HomePage_Banner
HomePage_Banner

ಕಾಯರ್ತೋಡಿ ಶ್ರೀ ಮಹಾವಿಷ್ಣುವಿಗೆ ಕಾರ್ತಿಕ ದೀಪೋತ್ಸವದ ಸಂಭ್ರಮ

ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಅ.27ರಿಂದ ನ.26 ರ ವರೆಗೆ ಒಂದು ತಿಂಗಳ ಕಾಲ ನಡೆಯುವ ಕಾಯರ್ತಿಕ ದೀಪೋತ್ಸವವು ನಡೆಯಲಿದ್ದು, ಇದರ ಆಮಂತ್ರಣ ಪತ್ರ ಬಿಡುಗಡೆಯು ಅ.20ರಂದು ನಡೆಯಿತು. ಸಭೆಯಲ್ಲಿ ಆಮಂತ್ರಣ ಪತ್ರಿಕೆಯ ವಿತರಣೆ, ಸ್ವಚ್ಛತಾ ಕಾರ್ಯಕ್ರಮ ದಿನಂಪ್ರತಿ ನಡೆಯುವ ಪೂಜೆಯ ವ್ಯವಸ್ಥೆಯಬಗ್ಗೆ, ದೀಪೋತ್ಸವಕ್ಕೆ ಪ್ರಾಯೋಜಕತ್ವ ಕೇಳುವ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮವು ಸಂಜೆ 6.00 ರಿಂದ ಭಜನಾ ಕಾರ್ಯಕ್ರಮದೊಂದಿಗೆ ಪ್ರಾರಂಭಗೊಂಡು ನಂತರ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣಾ ಕಾರ್ಯಕ್ರಮವು ನಡೆಯಲಿದೆ. ನ.26ರಂದು ಸಂಜೆ ಬೆಳ್ಳಿಹಬ್ಬ ಆಚರಣಾ ಸಮಿತಿ ಮಿತ್ರ ಬಳಗ ಕಾಯರ್ತೋಡಿ ಇದರ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ. ಈ ಸಂದರ್ಭದಲ್ಲಿ ಕಾರ್ತಿಕ ದೀಪೋತ್ಸವ ಸಮಿತಿಯ ಉಪಾಧ್ಯಕ್ಷ ಕುಮಾರ ಹಿಮಕರ ಕುದ್ಪಾಜೆ, ದೇವಿಪ್ರಸಾದ್ ಜಿ.ಸಿ., ಕಾರ್ಯದರ್ಶಿ ಕುಸುಮಾಧರ ಎ.ಟಿ., ಸೇವಾ ಸಮಿತಿ ಸಂಚಾಲಕ ಜಗದೀಶ ಕೆ.ಎಲ್., ಕೋಶಾಧಿಕಾರಿ ಚಂದ್ರಶೇಖರ ಅಡ್ಪಂಗಾಯ, ಸದಸ್ಯರುಗಳಾದ ಪದ್ಮನಾಭ ಅಳಿಕೆಮಜಲು, ವಿಠಲ ಬಾಣೂರು, ಶ್ರೀಧರ್ ಕೋಲ್ಚಾರು, ಚಂದ್ರಶೇಖರ್ ಕುದ್ಪಾಜೆ, ದಿವಾಕರ್ ರಾವ್ ಕಾಯರ್ತೋಡಿ, ಅನಿಲ್ ರಾಜ್ ಕೆ, ಜಯರಾಮ ಪಿ.ಜಿ., ಲೋಕೇಶ್ ದೇಂಗೋಡಿ, ಆನಂದ ನಡುಮುಟ್ಲು, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ದೀಪಕ್ ಆಚಾರ್ಯ, ತೀರ್ಥಾರಾಮ ನಡುಮನೆ, ಬೆಳ್ಯಪ್ಪ ಗೌಡ ಬಳ್ಳಡ್ಕ, ಚನ್ನಪ್ಪ ಪೂಜಾರಿ, ಶೇಷಪ್ಪ ನಾಯ್ಕ ಪರಿವಾರಕಾನ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಿಗಳಾದ ಡಿ.ಎಸ್. ಗಿರೀಶ್, ಶ್ರೀಮತಿ ಜಯಂತಿ ಹರಿಶ್ಚಂದ್ರ, ನವೀನ್ ಕಾಯರ್ತೋಡಿ, ಹಾಗೂ ಚಂದ್ರಶೇಖರ ರೈ ಸೂರ್ತಿಲ, ಪುರುಷೋತ್ತಮ ಅಮೈ, ಸಿ.ಬಿ.ದಾಮೋದರ, ಹೇಮಾ ಗೋಪಾಲ್, ನಮಿತಾ ಕುಸುಮಾಧರ, ಸುಜಾತಾ, ವಸಂತ ಬಿಳಿಯಾರು, ವಿಜಯ, ಸುಂದರಿ ಕುದ್ಪಾಜೆ, ದೇವಸ್ಥಾನದ ಮ್ಯಾನೇಜರ್ ದೇವಿಪ್ರಸಾದ್ ಕುದ್ಪಾಜೆ ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.