HomePage_Banner
HomePage_Banner
HomePage_Banner
HomePage_Banner

ಸುಬ್ರಹ್ಮಣ್ಯ: ಕಹಳೆ ನ್ಯೂಸ್ ವರದಿಗಾರನಿಗೆ ಬೆದರಿಕೆ, ಪೊಲೀಸ್ ದೂರು

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಹಳೆ ನ್ಯೂಸ್ ವರದಿಗಾರ ಶಿವ ಭಟ್ ಎಂಬವರಿಗೆ ಗುರುಪ್ರಸಾದ್ ಪಂಜ ಎಂಬವರು ಬೆದರಿಕೆ ಹಾಕಿದ್ದಾರೆಂದು ಪೊಲೀಸ್ ದೂರು ನೀಡಲಾಗಿರುವ ಹಾಗೂ ಇದೇ ಘಟನೆಗೆ ಸಂಬಂಧಿಸಿ ಪ್ರತಿದೂರು ನೀಡಲಾಗಿರುವ ಘಟನೆ ನ.4ರಂದು ನಡೆದಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಪ್ರಯುಕ್ತ ಪೂರ್ವಭಾವಿ ಸಭೆ ನ.4ರಂದು ನಡೆದಿತ್ತು. ಇದನ್ನು ವರದಿಮಾಡಲೆಂದು ಕಹಳೆ ನ್ಯೂಸ್‌ನ ವರದಿಗಾರ ಶಿವ ಭಟ್ ದೇವಸ್ಥಾನದ ಕಛೇರಿಗೆ ತೆರಳಿದ್ದರು. ಸಭೆ ಮುಗಿದ ಬಳಿಕ ಅವರು ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಅವರ ಕಚೇರಿ ಎದುರುಗಡೆ ಕುಳಿತಿದ್ದರೆನ್ನಲಾಗಿದೆ. ಈ ಸಂದರ್ಭ ಅಲ್ಲಿಗೆ ಬಂದ ಗುರುಪ್ರಸಾದ್ ಪಂಜ , ಶಿವ ಭಟ್ ಅವರನ್ನು ಉದ್ದೇಶಿಸಿ, ಎಲ್ಲಿದ್ದಾನೆ ನಿನ್ನ ಸ್ವಾಮೀಜಿ ಎಂದು ಮುಂತಾಗಿ ಏಕ ವಚನದಲ್ಲಿ ಬೈದರೆನ್ನಲಾಗಿದೆ. ಈ ಬಗ್ಗೆ ಶಿವ ಭಟ್ ಸುಬ್ರಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗುರುಪ್ರಸಾದ್ ಪಂಜ ಏಕ ವಚನದಲ್ಲಿ ಆವಾಚ್ಯವಾಗಿ ಬೈದು ಜೀವ ಬೆದರಿಕೆ ಒಡ್ಡಿದ್ದಾಗಿಯೂ ವಿದ್ಯಾಪ್ರಸನ್ನ ಸ್ವಾಮೀಜಿಯವರನ್ನು ನಿಂದಿಸಿರುವುದಾಗಿಯೂ ತಿಳಿಸಿದ್ದಾರೆ. ಇದೇ ಸಂದರ್ಭ ಗುರುಪ್ರಸಾದ್ ಪಂಜ ಕೂಡ ಪೊಲೀಸ್ ಠಾಣೆಗೆ ಹೋಗಿ, ಶಿವ ಭಟ್ ತನ್ನನ್ನು ನಿಂದಿಸಿರುವುದಾಗಿ ದೂರು ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.