HomePage_Banner
HomePage_Banner

ಅಯೋಧ್ಯೆ ತೀರ್ಪು ಹಿನ್ನಲೆ : ಸುಳ್ಯದಲ್ಲಿ ಪೊಲೀಸ್ ಬಂದೋಬಸ್ತ್ ಗೆ ಸಿದ್ಧತೆ

ಅಯೋಧ್ಯೆ ತೀರ್ಪು ಇನ್ನು ಕೆಲವೇ ದಿನಗಳಲ್ಲಿ ಬರಲಿರುವುದರಿಂದ ಶಾಂತಿ ಭಂಗದ ಘಟನೆ ನಡೆದರೆ ಯಾವರೀತಿ ಅದನ್ನು ಎದುರಿಸಬೇಕೆಂದು ಪೋಲೀಸ್ ಬಲವನ್ನು ಸಜ್ಜುಗೊಳಿಸುವ ಕಾರ್ಯ ಆರಂಭವಾಗಿದೆ.

ಸುಳ್ಯಕ್ಕೆ ರಿಸರ್ವ್ ಪೋಲೀಸ್ ತಂಡ ಬಂದಿದ್ದು , ಸುಳ್ಯ, ಬೆಳ್ಳಾರೆ ಮತ್ತು ಸುಬ್ರಮಣ್ಯ ಠಾಣೆಗಳ ಪೋಲೀಸರಿಗೆ ಟಿಯರ್ ಗ್ಯಾಸ್ ಸಿಡಿಸುವ ವಿಧಾನ , ಗುಂಪನ್ನು ಎದುರಿಸಿ ಚದುರಿಸುವ ವಿಧಾನಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ.

ಸುಳ್ಯ ಕೊಡಿಯಾಲಬೈಲಿನಲ್ಲಿ ಎಂ.ಜಿ.ಎಂ. ಶಾಲಾ ಮೈದಾನದಲ್ಲಿ ರಿಸರ್ವ್ ಪೋಲೀಸ್ ಇನ್ ಸ್ಪೆಕ್ಟರ್ , ಸುಳ್ಯ ವೃತ್ತ ನಿರೀಕ್ಷಕರು , ಬೆಳ್ಳಾರೆ ಎಸ್.ಐ.ಯವರು, ಸುಬ್ರಮಣ್ಯದ ಠಾಣಾಧಿಕಾರಿಯವರು, ಮೂರೂ ಠಾಣೆಗಳ ಎ.ಎಸ್.ಐ.ಯವರು, ಹೆಡ್ ಕಾನ್ ಸ್ಟೇಬಲ್ ಗಳು, ಕಾನ್ ಸ್ಟೇಬಲ್ಗಳು ಈ ತರಬೇತಿಯಲ್ಲಿ ಭಾಗವಹಿಸಿದ್ದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.