HomePage_Banner
HomePage_Banner

ನ. 16 ರಂದು ಪಂಜದಲ್ಲಿ ಜಾಕೆ ಮಾಧವ ಗೌಡ ಸಪ್ತತಿ ಸಂಭ್ರಮ

 

ಮೆರವಣಿಗೆ, ಸಾಕ್ಷ್ಯಚಿತ್ರ ಬಿಡುಗಡೆ, ಅಭಿನಂದನೆ, ಸಾಂಸ್ಕೃತಿಕ ಕಾರ್ಯಕ್ರಮ

ಜಯಪ್ರಕಾಶ್ ಹೆಗ್ಡೆ, ರಾಜೇಂದ್ರಕುಮಾರ್, ಮೋಹನ್ ಆಳ್ವ, ಅಂಗಾರ, ಬಿಳಿಮಲೆ, ಡಾ. ಚಿದಾನಂದ ಭಾಗಿ

ನಾಡಿನ ಹಿರಿಯ ಸಹಕಾರಿ, ಸಾಮಾಜಿಕ ಧುರೀಣ ಜಾಕೆ ಮಾಧವ ಗೌಡರಿಗೆ 7೦ ವರ್ಷಗಳು ತುಂಬಿದ ಹಿನ್ನಲೆಯಲ್ಲಿ ಅವರನ್ನು ಅಭಿನಂದಿಸಿ ಸನ್ಮಾನಿಸುವ ಜಾಕೆ ಸಪ್ತತಿ ಕಾರ್ಯಕ್ರಮವು ನ. 16 ರಂದು ಅವರ ಅಭಿಮಾನಿಗಳು ಮತ್ತು ಹಿತೈಷಿಗಳ ವತಿಯಿಂದ ಪಂಜದಲ್ಲಿ ನಡೆಯಲಿದೆ.

ಅಭಿನಂದನಾ ಸಮಿತಿ ಅಧ್ಯಕ್ಷ ಪರಮೇಶ್ವರ ಗೌಡ ಬಿಳಿಮಲೆ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ಜಾಕೆ ಮಾಧವ ಗೌಡರು ಹಿರಿಯ ಮುತ್ಸದ್ಧಿಯಾಗಿ ರಾಜಕೀಯ, ಸಾಮಾಜಿಕ, ಸಹಕಾರ, ಸಾಹಿತ್ಯ ಸಂಘಟನೆ ಸೇರಿದಂತೆ ಸಮಾಜಕ್ಕೆ ನಾನಾ ರೀತಿಯಲ್ಲಿ, ನಾನಾ ಕ್ಷೇತ್ರಗಳಲ್ಲಿ ಕೊಡುಗೆ ನೀಡಿ ಮಾದರಿಯಾಗಿದ್ದಾರೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾಗಿ, ಸುಳ್ಯ ಎಪಿಎಂಸಿ ಅಧ್ಯಕ್ಷರಾಗಿ, ಸುಳ್ಯ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಆಳ್ವಾಸ್ ನುಡಿಸಿರಿ ಘಟಕದ ಅಧ್ಯಕ್ಷರಾಗಿ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಕಲ್ಮಡ್ಕ ಹಾಗೂ ಪಂಬೆತ್ತಾಡಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಅವರು ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿ ಅವರನ್ನು ಅಭಿನಂದಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.

ನ. ೧೬ರಂದು ಸಂಜೆ ೪ ಗಂಟೆಗೆ ಪಂಜ ಸಹಕಾರಿ ಸಂಘದ ಬಳಿಯಿಂದ ಮೆರವಣಿಗೆ ನಡೆಯಲಿದ್ದು, ಪಂಜ ಗ್ರಾ.ಪಂ. ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. ಸಂಜೆ ೫.೪೦ಕ್ಕೆ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ. ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸ್ಥಾಪಕಾಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸಮಾರಂಭ ಉದ್ಘಾಟಿಸಲಿದ್ದಾರೆ. ಜಾಕೆ ಮಾಧವ ಗೌಡರನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಸನ್ಮಾನಿಸಲಿದ್ದು, ನವದೆಹಲಿ ಜವಾಹರಲಾಲ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಪುರುಷೋತ್ತಮ ಬಿಳಿಮಲೆ ಅಭಿನಂದನಾ ಭಾಷಣ ಮಾಡಲಿದ್ದಾರೆ.
ಜಾಕೆಯವರ ಕುರಿತು ನಿರ್ಮಿಸಲಾದ ಸಾಕ್ಷ್ಯಚಿತ್ರವನ್ನು ಶಾಸಕ ಎಸ್.ಅಂಗಾರ ಚಿಡುಗಡೆ ಮಾಡಲಿದ್ದು, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮುಖ್ಯಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಮಂಗಳೂರಿನ ಹೆಜ್ಜೆನಾದ ತಂಡದಿಂದ ಜ್ಞಾನ ಐತಾಳ್ ನಿರ್ದೇಶನದಲ್ಲಿ ನೃತ್ಯ ವೈಭವ ನಡೆಯಲಿದೆ. ಬಳಿಕ ಸಹಭೋಜನ ನಡೆಯಲಿದೆ.
ಈ ಸ್ಮರಣೀಯ ಕಾರ್ಯಕ್ರಮದಲ್ಲಿ ಜಾಕೆ ಮಾಧವ ಗೌಡರ ಅಭಿಮಾನಿಗಳು ಹಾಗೂ ಹಿತೈಷಿಗಳು ಭಾಗವಹಿಸಬೇಕೆಂದು ಅವರು ವಿನಂತಿಸಿದರು.

ಅಭಿನಂದನಾ ಸಮಿತಿ ಪ್ರಧಾನ ಕಾರ್ಯದರ್ಶಿ
ಶಶಿಧರ ಪಳಂಗಾಯ, ಕೋಶಾಧಿಕಾರಿ
ಸುರೇಶ್‌ಕುಮಾರ್ ನಡ್ಕ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.