HomePage_Banner
HomePage_Banner

ಸಾಲಮನ್ನಾ ಗೊಂದಲ ನಿವಾರಣೆಯ ಭರವಸೆ

 

ನಾಳೆಯಿಂದಲೇ ಒಂದು ವಾರದ ತನಕ ಎಡಿಟಿಂಗ್ ಆಫ್ಸನ್

ತಾಲೂಕು ಸಹಕಾರಿ ಯೂನಿಯನ್ ಪತ್ರಿಕಾಗೋಷ್ಠಿ

ತಾಂತ್ರಿಕ ಕಾರಣಗಳಿಂದಾಗಿ ಸಾಲಮನ್ನಾ ಯೋಜನೆಯಲ್ಲಿ ಗೊಂದಲಗಳಿದ್ದು ನಿವಾರಣೆ ಗೆ ಕ್ರಮ ಕೈಗೊಳ್ಳಲಾಗುತ್ತಿದ್ದು ಸಮಸ್ಯೆ ಸರಿಪಡಿಸಲು ನಾಳೆಯಿಂದಲೇ ಎಡಿಟಿಂಗ್ ಆಫ್ಸನ್ ತೆರೆಯಲಾಗುತ್ತದೆ ಎಂದು ತಾಲೂಕು ಸಹಕಾರಿ ಯೂನಿಯನ್ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅ.21ರಂದು ಸಹಕಾರಿ ಯೂನಿಯನ್ ವತಿಯಿಂದ ತಾಲೂಕು ಸಹಕಾರಿ ಸಂಘಗಳ ಅಧ್ಯಕ್ಷ ರ ಮತ್ತು ಕಾರ್ಯ ನಿರ್ವಾಹಣಾಧಿಕಾರಿಗಳ ಸಭೆ ಸುಳ್ಯ ಸಿ.ಎ. ಬ್ಯಾಂಕ್ ಸಭಾಭವನದಲ್ಲಿ ನಡೆದ ಬಳಿಕ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಯೂನಿಯನ್ ಅಧ್ಯಕ್ಷ ರಮೇಶ್ ರವರು ಯಾರೆಲ್ಲ ಕೃಷಿಕರು ಸಾಲಮನ್ನಾಕೆ ಅರ್ಹರಾಗಿದ್ದಾರೋ ಆ ಎಲ್ಲರಿಗೂ ಸಾಲಮನ್ನಾ ದ ಹಣ ಬರುತ್ತದೆ.

ಕೆಲವು ತಾಂತ್ರಿಕ ಕಾರಣಗಳಿಂದ ಈಗ ಸಮಸ್ಯೆ ಯಾಗಿದ್ದು ಅದರ ನಿವಾರಣೆ ಯಾಗುತ್ತದೆ. ಕೆಲವರು ಅಕೌಂಟ್ ನಂಬರ್ ನ 14 ಸಂಖ್ಯೆ ಯನ್ನು ಭರ್ತಿ ಮಾಡಿರಲಿಲ್ಲ. ಇನ್ನೂ ಕೆಲವು ತಪ್ಪುಗಳಾಗಿತ್ತು.

ಅವೆಲ್ಲದರ ಸರಿಪಡಿಸಲು ಮತ್ತೆ ವೆಬ್ ಸೈಟ್ ಆನ್ ಮಾಡಿ ಎಡಿಟಿಂಗ್ ಆಫ್ಸನ್ ನೀಡಲಾಗಿದ್ದು ನಾಳೆಯಿಂದಲೇ ತಾಲೂಕಿನ ಸಹಕಾರ ಸಂಘಗಳ ಸಹಕಾರದಿಂದ ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್ ನವರು ಸರಿಪಡಿಸುತ್ತಾರೆ ಎಂದು ಹೇಳಿದರು.


ಡಿಸಿಸಿ ಬ್ಯಾಂಕ್ ನ ಮಾರಾಟಾಧಿಕಾರಿ ಸಂತೋಷ್ ಮರಕಡ ವಿವರ ನೀಡಿ ಸುಳ್ಯ ತಾಲೂಕಿನಿಂದ ಸಾಲಮನ್ನಾಕೆ 14,114 ಮಂದಿಯ ಬೇಡಿಕೆಗೆ ನೀಡಲಾಗಿದ್ದು 118.12 ಕೋಟಿ ರೂ ಬರಬೇಕಿತ್ತು.

ಆದರೆ ಇವರಲ್ಲಿ 10436 ಮಂದಿ ಸಾಲಮನ್ನಾಕೆ ಅರ್ಹತೆ ಪಡೆದಿದ್ದು ಇವರಿಗೆ 76.05 ಕೋಟಿ ಬರಬೇಕು. ಇದರಲ್ಲಿ 9564 ಜನರಿಗೆ 74.17 ಕೋಟಿ ರೂ ಬಿಡುಗಡೆಯಾಗಿದ್ದು, ಈಗಾಗಲೇ 3851 ಜನರಿಗೆ 29.84 ಕೋಟಿ ರೂ ಜಮೆ ಆಗಿದೆ. ಆದರೆ ತಾಂತ್ರಿಕ ಕಾರಣದಿಂದ 5713 ಹಣ ಜಮೆ ಆಗಿಲ್ಲ.

ಆ ಹಣ ಈಗ ಅಪೆಕ್ಸ್ ಬ್ಯಾಂಕ್ ಅಕೌಂಟ್ ನಲ್ಲಿದೆ. ರೂಪೆ ಉಳಿತಾಯ ಖಾತೆ ಇನ್ನಿತರ ಸಮಸ್ಯೆ ಸರಿಯಾದಬಕೂಡಲೇ ಹಣ ಜಮೆ ಆಗುತ್ತದೆ ಎಂದು ಹೇಳಿದರು.

 

ಸಾಲಮನ್ನಾದ ಹಣವನ್ನು ಡಿಸಿಸಿ ಬ್ಯಾಂಕ್ ಇರಿಸಿಕೊಂಡಿದೆ ಎಂಬ ವದಂತಿ ಇದೆ. ಆದರೆ ಆ ರೀತಿ ಆಗಿಲ್ಲ. ಹಣ ಅಪೆಕ್ಸ್ ಬ್ಯಾಂಕ್ ನಲ್ಲೇ ಇದೆ.‌ ರೂಪೆ ಉಳಿತಾಯ ಖಾತೆ ನೋದಾವಣೆ ಸರಿಯಾದ ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಬರುತ್ತದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್.ದೇವರಾಜ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಹಕಾರಿ ಯೂನಿಯನ್ ಪದಾಧಿಕಾರಿಗಳು, ಸಹಕಾರಿ ಸಂಘದ ಅಧ್ಯಕ್ಷ ರುಗಳು,‌ ಸಿ.ಇ.ಒ.ಗಳು ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.