೀರಾಮ ದೇವಾಲಯ ಚೊಕ್ಕಾಡಿಯಲ್ಲಿ ಸಾಮೂಹಿಕ ಶನಿ ಪೂಜೆ ಮತ್ತು ಬಲಿವಾಡು ಕೂಟ ಅ. 19 ರಂದು ವೇ.ಮೂ. ಕಾಯಾರ ಶಾಂತಕುಮಾರ್ ಭಟ್ ರ ನೇತೃತ್ವದಲ್ಲಿ ದೇಸೀ ಭವನದಲ್ಲಿ ನಡೆಯಿತು.

ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಮಹೇಶ್ ಭಟ್ ಚೂಂತಾರು, ಉಪಾಧ್ಯಕ್ಷ ಕೃಷ್ಣಮೂರ್ತಿ ನೇಣಾರು, ಕಾರ್ಯದರ್ಶಿ ಗಣೇಶ್ ಮೂರ್ತಿ ನೇಣಾರು, ಸಮಿತಿ ಸದಸ್ಯರುಗಳಾದ ಕಾರ್ತಿಕೇಯ ಹೆಬ್ಬಾರ್ ಶೇಣಿ, ಗಣಪಯ್ಯ ವಾಲ್ತಾಜೆ, ರಾಮಚಂದ್ರ ಕೋಟೆ, ಸತ್ಯವೆಂಕಟೇಶ್ ಹೆಬ್ಬಾರ್, ಆನೆಕಾರ ಗಣಪಯ್ಯ, ಆದರ್ಶ ನೇಣಾರು, ಸಿದ್ಧಿ ವಿನಾಯಕ ಭಟ್ ಚೂಂತಾರು, ರಾಮಚಂದ್ರ ಆನೆಕಾರ, ನವೀನ ಅರಳಿಕಟ್ಟೆ, ಪಿ.ಪಿ. ಜಯರಾಮ ಪೋನಡ್ಕ, ಕೃಷ್ಣಪ್ರಸಾದ್ ಕಾಂಚೋಡು, ಗೋಪಾಲಕೃಷ್ಣ ಭಟ್ ಕಟ್ಟ, ನಾರಾಯಣ ಭಟ್ ಕಾಂಚೋಡು ಅರ್ಚಕ ರಘುರಾಮ ಭಟ್, ಭಕ್ತವೃಂದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶನಿ ಪೂಜೆಯ ಬಳಿಕ ಮಂಗಳಾರತಿ, ಶ್ರೀರಾಮ ದೇವಾಲಯದಲ್ಲಿ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನ‌ ಪ್ರಸಾದ ನೆರವೇರಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.