HomePage_Banner
HomePage_Banner

ಆರ್.ಎಸ್.ಎಸ್.ವತಿಯಿಂದ ತಾಲೂಕು ಆಸ್ಪತ್ರೆ ವಠಾರ ಸ್ವಚ್ಛತೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಿಂದ ಸುಳ್ಯ ತಾಲೂಕು ಆಸ್ಪತ್ರೆಯ ವಠಾರವನ್ನು ಸ್ವಚ್ಛಗೊಳಿಸುವ ಕಾರ್ಯ ಅ.೨೦ರಂದು ನಡೆಯಿತು. ಸುಮಾರು 7೦ ರಷ್ಟು ಸ್ವಯಂ ಸೇವಕರು ಬೆಳಗ್ಗೆ 7 ಗಂಟೆಯಿಂದ 1೦ ಗಂಟೆ ವರೆಗೆ ಸ್ವಚ್ಛತೆ ನಡೆಸಿದರು. ವಠಾರದಲ್ಲಿದ್ದ ಪ್ಲಾಸ್ಟಿಕ್ ಇನ್ನಿತರ ಕಸಗಳನ್ನು ಹೆಕ್ಕಿದರಲ್ಲದೆ, ಸುತ್ತು ಬೆಳೆದಿದ್ದ ಹುಲ್ಲುಗಳನ, ಪೊದೆಗಳನ್ನು ಮಿಷನ್ ಮೂಲಕ ಕತ್ತರಿಸಿದರು. ಇದರ ಜತೆಗೆ ಸುಳ್ಯದ ಮಾದರಿ ಶಾಲೆಯ ಬಳಿ ಇರುವ ಅಂಗನವಾಡಿಯ ವಠಾರವನ್ನು ಸ್ವಚ್ಛಗೊಳಿಸಿದರು.

ನಗರದ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು, ಸುಳ್ಯ ನಗರ ಪಂಚಾಯತ್‌ನ ಮಾಜಿ ಹಾಗೂ ಹಾಲಿ ಸದಸ್ಯರುಗಳು, ಯುವ ಬ್ರಿಗೇಡ್‌ನ ಸದಸ್ಯರು ಈ ಕಾರ್ಯದಲ್ಲಿ ತೊಡಗಿಸಿಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.