HomePage_Banner
HomePage_Banner

ಸುಳ್ಯ ನಗರ ಪಂಚಾಯತ್‌ಗೆ ಡಿಸಿ ಸಿಂಧೂ ರೂಪೇಶ್ ಭೇಟಿ

ಶೆಡ್‌ನೊಳಗಿರುವ ಕಸ ವಾರದೊಳಗೆ ವಿಲೇಗೆ ಜಿಲ್ಲಾಧಿಕಾರಿ ಸೂಚನೆ

ಇಂದು ಸುಳ್ಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ರವರು ನಗರ ಪಂಚಾಯತ್‌ಗೆ ಭೇಟಿ ನೀಡಿ ಶೆಡ್‌ನಲ್ಲಿ ಸಂಗ್ರಹಿಸಲಾಗಿರುವ ಕಸವನ್ನು ವೀಕ್ಷಿಸಿದರಲ್ಲದೆ, ವಾರದೊಳಗೆ ವಿಲೇ ಮಾಡುವಂತೆ ನ.ಪಂ.ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಳಿಗ್ಗೆ ಸುಳ್ಯ ತಾಲೂಕು ಕಚೇರಿಗೆ ಆಗಮಿಸಿದ ಜಿಲ್ಲಾಧಿಕಾರಿಯವರಿಗೆ ತಹಶೀಲ್ದಾರ್ ಕುಂಞಿ ಅಹಮ್ಮದ್ ಸುಳ್ಯ ನಗರದ ತ್ಯಾಜ್ಯ ವಿಲೇವಾರಿಯಲ್ಲಾಗುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಅಲ್ಲಿಗೆ ನ.ಪಂ. ಮುಖ್ಯಾಧಿಕಾರಿ ಮತ್ತಡಿ ಹಾಗೂ ಇಂಜಿನಿಯರ್ ಶಿವಕುಮಾರ್ ಬಂದರು. ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಆಗಮಿಸಿದರು. 

 

ಜಿಲ್ಲಾಧಿಕಾರಿವರು ನ.ಪಂ. ಮುಖ್ಯಾಧಿಕಾರಿಯವರಿಂದ ಕಸ ವಿಲೇವಾರಿಯ ಕುರಿತು ಮಾಹಿತಿ ಪಡೆದರಲ್ಲದೆ ಪ್ರತಿದಿನದ ತ್ಯಾಜ್ಯವನ್ನು ಹಸಿಕಸ, ಒಣಕಸವೆಂದು ಬೇರ್ಪಡಿಸಿ ಸಂಗ್ರಹಿಸಬೇಕು, ಮತ್ತು ಅದೇ ದಿನದ ಕಸವನ್ನು ಅದೇ ದಿನ ವಿಲೇಗೆ ಕ್ರಮ ಕೈಗೊಳ್ಳಬೇಕು. ಹೀಗೇ ಸಂಗ್ರಹಿಸಿಟ್ಟರೆ ಸಮಸ್ಯೆ ಆಗುತ್ತದೆ ಎಂಬುದು ಅರಿವಿರಬೇಕು. ಈಗ ಏನು ಮಾಡಬೇಕೆಂದುಕೊಂಡಿದ್ದೀರಿ ಅದನ್ನು ಮಾಡಿ. ಕಸ ಸಮಸ್ಯೆಯನ್ನು ಸರಿಪಡಿಸಿ. ಬರ್ನಿಂಗ್ ಮೆಷಿನ್ ಏನು ಯೋಚನೆ ಮಾಡಿಕೊಂಡಿದ್ದೀರೋ ಅದನ್ನು ಪಡೆದುಕೊಂಡು ಕಾರ್ಯಪ್ರವೃತ್ತರಾಗಿ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಕಛೇರಿಯಿಂದ ಜಿಲ್ಲಾಧಿಕಾರಿಗಳು ಹೊರಟು ನಗರ ಪಂಚಾಯತ್‌ಗೆ ಬಂದರು. ಅಲ್ಲಿಯ ಕಸವನ್ನು ನೋಡಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆತ್ತಿಕೊಂಡರಲ್ಲದೆ ವಾರದೊಳಗೆ ಕಸ ವಿಲೇ ಆಗಬೇಕು ಎಂದು ಖಡಕ್ ಸೂಚನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.