ಅಯ್ಯನಕಟ್ಟೆಯ ನಿವೃತ್ತ ಟೀಚರ್ ಪೂಜೆಗೆ ಹೋಗಿ ಹಿಂತಿರುಗುವಾಗ ದುರಂತ

Advt_Headding_Middle
Advt_Headding_Middle
Advt_Headding_Middle

ಬಸ್ ಗುದ್ದಿ ಮಹಿಳೆ ಮೃತ್ಯು

ಇಂದು ಸಂಜೆ 4 ಗಂಟೆಯ ಸುಮಾರಿಗೆ ಸುಳ್ಯದ ಹಳೆಗೇಟು ವಿದ್ಯಾನಗರದ ಬಳಿ ಬಸ್ ಗುದ್ದಿ ಸಾವನ್ನಪ್ಪಿದ  ಘಟನೆ ವರದಿಯಾಗಿದೆ.

ಮೀನಾಕ್ಷಿ ಟೀಚರ್‌ರವರು ಅಯ್ಯನಕಟ್ಟೆ ಶಾಲೆಯಲ್ಲಿ ಸೇವೆ ಸಲ್ಲಿಸಿ ಸುಮಾರು 5 ವರ್ಷಗಳ ಹಿಂದೆ ನಿವೃತ್ತರಾಗಿದ್ದರು.

ಪತಿ ಹರಿಪ್ರಸಾದ್‌ರೊಂದಿಗೆ ಮೀನಾಕ್ಷಿ ಟೀಚರ್

ಗಾಂಧಿನಗರ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿದ್ದು ನಿವೃತ್ತರಾಗಿರುವ ಮಂಡೆಕೋಲು ಬೊಳುಗಲ್ಲಿನ ಹರಿಪ್ರಸಾದ್ ಮಾಸ್ತರ್‌ರವರ ಧರ್ಮಪತ್ನಿ ಮೀನಾಕ್ಷಿಯವರು ಮತ್ತು ಹರಿಪ್ರಸಾದ್‌ರವರು ಇಂದು ಬೆಳಿಗ್ಗೆ ಮಂಡೆಕೋಲು ಬೊಳುಗಲ್ಲು ಮನೆಯಲ್ಲಿದ್ದ ಸತ್ಯನಾರಾಯಣ ಪೂಜೆಗೆ ಹೋಗಿ ಸುಳ್ಯಕ್ಕೆ ಹಿಂತಿರುಗಿ ಪೈಚಾರು ಕಡೆಗೆ ಹೋಗುವ ಸರ್ವಿಸ್ ರಿಕ್ಷಾದಲ್ಲಿ ಹಳೆಗೇಟು ವಿದ್ಯಾನಗರದಲ್ಲಿರುವ ಮನೆಗೆ ಹಿಂತಿರುಗುತ್ತಿದ್ದರು. ವಿದ್ಯಾನಗರದಲ್ಲಿ ರಿಕ್ಷಾದಿಂದಿಳಿದು ಇಬ್ಬರೂ ರಸ್ತೆ ದಾಟುತ್ತಿರುವಾಗ ಹರಿಪ್ರಸಾದ್‌ರವರು ರಸ್ತೆ ದಾಟಿ ಆಯಿತೆಂದೂ, ಮೀನಾಕ್ಷಿಯವರಿಗೆ  ಸುಬ್ರಹ್ಮಣ್ಯ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಸರಕಾರಿ ಬಸ್ ಗುದ್ದಿತೆಂದೂ ತಿಳಿದುಬಂದಿದೆ. ಗುದ್ದಿದ ರಭಸಕ್ಕೆ ರಸ್ತೆಗೆ ಬಡಿದು ತಲೆ ಒಡೆದುಹೋಗಿ ಮೀನಾಕ್ಷಿ ಟೀಚರ್ ಸ್ಥಳದಲ್ಲೇ ಕೊನೆಯುಸಿರೆಳೆದರು.

ಅವರು ಪತಿ, ಮಕ್ಕಳಾದ ಶೋಭಾ, ಶ್ರೀರಂಜನಿ, ಗುರುರಾಜ್, ಅಳಿಯಂದಿರು, ಸೊಸೆ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಅವರು ಕೊಯಿಕುಳಿ ಶಾಲೆಯಲ್ಲಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರಲ್ಲದೆ, ಶಾಂತಿನಗರ ಶಾಲೆಯಲ್ಲೂ ಹಲವು ವರ್ಷ ಕರ್ತವ್ಯ ನಿರ್ವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.