HomePage_Banner
HomePage_Banner
HomePage_Banner

RCEP ಒಪ್ಪಂದ ಕೃಷಿ, ಹೈನುಗಾರಿಕೆ ಹಾಗೂ ಸಣ್ಣ ಉದ್ಯಮಕ್ಕೆ ಮಾರಕ – ವಿಜಯಕುಮಾರ್ ಎಂ.ಡಿ.

RCEP ಒಪ್ಪಂದದ ಬಗ್ಗೆ ಅನೇಕ ಮಂದಿ ವಿಶ್ಲೇಷಕರ ಲೇಖನಗಳನ್ನು ಮನನ ಮಾಡಿದಾಗ, ಬಹುಜನರ ಅಭಿಪ್ರಾಯದಂತೆ ನಾನು ಕಂಡುಕೊಂಡದ್ದು ನಮ್ಮ ಜಿಲ್ಲೆಯ ಮುಖ್ಯ ಬೆಳೆ ಅಡಿಕೆ, ಕಾಳುಮೆಣಸು, ರಬ್ಬರ್ ಮುಂತಾದ ಕೃಷ್ಯುತ್ಪನ್ನಗಳ ಬೆಲೆ ಮುಂದಿನ ದಿನಗಳಲ್ಲಿ ಇಳಿಮುಖವಾಗುವ ಸಾಧ್ಯತೆ ಅಧಿಕ. ಅಂತೆಯೇ ಹೈನುಗಾರಿಕೆ ಕ್ಷೇತ್ರಕ್ಕೆ ಮಾರಕವಾಗಲಿದೆ. ಸಣ್ಣ ಪುಟ್ಟ ಕೈಗಾರಿಕೆಗಳು, ಉದ್ದಿಮೆಗಳು ನೆಲಕಚ್ಚಲಿವೆ ಎಂಬುದು.
ಈ ಬಗ್ಗೆ ತಜ್ಞರನ್ನು, ವಿಶ್ಲೇಷಕರನ್ನು ಸೇರಿಸಿಕೊಂಡು ವಿಚಾರಸಂಕಿರಣವೊಂದನ್ನು ಏರ್ಪಡಿಸಿ ಜಿಲ್ಲೆಯ ಜನ ಒಮ್ಮತದ ತೀರ್ಮಾನಕ್ಕೆ ಬಂದು ಒಪ್ಪಂದದಿಂದ ಬಾಧಕವಾಗುವುದಿದ್ದರೆ ವಿರೋಧಿಸಿ, ಬಾಧಕವಾಗದಿದ್ದರೆ ಬೆಂಬಲಿಸಿ ಕೇಂದ್ರ ಸರಕಾರವನ್ನು ಒತ್ತಾಯಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯ ಸಂಸದರು ಜಿಲ್ಲೆಯ ಎಲ್ಲಾ ಶಾಸಕರನ್ನು ಮತ್ತು ತಜ್ಞರನ್ನು ಒಟ್ಟು ಸೇರಿಸಿ ಒಮ್ಮತದ ತೀರ್ಮಾನಕ್ಕೆ ಬರಲಿ ಎಂಬುದು ನನ್ನ ಆಶಯ.
ಈ ಮಧ್ಯೆ ಕೆಲವೊಂದು ರಾಜಕೀಯ ಮಂದಿ ಅವರವರ ಮೂಗಿನ ನೇರಕ್ಕೆ ಈ ಒಪ್ಪಂದದ ಪರ-ವಿರೋಧ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇದು ಸಲ್ಲದು. ಜಿಲ್ಲೆಯ ಕೃಷಿಕರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಒಮ್ಮತದ ನಿರ್ಣಯ ಮೂಡಿಬರಲಿ.

– ವಿಜಯಕುಮಾರ್ ಎಂ.ಡಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.