HomePage_Banner
HomePage_Banner

ಮನೆ ಚಿಂಟೇಲಿ

 

ಉಗ್ಗಪ್ಪ ಉಗ್ಗಪ್ಪ…. ದೀಪಾವಳಿ ಬಾತ್, ಈ ವರ್ಷ ಪಟಾಕಿ ಹೊಡ್ಸುದು ಹೇಂಗೆ?

ಕೋಳಿ ಕೂಂಗುವ ಹೊತ್ತಿಗೆ ಅಣ್ಣಿ ಅಜ್ಜಂಗೆ ಎಚ್ಚರಿಕೆ ಅದರೆ, ಮತ್ತೆ ಶಿವ- ಶಿವಂತೇಳಿರೂ ನಿದ್ದೆ ಬಾದುಲೆ. ಹೊರಗೆಂದ ಕೆಬಿಗೆ ಮಳೆ ಜೋರಾಂತ ಹೊಯ್ಯೊದು ಕೇಳ್ದೆ. ಮಲ್ಗಿದಲ್ಲಿಂದಳೇ ಅಜ್ಜ ಯೋಚನೆ ಮಾಡಿಕೆ ಶುರು ಮಾಡ್ದೋ. ಛೇ ಎಂತ ಕಾಲ ಬಾತ್, ಈಗಳೂ ಮಳೆಗಾಲದಾಂಗೆ ಹೀಂಗೆ ಮಳೆ ಹೊಯ್ದರೆ ಯಾಕಾದು? ಒಂದು ಲೆಕ್ಕಲಿ ಈ ಟಿವಿಲಿ ಬಂದಾಂಗೆ, ಇಡೀ ಊರೇ ಮುಳ್ಗುವಾಂಗೆ ಮಳೆ ಬಂದರೆ ರಗಾಳೆ ಇಲ್ಲೆ. ಮನೆ-ತೋಟ, ಭೂಮಿ ಜಮ್ಮ, ದನ-ಕರ್, ಕಾಡ್ ಕುಂಟೆಂತ ಎಲ್ಲಾ ಒಟ್ಟಿಗೆ ತೊಳ್ಳೊಂಡ್ ಹೋದರೆ ಮತ್ತೆ ತಲೆ ಬಿಸಿ ಮಾಡಿಕೆ ಇಲ್ಲೆ. ನೋಡೊವುಕೆ ಒಮ್ಮೆ ಓ ರಾಮ- ರಾಮಾಂತ ಕಂಡರೂ, ಹೀಂಗೆ ಹೊರಗೆ ಹೊರ್‍ಡಿಕೆ ಅಗದೆ, ಹೊಟ್ಟೆಗೆ ಗಂಜಿ ಇಲ್ಲದೆ ಸಾಯೊಕುತಿಲ್ಲೆ ಅಲ್ಲಾ………?
ಒಂದು ಹತ್ತು ಮೂವತ್ತ್ ವರ್ಷಗಳ ಹಿಂದೆನ ದಿನಗಳ ಯೋಚಿಸಿದರೆ, ಚೌತಿ ಕಳ್ದ ಮೇಲೆ, ನವರಾತ್ರಿಗೊಮ್ಮೆ ಮಳೆ ಬಾದು, ಅದು ಬುಟ್ಟರೆ ದೀಪಾವಳಿಗೆ ಒಮ್ಮೆ-ಇಮ್ಮೆ ಮಳೆ ಬಾದ್. ಚೌತಿ ಕಳೆಕಾಕನ ಎಲ್ಲ ಮನೆಗಳ್ಲಿ ಮನೆ ತುಂಬಿಸಿ, ಹೊಸ್ತು ಉಂಬೋವು ಮುಗ್ಸಿಕಾಂಬೊತ್ತಿದ್ದೋ. ಮತ್ತೆ ಚೌತಿಲಿ ದೇವಸ್ಥಾನಗಳ್ಲಿ ಕೆಲವು ಉಂಡು, ಮತ್ತೆ ಜಾಲ್ ರಿಪೇರಿಗೆ ಶುರು ಮಾಡುವೊ. ಗದ್ದೇಲಿ ಕೈಯಿ ಹೊಡೆಕಟ್ಟಿ, ಕೊಯಕೆ ರೆಡಿ ಆಕನ, ಜಾಲ್ ಎಲ್ಲಾ ಕೆರ್‍ದ್-ಗಟ್ಟಮಣೇಲಿ ಬೊಡ್ದ್ ಸೆಗ್‌ಣಿ ಗುಡ್ಸಿ ಅಷ್ಟ್ ಲಾಯಿಕ್ ಮಾಡುವೊ. ಜಾಲ್ ಚಿಂಟೆನ ಒಡ್ದಲ್ಲಿಗೆಲ್ಲ ಮಣ್ಣ್ ತಿನ್ಸಿ, ಮಳೆ ಬಂದರೆ ಹಾಳಾಗದಂದೆ ತೋಟಂದ ಹಾಳೆ ತಂದ್ ಮುಚ್ಚುವೋ. ಈಗ ನೋಡಿರೇ, ಮಳೇನೇ ಬುಡ್ದುಲೆಲ್ಲಾ……… ಎಂತಾ ಅವಸ್ಥೆ ಇದ್? ಸುಮಾರ್ ವರ್ಷಗಳ್ಂದ ನಂಗೆ ಗೊತ್ತಿದ್ದಾಂಗೆ ಮಳೆಗಾಲ ಮತ್ತೆ ಬೇಸಿಗೆಗಾಲ ಮಾತ್ರ ಕಾಂಬೊತ್ತಿತ್. ಇದರೊಟ್ಟಿಗೆ ಚಳಿಗಾಲ ಮಾಯ ಆಗಿತ್ತ್. ಈಗ ನೋಡಿರೆ ವರ್ಷಪೂರಾ ಮಳೆಗಾಲನೋ, ಅಯ್ಯೋ ದೇವ್ರೇ……… ಅಜ್ಜ ಯೋಚನೆ ಮಾಡಿಕಂಡ್ ಮಲ್ಗಿದಲ್ಲಿಂದಲೇ ನೆಟ್ಟಮುರ್‍ದ್ ಎದ್ದೋ. ನರ್‍ಕಿಯೆಂಡ್, ಬುಕ್ಕಿಯೆಂಡ್ ಮೊದ್ರಿಂನ ಹಾಂಗೆ ಮೊಡ್ಚಿ ಕರೆಗೆ ಇಸಿದೋ ತಲೆಗಡಿಗೆ ಇಸಿದ ಮರದ ಮಣೆನ ಹಾಂಗೆ ಕೈಲಿ ಹಿಡ್ಕಂಡ್ ಹೊರಗೆ ಜಗಲಿಗೆ ಬಂದ್ ಕುದ್ದ್, ಅಡಿಕೆ ಒರ್‍ಲುನ ತಕ್ಕಂಡೋ, ಮೋರೆಗೆ ನೀರ್ ಸಹ ಹಾಕದೆ ಅಜ್ಜ ೨ ಅಡಿಕೆ ಹೋಳ್‌ನ ಒರ್‍ಲ್‌ಕಲ್ಲಿಗೆ ಹಾಕಿ ಗುದ್ದಿಕೆ ಶುರು ಮಾಡ್ದೋ. ಅರ್ಧ ಸಣ್ಣ ಆದ ಮೇಲೆ ಅರ್ಧ ಎಲೆಗೆ ಸುಣ್ಣ ಹಾಕಿ ಹಞ- ಹಞ ಗುದ್ದಿಕೆ ಶುರು ಮಾಡ್ದೋ.
