ಜೀವಿಸಲು ಆರ್ಥಿಕ ನೆರವು ಮತ್ತು ತಂಗಲು ಒಂದು ಸೂರು-ಅರಂತೋಡು ರಾಜೇಶ್ವರಿಯವರ ಅಳಲು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಬಳೆ ಮಾರಿ ಬಂದ ಆದಾಯದಲ್ಲಿ ಕಾಯಿಲೆ ಪೀಡಿತರಾಗಿ ಮಲಗಿದಲ್ಲಿರುವ ಗಂಡ ಹಾಗೂ ನಡೆದಾಡಲು ಕಷ್ಟವಾಗುವ ತಾಯಿಯನ್ನು ಕಷ್ಟಪಟ್ಟು ಸಾಕುತ್ತಿರುವ ಮಹಿಳೆಯ ಸಹಾಯಕ್ಕೆ ಊರವರು -ಉದಾರಿಗಳು ಧಾವಿಸಬೇಕಾದ ಅನಿವಾರ್ಯತೆ ಇದೆ.  ಅರಂತೋಡು ಗ್ರಾಮದ ದಿ. ಕೊರಗಪ್ಪ  ಮತ್ತು ಸುಂದರಿ ದಂಪತಿಗಳ ಪುತ್ರಿ ರಾಜೇಶ್ವರಿಯವರನ್ನು ಸೋಮವಾರಪೇಟೆ ತಾಲೂಕು ಶುಂಟಿಕೊಪ್ಪದ ವಿನಯಕುಮಾರ್ ರವರಿಗೆ ವಿವಾಹಮಾಡಿಕೊಡಲಾಗಿತ್ತು. ಅಲ್ಲಿ ಅವರು ಬಾಡಿಗೆ ರೂಂ ನಲ್ಲಿ ವಾಸಿಸುತ್ತಿದ್ದರು. ಆ ಸಂದರ್ಭದಲ್ಲಿ ಅವರ ತಾಯಿ ಸುಂದರಿಯವರು ಅರಂತೋಡಿನಲ್ಲಿ ಬಳೆಮಾರಿ ಜೀವನ ನಡೆಸುತ್ತಿದ್ದರು. ನಂತರ ಇವರಿಗೆ ವಯಸ್ಸಾದಾಗ ತನ್ನ ಮಕ್ಕಳು ತಾಯಿಯನ್ನು ಮನೆಯಿಂದ ಹೊರಗೆ ಹಾಕಿದಾಗ ತಾಯಿಯು ನೇರವಾಗಿ ತನ್ನ ಮಗಳ ವಾಸದಮನೆ ಶುಂಟಿಕೊಪ್ಪಕ್ಕೆ ಹೋದರು. ಹಲವು ಸಮಯಗಳ ನಂತರ ಸುಂದರಿಯವರಿಗೆ ಅಲ್ಲಿಯ ವಾತಾವರಣ ಹಿಡಿಸದೆ ಕಾಯಿಲೆಗೆಗೀಡಾದರು ಇದರಿಂದ ತನ್ನ ತಾಯಿಯೊಂದಿಗೆ ಪತಿಯನ್ನು ಕರೆದುಕೊಂಡು ಸಂಪಾಜೆ ಗೇಟು ಬಳಿ ಬಾಡಿಗೆ ರೂಂ ನಲ್ಲಿ ವಾಸಿಸಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ ಅರಂತೋಡಿನ ತೆಕ್ಕಿಲ್ ಸಭಾಭವನದ ಬಳಿಯ ರೈಟರ್‌ರವರ ಬಾಡಿಗೆ ರೂಂ ನಲ್ಲಿ ವಾಸಿಸಲು ಪ್ರಾರಂಭಿಸಿದರು. ತದನಂತರ ತನ್ನ ಪತಿಯು ಪುತ್ತೂರು ಸಂಟ್ಯಾರು ಬಳಿ ಬಸ್ ಗುದ್ದಿ ಸೊಂಟದ ಎಲುಬಿನ ಮುರಿತಕ್ಕೆ ಒಳಗಾಗಿ ಮಲಗಿದಲ್ಲಿಯೇ ಇದ್ದಾರೆ ಇದರಿಂದ ರಾಜೇಶ್ವರಿಯವರಿಗೆ ಬದುಕಲು ಕಷ್ಟವಾಗಿ ಅರಂತೋಡಿನ ಕೊಡಂಕೆರಿ ಬಳಿ ಸಣ್ಣ ಬಾಡಿಗೆ ರೂಮೊಂದರಲ್ಲಿ ವಾಸಿಸಲು ಪ್ರಾರಂಭಿಸಿದರು. ಅವರ ಪತಿಯು ಈಗ ಕಿಡ್ನಿ ವೈಲ್ಯದಿಂದ ಬಳಲುತಿದ್ದು, ದಿನಾ ಸುಮಾರು ೨೦ ಮಾತ್ರೆಗಳನ್ನು ಕೊಡಬೇಕಾಗುತ್ತದೆ ಅಲ್ಲದೇ ತನ್ನ 90ವರ್ಷದ ತಾಯಿ ಸುಂದರಿಯವರಿಗೂ ಮನೆಯೊಳಗೆ ನಡೆದಾಡಲು ಕಷ್ಟವಾಗುತ್ತಿದ್ದು ತನಗೆ ಜೀವನ ನಡೆಸಲು ಅಸಾಧ್ಯವಾಗಿದೆ. ಆದಕಾರಣ ಈಗ ಪತಿಯ ಆರೈಕೆಗೆ ಮತ್ತು ತಾಯಿಯ ಆರೈಕೆಗೆ ಆರ್ಥಿಕವಾಗಿ ಮತ್ತು ಮನೆಯ ಅವಶ್ಯಕತೆ ಇದ್ದು ಉದಾರಿಗಳು ಆರ್ಥಿಕ ನೀಡಿ ಸಹಕರಿಸಬೇಕೆಂದು ರಾಜೇಶ್ವರಿಯವರು ವಿನಂತಿಸಿಕೊಂಡಿದ್ದಾರೆ.
ಈಗ ತನ್ನ ಜೀವನಕ್ಕೆ ರಾಜೇಶ್ವರಿಯವರು ಹಳ್ಳಿ ಹಳ್ಳಿಗೆ ಹೋಗಿ ಬಳೆಮಾರಿ ಜೀವಿಸುತ್ತಿದ್ದು, ಇತ್ತೀಚೆಗೆ ಅದಕ್ಕೂ ಕೂಡ ಹಳ್ಳಿಯಲ್ಲಿ ಹೆಚ್ಚಿನ ಬೇಡಿಕೆ ಇಲ್ಲದ ಕಾರಣ ಜೀವಿಸಲು ತುಂಬಾ ತೊಂದರೆಯಾಗಿದೆ.

ದೂರವಾಣಿ ಸಂಖ್ಯೆ:9480993251

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

3 Comments

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.