HomePage_Banner
HomePage_Banner

ಪಾಲೆಪ್ಪಾಡಿ : ಘನತ್ಯಾಜ್ಯ ನಿರ್ವಹಣೆ ಕಾರ್ಯಯೋಜನೆ ಅನುಷ್ಟಾನ ಕುರಿತು ಸ್ವಚ್ಛ ಪ್ರಮುಖರ ಮತ್ತು ಸ್ವಯಂ ಸೇವಕರ ಸಭೆ

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲೆಪ್ಪಾಡಿ ಎರಡನೇ ವಾರ್ಡಿನ ಅಂಗನವಾಡಿ ಕೇಂದ್ರದಲ್ಲಿ ಜನವಸತಿವಾರು ಘನ ತ್ಯಾಜ್ಯ ನಿರ್ವಹಣಾ ಕಾರ್ಯಯೋಜನೆಯನ್ನು ಅನುಷ್ಟಾನ ಗೊಳಿಸುವ ದೃಷ್ಟಿಯಿಂದ ವಾರ್ಡ್ ವ್ಯಾಪ್ತಿಗೆ ಸಂಬಂಧಿಸಿದ ಗ್ರಾಮ ಪಂಚಾಯತ್ ಸದಸ್ಯರು,ಸ್ವಯಂಸೇವಾ ಸಂಘದ ಸದಸ್ಯರು,ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು,ಸ್ತ್ರೀ ಶಕ್ತಿ ಸಂಘದ ಸದಸ್ಯರು,ನವೋದಯ ಸ್ವಸಹಾಯ ಸಂಘ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವಸಹಾಯ ಸಂಘ,ಒಡಿಯೂರು ಸ್ವಸಹಾಯ ಸಂಘದ ಸದಸ್ಯರು,ಪ್ರಮುಖರ ಮತ್ತು ಸ್ವಚ್ಛತಾ ಸ್ವಯಂ ಸೇವಕರ ಸಮಾಲೋಚನಾ ಸಭೆಯು ನ.7 ರಂದು ನಡೆಯಿತು.

ಅರಂತೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಿವಾನಂದ ಕುಕ್ಕುಂಬಳ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಘನತ್ಯಾಜ್ಯ ನಿರ್ವಹಣೆ ಮತ್ತು ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಹಾಗೂ ವಾರ್ಡ್ ವಾರು ಸಮಿತಿ ರಚನೆ,ನೈರ್ಮಲ್ಯದಿಂದ ಆರೋಗ್ಯದಲ್ಲಿ ಆಗುವ ತೊಂದರೆಗಳ ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ 20 ಮನೆಗಳಿಗೆ ಜನವಸತಿವಾರು ಸ್ವಚ್ಛ ಪ್ರಮುಖರ ಬಗ್ಗೆ ಮತ್ತು ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳ ಪಾತ್ರದ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ರಾಜೀವಿ ಲಾವಂತಡ್ಕ,ಶಾಂತಾರಾಮ ಕಣಿಲೆಗುಂಡಿ,ಶ್ರೀಮತಿ ರೇಖಾ ಉದ್ದಂಪಾಡಿ,ಪಾಲೆಪ್ಪಾಡಿ ಮಂಜು ಶ್ರೀ ಭಜನಾ ಮಂಡಳಿ ಅಧ್ಯಕ್ಷ ದಯಾನಂದ ಕಟ್ಟತ್ತಾರು,ಶ್ರೀಮತಿ ತಾರಾ ಯು.ರಾವ್.ಉದ್ದಂಪಾಡಿ ಉಪಸ್ಥಿತರಿದ್ದು ಘನತ್ಯಾಜ್ಯ ನಿರ್ವಹಣೆಯಲ್ಲಿ ಗ್ರಾಮಸ್ಥರ ಪಾತ್ರದ ಬಗ್ಗೆ ಮಾತನಾಡಿದರು.
ಪಾಲೆಪ್ಪಾಡಿ ಮಂಜು ಶ್ರೀ ಗೆಳೆಯರ ಬಳಗದ ಪದಾಧಿಕಾರಿಗಳು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.