ಉಗ್ಗಪ್ಪನ ಗುದ್ದುದರ ಕೇಳಿ ಪಿಳ್ಳಿಕ ಇಬ್ಬರೂ ಎದ್ದೋ, ಓ- ಉಗ್ಗಪ್ಪ ಬೊಳ್ಪಿಗೇನೇ ಅವಲಕ್ಕಿ ಮಿಜ್ಯಾಕೆ ಶುರು ಮಾಡ್ಯೊಳರಿ, ಹಬ್ಬಕ್ಕೇನಾ? ದೊಡ್ಡ ಪಿಳ್ಳಿ ಕೇಳ್ತ್?. ಹಾಂ ಹೌದು ನಿನ್ನ ಅಪ್ಪಂಗೆ…….. ಇಂದಾ ಬೊಳ್ಪಿಗೆ ಬಾಯಿಲೆ ಎನೇನೋ ಬಂದದೆ……. ನೀವ್ಗುಗೆ ಎನ್ ಮಕ್ಕಳೇ, ಎನಾರ್ ತಲೆ ಬಿಸಿ ಉಟ್ಟಾ? ಹೊಟ್ಟೆಗೆ – ಬಟ್ಟೆಗೆ ಎನಾರ್ ಕಮ್ಮಿ ಅಗಿದ್ದರೆ ನೀವ್ಗೆನೂ ನಿದ್ದೆ ಬಾಕಿತ್ಲೆ. ಅದ್ಕೇನೂ ಕಮ್ಮಿ ಇಲ್ಲ್ಯೆಲ್ಲಾ. ಪೇಟೆಂದ ಅಪ್ಪ ದುಡ್ದ್ ಕೊಟ್ಟು ತಂದದೆ, ನೀವು ತಿಂದರೆ. ಉಗ್ಗಪ್ಪ ಅಗ ನೀವೆಲ್ಲಿಂದ ಈಗ ತಿಂಬೋದು? ಸಣ್ಣ ಪಿಳ್ಳಿ ಕೇಳ್ತ್? ನಾನು ಪೇಟೆಂದಳೇ ಮರಾಯ. ಈಗ ನಂಗೆ ದುಡ್ಯಾಕೆ ಅದೇನೋ? ಮುಂದೆ ಇದೇ ಭೂಮಿಲಿ ಭತ್ತ ಬೆಳ್ದ್, ನೆಟ್ಟಿಕಾಯಿ, ಮೆಣ್ಸಂತ ಮಾಡಿ ತಿಂಬೊದು ಉಂಬೊದು ಮಾಡ್ತಿದ್ದೋ. ಈಗ ಅ ಗದ್ದೆಗೆಲ್ಲಾ ಗುಂಡಿ ತೆಗ್ದ್ ಅಡ್ಕೆ ನೆಟ್ಟ್, ಅಡ್ಕೆ ಮಾರಿ ಅಕ್ಕಿ, ನೆಟ್ಟಿಕಾಯಿ ತಾಕೆ ಶುರು ಮಾಡ್ದೊ. ಈಗ ಅದ್ಕೆನೂ ಬರಗಾಲ ಬಾತಲ್ಲ?!. ಚಿನ್ನಾದಂತ ಗದ್ದೆಗೆ ಕಮ್ಮ್ ನೆಡಿಕಾಕನನೇ ಹೇಳ್ದೆ. ಇಂದ ಬೇಡ ಮರಾಯ ಅಲ್ಲಿ ಗುಡ್ಡೆ ಜಾಗೆಗೆ ನೆಡ್, ಈ ಗದ್ದೆಗೆಲ್ಲಾ ನೆಡ್‌ಬಡಾಂತ. ಇಂವ ನನ್ನ ಮಾತ್ ಕೇಳದೆ ನೆಟ್ಟತ್, ಕಿಂಟಾಲ್-ಕಿಂಟಾಲ್ ಅಡ್ಕೆ ಬೆಳ್ಸಿತ್. ಈಗ ಅದ್ಕೆನೂ ಅರಶಿಣ ರೋಗ ಬಂದ್ ಎಲ್ಲಾ ಮುತ್ತಿ ಹೋತ್, ಈಗ ತೋಟ ಕಾಡಾಗುಟು, ಕಾಟಿ, ಹಂದಿಂತೇಳಿ ಬಂದ್‌ಕಂಡ್ ಮೇದವೆ. ನಿಮ್ಮ ಅಪ್ಪನ ಕಿಂಟಾಲ್ ಅಡ್ಕೆ ಹೋಗಿ ಈಗ ಮೂರು ಅಡ್ಕೆ ತಿಂಬಕೆ ಇಲ್ಲೆ. ಮಕ್ಕ ಮೋರೆ ಮೋರೆನೇ ನೋಡಿ ನೆಗಾಡಿಕಂಡ.
