HomePage_Banner
HomePage_Banner
HomePage_Banner
HomePage_Banner

ಅಡಿಕೆ ಹಳದಿ ರೋಗ ಪ್ರದೇಶದ ರೈತರ ಅಹವಾಲು ಸ್ವೀಕಾರ ಮತ್ತು ವಿಚಾರ ಸಂಕಿರಣ

ಅರಂತೋಡು, ಸಂಪಾಜೆ ಮತ್ತು ಪರಿಸರದಲ್ಲಿ ಬಾಧಿಸಿರುವ ಅಡಿಕೆ ಎಲೆ ಹಳದಿ ರೋಗದ ಕುರಿತು ಅಧ್ಯಯನ ಮತ್ತು ಬದಲಿ ಕೃಷಿಯ ಕುರಿತು ಸರಕಾರಕ್ಕೆ ಪರಿಣಾಮಕಾರಿ ರೀತಿಯಲ್ಲಿ ಹಕ್ಕೊತ್ತಾಯ ಮಂಡಿಸುವ ಸಲುವಾಗಿ ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಜಾಗೃತಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ ಅಡಿಕೆ ಎಲೆ ಹಳದಿ ಪೀಡಿತ ಪ್ರದೇಶದ ರೈತರ ಅಹವಾಲು ಸ್ವೀಕಾರ ಮತ್ತು ಬದಲಿಕೃಷಿಯ ಕುರಿತು ವಿಚಾರ ಸಂಕಿರಣವು ನ.೨ ರಂದು ಅರಂತೋಡು ಸಹಕಾರಿ ಸಂಘದ ಸಿರಿ ಸೌಧದಲ್ಲಿ ನಡೆಯಲಿದೆ.
೭೦ ನೇ ದಶಕದಲ್ಲಿ ಅರಂತೋಡಿನ ವೈಎಂಕೆ ಎಸ್ಟೇಟ್‌ನಲ್ಲಿ ಪ್ರಾರಭವಾದ ಅಡಿಕೆ ಎಲೆ ಹಳದಿ ರೋಗ ಇಂದು ತಾಲೂಕಿನ ಬಹುತೇಕ ಕಡೆಗಳಲ್ಲಿ ಪಸರಿಸಿದೆ. ಅರಂತೋಡು, ತೊಡಿಕಾನ, ಸಂಪಾಜೆ, ಆಲೆಟ್ಟಿ, ಉಬರಡ್ಕ, ಮರ್ಕಂಜ ಮತ್ತು ಮಡಪ್ಪಾಡಿ ಗ್ರಾಮದ ಶೇ.70ರಷ್ಟು ತೋಟದಲ್ಲಿ ಅಡಿಕೆ ನಾಶದ ಅಂಚಿನಲ್ಲಿದೆ. ಕೊಡಗಿನ ಪೆರಾಜೆ, ಸಂಪಾಜೆ ಹಾಗೂ ಚೆಂಬು ಗ್ರಾಮಗಳಲ್ಲಿ ಇದೇ ಪರಿಸ್ಥಿತಿಯಿದ್ದು ಸರಕಾರಿ ಸಂಶೋಧನಾ ಸಂಸ್ಥೆಗಳ ಪರಿಹಾರಕ್ಕಾಗಿ ನಡೆಸಿದ ಪ್ರಯತ್ನ ನಿಷ್ಪ್ರಯೋಜಕವಾಗಿದೆ.
ಸಮಸ್ಯೆಗಳ ಪರಿಹಾರಕ್ಕೆ ಮತ್ತು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಹಿಂದೆಯೇ ಸರಕಾರಗಳ ಗಮನ ಸೆಳೆಯಲಾಗಿತ್ತು. ಈ ಬಾರಿ ರೈತರ ಮನವಿಯನ್ನು ಸಾಕಾರ ಗೊಳಿಸುವ ದೃಷ್ಟಿಯಿಂದ ಈ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಹಳದಿ ರೋಗ ಪೀಡಿತ ಪ್ರದೇಶದ ಜಂಟಿ ಸಮೀಕ್ಷೆ ನಡೆಸುವುದು, ವಿಶೇಷ ಬಾದಿತ ಪ್ರದೇಶವೆಂದು ಘೋಷಣೆಗೆ ಮನವಿ, ವಿಶೇಷ ಆರ್ಥಿಕ ಪ್ಯಾಕೇಜ್‌ಗೆ ಮನವಿ, ರೈತರಿಗೆ ಬದಲಿ ಕೃಷಿಗೆ ಉತ್ತೇಜನ ಮೊದಲಾದ ಬೇಡಿಕೆಗಳು ರೈನತ ಮುಂದಿದ್ದು ಇದನ್ನು ಹಕ್ಕೊತ್ತಾಯದ ರೀತಿಯಲ್ಲಿ ಮಂಡಿಸಲು ಈ ವಿಚಾರ ಸಂಕಿರಣ ನಡೆಯುತ್ತಿದೆ. ಈ ಭಾಗದ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮಸ್ಯೆಯ ಗಂಭೀರತೆಯನ್ನು ಮುಟ್ಟಿಸಲು ಯಶಸ್ವಿಯಾಗಬೇಕು ಎಂದು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಅಂಗಾರ ವಹಿಸಲಿದ್ದು, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ ವಿಷಯ ಮಂಡನೆ ಮಾಡಲಿದ್ದಾರೆ. ಕ್ಯಾಂಪ್ಕೋ ಅಧ್ಯಕ್ಷ ಸತೀಶ್‌ಚಂದ್ರ ಎಸ್.ಆರ್, ತಾ.ಪಂ ಸದಸ್ಯೆ ಪುಷ್ಪಾ ಮೇದಪ್ಪ, ಅರಂತೋಡು ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ ಕೊಡಂಕೇರಿ, ಎಪಿಎಂಸಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್ ಆರ್ ನಾಯಕ್, ತಹಶಿಲ್ದಾರ್ ಕುಂಞಿ ಅಹಮ್ಮದ್, ತಾಲೂಕು ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ ಎನ್ ಪಾಲ್ಗೊಳ್ಳಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.