ಬೊಳ್ಪಾಕನ ನಿಮ್ಮ ಹಳೆ ರಾಮಾಯಣ ಬೇಡ ಉಗ್ಗಪ್ಪ. ಅದಿರ್‍ಲಿ… ಉಗ್ಗಪ್ಪ ದೀಪಾವಳಿ ಬಾತ್ ಈ ವರ್ಷ ಪಟಾಕಿ ಹೊಡ್ಸುದು ಹೇಂಗೆ? ದೊಡ್ಡ ಪಿಳ್ಳಿ ಕೇಳ್ತ್; ಅದಾ…… ನಾ ಮತ್ತೆ ಸುಮ್ಮನೆ ಹೇಳ್ದಾ? ಲೋಕ ಮುಳ್ಗಿರೂ ನೀವ್ಗೆ ಬುದ್ದಿ ಬಾಕಿಲೆಂತಾ. ಪಟಾಕಿ ಹೊಡ್ಸಿಕೆ ಎನ್ ಮರಾಯ? ಅಂಗಡಿಂದ ತಾದು ಹೊಡ್ಸುದು. ಅದ್ಕೆ ಯಾಕೆ ತಲೆ ಬಿಸಿ. ಅಲ್ಲ ಉಗ್ಗಪ್ಪ ಮಳೆ ಅಲ್ಲ. ಈ ಮಳೇಲಿ ಹೊಡ್ಸುದು ಹೇಂಗೆಂತ ಸಣ್ ಪಿಳ್ಳಿ ವಿವರ್‍ಸಿ ಹೇಳ್ತ್? ಓ ಹಾಂಗೇನಾ, ಮಳೆಗೆ ಹೊರಗೆ ಹೊಡ್ಸುದು ಹೇಂಗೆಂತನಾ? ನೀವ್ಗೆ ಅಪ್ಪ ಪಟಾಕಿ ತಂದ್ ಕೊಟ್ಟದೆಲ್ಲಾ; ಅವನೊಟ್ಟಿಗೆ ಜಾಲ್‌ಗೆ ಚಪ್ಪರ ಹಾಕಿಕೆ ಹೇಳಿ, ಇಲ್ಲರೆ ಒಲೆ ಬುಡಲಿ ಕುದ್ದ್‌ಕಾಂಡ್ ಹೊಡ್ಸಿ. ಅದೇಂಗೆ ಉಗ್ಗಪ್ಪ ಒಲೆ ಬುಡಲಿ?. ದೊಡ್ಡ ಪಿಳ್ಳಿ ಕೇಳ್ತ್; ಒಲೆ ಬುಡಲಿ ಹೇಂಗೆ? ಒಂದೊಂದೇ ಪಟಾಕಿನ ಒಲೆಗೆ ಹಾಕಿರೆ ಆತ್? ಮಕ್ಕ ಇಬ್ಬರ್, ಕುಷಿಲಿ, ಓ……..ಂತ ಬೊಬ್ಬೆ ಹಾಕಿ ನೆಗಾಡ್ದೋ. ಬೊಬ್ಬೆ ಕೇಳಿ ಅಪ್ಪ ಎದ್ದ್ ಎಂತಾತ್‌ನೆ ನೀವ್ಗೆ. ಬೊಳ್ಪಿಗೆ ಅರ್ಭಟೆಂತ ಬೊಯಿಕಾಂಡ್ ಹಲ್ಲುಜ್ಜಿಕೆ ಹೋತ್.
ಮಕ್ಕ ಅಜ್ಜನಕ್ಕಲೆ ಸುಮ್ಮನೆ ಕುದ್ದೊ. ಸುಮ್ಮನೆ ಕುದ್ದ ಮಕ್ಕಳ ನೋಡಿ ಅಜ್ಜ ಹೇಳಿಕೆ ಶುರು ಮಾಡ್ದೋ. ನೋಡಿ ಮಕ್ಕಳೇ ಹೀಂಗಾದರೆ ಉಳಿಗಾಲ ಇಲ್ಲೆ. ನಾವ್ಗೆ ಇನ್ನ್ ಬೊದ್ಕಿ ಬಾಳೋಕುಂತ ಅಶೆ ಇಲ್ಲೆ. ಆದರೆ ನಿಮ್ಮ ನೋಡಿಕನ ನಂಗೆ ನಿಜವಾಗಿ ಬೇಜಾರ್ ಅದೆ. ಕುಶಾಲ್ ಎಷ್ಟೂ ಮಾತಾಡಕ್, ಆದರೆ ಒಂದಷ್ಟ್ ಬಾಳಿ ಬದುಕುವ ನೀವು ಈ ಪ್ರಕೃತಿನೊಟ್ಟಿಗೆ ರಾಜಿ ಮಾಡಕಣಿಕಾದೆ. ಈ ಭೂಮಿ ತಾಯಿ ನಮ್ಮೊಟ್ಟಿಗೆ ಕೋಪಲಿ ಹೀಂಗೆಲ್ಲ ಮಾಡ್ದೆ. ಮುನುಷ್ಯನ ಸ್ವಾರ್ಥಂದಾಗಿ, ವಿಜ್ಞಾನ, ತಂತ್ರಜ್ಞಾನಂತ ಹೇಳಿ ನಾವು ಈ ಮಣ್ಣ್ ಮರಾಂತ ಲಾಗಾಡಿ ತೆಗ್ದೊ. ಒಂದು ಗೈಪು ಮಾಡೊಕರೇ, ಅದ್ ರುಚಿ ಅಕುತ್ತಿದ್ದರೆ ಉಪ್ಪು-ಹುಳಿ, ಕಾರಂತ ಸರಿಯಾಗಿ ಹಾಕೋಕು. ಅಗ ಮಾತ್ರ ರುಚಿ ಅದು. ಯಾದಾದ್ರು ಒಂದು ಹೆಚ್ಚಿಗೆ ಆದರೂ ಅದರ ತಿಂಬಕೆ ಆದುಲೆ. ಈಗ ನಾವು ಎಲ್ಲದರ ಮರ್‍ತೊಳೊ. ರಾಜಕಾರಣಿಗ, ಅಧಿಕಾರಿಗ, ಪ್ರಜೆಗಳಂತೇಳಿ ಎಲ್ಲವೂ ಬ್ರಷ್ಟರಾಗೊಳೊ. ಬದ್ಕಿಕೆ ಬೇಕಾಗಿ ಇನ್ನೊಬ್ಬನ ಸಾಯ್ಸಿಕೆ ಶುರು ಮಾಡ್ಯೋಳೊ. ಹಾಕಿಕೆ ಸರಿ ಬಟ್ಟೆ ಬರೆ ಇದ್ದರೂ ಹಾಕುದುಲೆ, ಉಂಬಕೆ- ತಿಂಬಕೆ ಬೆಳ್ಸದಿದ್ದರೂ, ಬೆಳ್ಸಿದವರ್ಂದ ತಂದ್… ತಿಂದ್ ಬಿಸಾಡುವೆ. ಓದುದು- ಬರಿದು ಮಾಡಿರೂ ಮೂರ್ಖರಾಂಗೆ ವರ್ತಿಸುವೆ, ಚಿಲ್ಲರೆ ದುಡ್ಡುಗೆ ಸಣ್ಣ ತಪ್ಪುಗಳಿಗೆ ಕಡ್ದ್‌ಕೊಂದವೆ. ಕಾನೂನು ಕಟ್ಟಳೆಗಳ ಹರಾಜ್ ಹಾಕೋಲೊ. ದೊಡ್ಡವರ್ಂದ ಹೆಚ್ಚಿಗೆ ಮಕ್ಕ ಸಾಯಿತ ಒಳೋ, ಗಂಡ್ – ಹೆಣ್ಣ್ಂತ ಅನ್ಯಾಯ -ಅನಾಚಾರಗಳ ಮಾಡ್ತಾ ಒಳೋ, ಇದರೆಲ್ಲ ಸಯಿಸ್‌ಕಾಂಡ್…… ಸಯಿಸ್‌ಕಾಂಡ್ ಈ ಭೂಮಿ ತಾಯಿಗೆ ಸಾಕಾಗಿ ಹೋತ್. ಇನ್ನ್ ಉಳಿಗಾಲ ಇಲ್ಲೆ ಮಞ. ಈ ತಾಯಿ ಭುವನೇಶ್ವರಿ, ಉಗ್ರರೂಪ ತಾಳಿಟುಂತ ಆದೆ. ಆರ್ಯ ಕಾತ್ಯಾಯಿನಿ ಅಗಿ ರಾಕ್ಷಸರ ಸಂಹಾರ ಮಾಡ್ದಂಗೆ ಈ ಭೂಮಿನ ಒಂದೊಂದೇ ಭಾಗನ ನೀರ್‌ಲಿ ಮುಚ್ಚಿ ಮುಳಿಗಿಸ್ತಾ ಉಟ್ಟು…….. ಉಗ್ಗಪ್ಪ ನೀವು ಏನೆಲ್ಲಾ ಹೇಳಿ ಹೆದರ್‍ಸ್ ಬೊಡಿ. ಸಣ್ಣ ಪಿಳ್ಳಿ ಜೋರ್‌ಲಿ ಹೇಳ್ತ್. ಇಲ್ಲೆ ಮಞ ಹೆದ್ರ್‌ಸಿಕೆ ನಾ ಟಿವಿ ೯ ಅಲ್ಲ ನೀವಿದರ ಯೋಚನೆ ಮಾಡೋಕೊ. ಈ ಭೂಮಿಲಿ ಮತ್ತೆ ಬೆಳೆ – ಸೆಲೆ ಸರಿಯಾಕರೆ ಮರ ಕಾಡ್ ಬೆಳ್ಸೋಕು. ನೀರ್‌ನ ಹಾಳ್ ಮಾಡದೆ ಓಳ್ಸೊಕೊ ಮಣ್ಣ್‌ನ ಪ್ರೀತಿಸೋಕು, ಕೈಲಿ – ಮೈಲಿ ಮೊಣ್ಕಾಕು, ಕತ್ತಿ ಮೊಡ್ಪಪಾಳೆ ಹಿಡ್ಯೋಕು. ಆಗ ನಿಮ್ಮ ಆ ತಾಯಿ ರಕ್ಷಿಸಿದೆ. ದೀಪಾವಳಿಗೆ ಮೂರು ದಿನ ಆ ಭೂಮಿ ಪುತ್ರ ಬಲಿಯೇಂದ್ರ ನೋಡಿಕೆ ಬಂದದೆ. ಈಗ ಬಾತಿರುವ ಅಕಾಲ ಮಳೆ ನಿತ್ತದೆ. ಅಗ ನೀವ್ಗೆ ಋತು ಮಾನಗ ಸರಿ ಆದವೆ. ಹಾಂಗೆ ಮಾಡಿರೆ ಮುಂದೆನ ವರ್ಷ ಜಾಲ್‌ಲಿ ಪಟಾಕಿ ಹೊಡ್ಸಿಕೆ ಅದೆ. ಮಕ್ಕ ಹರಿ ಕಥೆ ಕೇಳ್ದಾಂಗೆ ಕೇಳಿ, ಒಂದು ದೊಡ್ಡ ಉಸಿರು ಬುಟ್ಟ್ ಹಲ್ಲುಜ್ಜಿಕೆ ಹೋದೊ. ಉಗ್ಗಪ್ಪ ಒಂದು ಗ್ಲಾಸ್ ಕಣ್ಣ ಚಾ ಕುಡಿಯಕೆ ಅಡಿಗೆ ಒಳಗೋದೊ.

-ಭವಾನಿಶಂಕರ ಅಡ್ತಲೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.